Categories: ಕಲಬುರಗಿ

ಬಾಲಕಿಯ ಪ್ರೇಮಪಾಶದಲ್ಲಿ ಬಿದ್ದಿದ್ದ ಹುಡುಗ: ಬರ್ತ್‌ ಡೇ ಹೆಸರಲ್ಲಿ ಕರೆಸಿ ಕೊಲೆ

ಕಲಬುರಗಿ: ಅವನು ಇನ್ನೂ 19 ವರ್ಷದ ಹುಡುಗ . ಬಿಎಸ್‌ಸಿ ನರ್ಸಿಂಗ್‌ ಎರಡನೇ ಸೆಮಿಸ್ಟರ್‌ನಲ್ಲಿ ಓದುತ್ತಿದ್ದ. ಆತ ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳ ಜತೆ ಪ್ರೇಮದಲ್ಲಿ ಬಿದ್ದು ಬೀದಿ ಹೆಣವಾಗಿದ್ದಾನೆ . ಇದು ಕಲಬುರಗಿಯ ಸರಸ್ವತಿಪುರದಲ್ಲಿ ನಡೆದ ಒಂದು ಕೊಲೆಯ ಕಥೆ.

ಬಿಎಸ್ಸಿ ನರ್ಸಿಂಗ್ ಎರಡನೇ ಸೆಮಿಸ್ಟರ್ ಓದುತ್ತಿದ್ದ ಅಭಿಷೇಕ್ ಇತ್ತೀಚಿಗಷ್ಟೇ ಪರೀಕ್ಷೆ ಕೂಡ ಬರೆದಿದ್ದ. ಅವನು ಅದೇ ವಠಾರದ ಬಾಲಕಿಯೊಬ್ಬಳ ಜತೆಗೆ ಸಲುಗೆಯಿಂದ ಇದ್ದು ಪ್ರೀತಿಯ ಬಲೆಯಲ್ಲಿ ಬಿದ್ದಿದ್ದ. ಆಕೆಯೂ ಅಷ್ಟೆ ಅವನನ್ನು ತುಂಬ ಹಚ್ಚಿಕೊಂಡಿದ್ದಳು. ಅವರಿಬ್ಬರೂ ಆಗಾಗ ಕದ್ದುಮುಚ್ಚಿ ಭೇಟಿಯಾಗುವುದು, ರಾತ್ರಿ ಹಗಲೆನ್ನದೆ ವಾಟ್ಸ್‌ ಆಪ್‌ನಲ್ಲಿ ಮೆಸೇಜ್‌ ಮಾಡುವುದು ನಡೆಯುತ್ತಿತ್ತು.

ಇದನ್ನು ಗಮನಿಸಿದ ಬಾಲಕಿ ಮನೆಯವರು ಇದನ್ನು ಆಕ್ಷೇಪಿಸಿದ್ದರು. ಇಬ್ಬರಿಗೂ ಎಚ್ಚರಿಕೆ ನೀಡಿದ್ದರು. ಆದರೆ, ಅವರಿಬ್ಬರೂ ತಮ್ಮ ಹಳೆ ಚಾಳಿ ಮುಂದುವರಿಸಿದ್ದರು.

ಈ ನಡುವೆ, ಮಾರ್ಚ್‌ ಮೂರರಂದು ಹುಡುಗಿ ಮನೆಯವರು ಒಂದು ಪ್ಲ್ಯಾನ್‌ ಮಾಡಿದರು. ಅದೇನೆಂದರೆ, ಹುಡುಗಿಯ ಕೈಯಲ್ಲಿ ಅಭಿಷೇಕ್‌ಗೆ ಕರೆ ಮಾಡಿಸಿ ʻನಮ್ಮ ಮನೆಯಲ್ಲಿ ಬರ್ತ್‌ ಡೇ ಇದೆ. ನೀನು ಬರಲೇಬೇಕುʼ ಎಂದು ಹೇಳಿಸಿದರು. ಹುಡುಗಿ ಕರೆದಿದ್ದಾಳೆ ಎಂಬ ಖುಷಿಯಲ್ಲಿ ಅಭಿಷೇಕ್‌ ಥಕ ಥಕ ಕುಣಿಯುತ್ತಾ ಆ ಮನೆಗೆ ಹೋಗಿದ್ದ.ಆಗ ಆ ಮನೆಯವರು ಮತ್ತದೇ ಪ್ರೇಮದ ಪ್ರಸ್ತಾಪ ಎತ್ತಿದ್ದಾರೆ.

ಅಲ್ಲಿ ಬರ್ತೇ ಡೇ ನಡೆಯುತ್ತಿರಲಿಲ್ಲ. ಬದಲಾಗಿ ತನ್ನ ತಿಥಿಗೆ ಸಿದ್ಧತೆ ನಡೆಯುತ್ತಿದೆ ಎಂದು ಆತನಿಗೆ ತಿಳಿಯಲು ಹೆಚ್ಚು ಹೊತ್ತು ಬೇಕಾಗಿರಲಿಲ್ಲ. ಯಾಕೆಂದರೆ ಆ ಮನೆಯವರು ಅಭಿಷೇಕ್‌ನನ್ನು ಹಿಡಿದು ಮನಸೋ ಇಚ್ಛೆ ರಾಡ್‌ನಿಂದ ಹೊಡೆದಿದ್ದರು. ಮನೆಯಲ್ಲಿ ಕೂಡಿಹಾಕಿ ರಾಡ್‌ನಿಂದ ಎರಡು ಗಂಟೆಗಳ ಕಾಲ ಆತನಿಗೆ ಥಳಿಸಿದ್ದಾರೆ. ಈ ನಡುವೆ ಬಾಲಕಿ ಅವನನ್ನು ಬಿಟ್ಟು ಬಿಡಿ. ಇನ್ನು ಅವನ ಜತೆ ಮಾತನಾಡುವುದಿಲ್ಲ ಎಂದು ಅಂಗಲಾಚಿದರೂ ಕಿರಾತಕರು ಬಿಟ್ಟಿರಲಿಲ್ಲ.

ರಾಡ್‌ಗಳ ಹೊಡೆತದಿಂದ ತತ್ತರಿಸಿ ಹೋಗಿ, ಗಂಭೀರ ಸ್ಥಿತಿಯಲ್ಲಿದ್ದ ಅಭಿಷೇಕನನ್ನು ಆ ಮನೆಯವರು ನಿರ್ಜನ ಪ್ರದೇಶದಲ್ಲಿ ಎಸೆದು ಹೋಗಿದ್ದರು. ರಾತ್ರಿ ಯಾರೋ ಗಮನಿಸಿ ಆತನನ್ನು ಜಿಮ್ಸ್‌ ಆಸ್ಪತ್ರೆಗೆ ಸೇರಿಸಿದ್ದರು. ಆದರೆ, ಆತ ಮಾರ್ಚ್‌ 5ರಂದು ಮುಂಜಾನೆ ಪ್ರಾಣ ಕಳೆದುಕೊಂಡಿದ್ದಾನೆ.

ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಬಾಲಕಿ ಸೇರಿದಂತೆ ಐದು ಜನರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಅವರ ಪೈಕಿ ನಾಲ್ವರನ್ನು ಈಗ ಬಂಧಿಸಲಾಗಿದೆ. ಅನಿಲ್ ರಾಠೋಡ್ (42), ಸಂತೋಷ್ ರಾಠೋಡ್ (34), ಸಾಗರ್ ಜಾಧವ್ (27), ಹೇಮಂತ್ ರಾಠೋಡ್ (34) ಬಂಧಿತರು.

ಇದೀಗ ಅಭಿಷೇಕ್‌ನ ಮನೆಯವರು ತಮ್ಮ ಅಮಾಯಕ ಮಗನನ್ನು ಕೊಂದವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಮನವಿ ಮಾಡಿದ್ದಾರೆ. ಅದರ ಜತೆಗೆ ತಮ್ಮ ಮಾತು ಕೇಳದೆ ಪ್ರೀತಿಯ ಹಿಂದೆ ಬಿದ್ದು ಬದುಕನ್ನೇ ಹಾಳು ಮಾಡಿಕೊಂಡ ಮನೆ ಮಗನ ಬಗ್ಗೆ ವಿಷಾದವನ್ನೂ ಹೊಂದಿದ್ದಾರೆ.

Nisarga K

Recent Posts

ಬೆಂಗಳೂರಿನಲ್ಲಿ ಭಾರಿ ಮಳೆ; ಆರ್​ಸಿಬಿ- ಡೆಲ್ಲಿ ಪಂದ್ಯ ರದ್ದು

ಐಪಿಎಲ್ 2024ರ 62 ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವೆ ಇಂದು ಸಂಜೆ…

5 mins ago

ದೇಶದ ಸಂಪೂರ್ಣ ಸಂಪತ್ತನ್ನು ಶ್ರೀಮಂತರಿಗೆ ಕೊಟ್ಟಿದ್ದಾರೆ ಮೋದಿ: ಪ್ರಿಯಾಂಕಾ ವಾಗ್ದಾಳಿ

ಇಲ್ಲಿನ ಕಾಂಗ್ರೆಸ್​ ಲೋಕಸಭಾ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದಿರುವ 'ಕೈ' ನಾಯಕ ರಾಹುಲ್ ಗಾಂಧಿ ಪರ ಪ್ರಚಾರ ಮಾಡಲು ಆಗಮಿಸಿದ ಅವರ…

31 mins ago

ಹಲ್ಲುಗಳ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?

ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹು ಮುಖ್ಯವಾಗಿದೆ.  ಗುಟ್ಕಾ, ಎಲೆಅಡಿಕೆ, ತಂಬಾಕು ಅಗೆಯುವುದರಿಂದ, ಬೀಡಿ, ಸಿಗರೇಟ್ ಸೇದುವುದರಿಂದ ಹಲ್ಲುಗಳು ನೈಜ ಹೊಳಪು…

46 mins ago

ವಿಶ್ವದಲ್ಲೇ ಮೊದಲ ಬಾರಿಗೆ ಹಂದಿ ಕಿಡ್ನಿ ಕಸಿ ಮಾಡಿಸಿಕೊಂಡಿದ್ದ ವ್ಯಕ್ತಿ ಸಾವು

ವಿಶ್ವದಲ್ಲೇ ಮೊದಲ ಬಾರಿಗೆ ಹಂದಿ ಕಿಡ್ನಿ ಕಸಿ ಮಾಡಿಸಿಕೊಂಡಿದ್ದ 62 ವರ್ಷದ ರಿಚರ್ಡ್​ ಸ್ಲಾಯ್​​ಮನ್ ನಿಧನರಾಗಿದ್ದಾರೆ. ಕಳೆದ ಮಾರ್ಚ್​​ನಲ್ಲಿ ಅವರು…

1 hour ago

ಎಸ್‌ಐಟಿಯವರು ಅಪರಾಧಿಗಳನ್ನ ಬಂಧಿಸುತ್ತಿಲ್ಲ: ಬಸವರಾಜ ಬೊಮ್ಮಾಯಿ

ಪ್ರಜ್ವಲ್ ಪ್ರಕರಣದ ತನಿಖೆ ನಡೆಯುತ್ತಿರುವ ರೀತಿ ಸರಿ ಇಲ್ಲ. ಎಸ್‌ಐಟಿಯ ತನಿಖೆಯ ದಿಕ್ಕು ತಪ್ಪುತ್ತಿದೆ. ಅಪರಾಧಿಗಳನ್ನ ಎಸ್‌ಐಟಿಯವರು ಬಂಧಿಸುತ್ತಿಲ್ಲ. ಎಂದು…

1 hour ago

ಅಮ್ಮನ ಮೇಲಿನ ಪ್ರೀತಿಗಾಗಿ ಹೆಸರು ಬದಲಿಸಿಕೊಂಡ ವಿಜಯ್ ಸೂರ್ಯ

ತಾಯಿ ಎಂದರೆ ಮಮತೆಯ ಆಗರ, ತಾಯಿ ಎಂದರೆ ಕರುಣೆಯ ಕಡಲು, ತಾಯಿ ಎಂದರೆ ಪ್ರೀತಿಯ ಸೆಲೆ... ಹೀಗೆ ತಾಯಿಯ ಬಗ್ಗೆ…

2 hours ago