Categories: ಕಲಬುರಗಿ

ವಿಚಾರದಂತೆ ಮನುಷ್ಯನ ವ್ಯಕ್ತಿತ್ವ ರೂಪುಗೊಳ್ಳುತ್ತದೆ: ಲೋಕಾಯುಕ್ತ ನ್ಯಾ. ಪಾಟೀಲ್

ಕಲಬುರಗಿ: ನಮ್ಮ ಗುರಿಗಳಿಗೆ ನಿರ್ದಿಷ್ಟ ಆಕಾರ ನೀಡುವ ದೈವತ್ವ ನಮ್ಮಲ್ಲಿಯೇ ಇದ್ದು, ತನ್ನ ವಿಚಾರದಂತೆ ಮನುಷ್ಯನ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂದು ಕ‌ರ್ನಾಟಕ ರಾಜ್ಯ ಲೋಕಾಯುಕ್ತ ನ್ಯಾ.‌ಬಿ.ಎಸ್. ಪಾಟೀಲ್ ಹೇಳಿದರು.

ಇಲ್ಲಿನ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಏಳನೇ ಘಟಿಕೋತ್ಸವ ಭಾಷಣ ಮಾಡಿದ ಅವರು, ವಿಚಾರದಂತೆ ವ್ಯಕ್ತಿತ್ವ ಎಂಬುದನ್ನು ಉಪನಿಷತ್ತುಗಳಲ್ಲಿ ಹೇಳಲಾಗಿದೆ.ಅದರಂತೆ ನಿನ್ನ ಆಲೋಚನಯಂತೆ ನಿನ್ನ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂದು ಮಹಾತ್ಮ ಬುದ್ದನ ಬರಹದಲ್ಲಿ ಹೇಳಲಾಗಿದೆ ಎಂದು ವಿವರಣೆ ನೀಡಿದರು.

ಪ್ರಮುಖವಾಗಿ ತತ್ವ ಜ್ಞಾನಿ ಮಾರ್ಕಸ್ ಆರಿಲೀಯಸ್ ಸಹ ನಿಮ್ಮ ಜೀವನ ನಿಮ್ಮ ಆಲೋಚನೆಗಳ ಪ್ರತಿಸ್ಪಂದನವಾಗಿದೆ ಎಂದು ಹೇಳಿದ್ದು, ಆದ್ದರಿಂದ ಒಳ್ಳೆಯ ಆಲೋಚನೆಗಳು ಒಳ್ಳೆಯ ಫಲವನ್ನು ನೀಡುತ್ತವೆ. ಕೆಟ್ಟ ವಿಚಾರಗಳು ಕೆಟ್ಟ ಫಲವನ್ನು ನೀಡುತ್ತವೆ ಎಂಬುದನ್ನು ಎಲ್ಲರೂ ಅರಿತುಕೊಳ್ಳಬೇಕೆಂದರು.

ನಮ್ಮ ಆಲೋಚನೆಗಳು ನಮ್ಮ ಕ್ರಿಯೆಗಳಿಗಿಂತ ಮುಂಚಿತವಾಗಿ ಸಂಭವಿಸುತ್ತವೆ. ಹೀಗಾಗಿ ನಮ್ಮ ಕ್ರಿಯೆಗಳ ಕುರಿತಾದ ನಮ್ಮ ಆಲೋಚನೆಗಳು ಸ್ಪಷ್ಟವಾಗಿರಬೇಕು. ಆದ್ದರಿಂದ ನಮ್ಮ ಆಲೋಚನೆಗಳ ಮೇಲೆ ನಿಗಾ ವಹಿಸುವುದು ನಮ್ಮ ಕಾರ್ಯಕ್ಷಮತೆ ಮತ್ತು ಜೀವನದ ಗುಣಮಟ್ಟದ ಮೂಲಭೂತ ಸಂಗತಿಯಾಗಿದೆ. ಇದೇ ಕಾರಣಕ್ಕೆ ನಮ್ಮ ಹಿರಿಯರು ಮತ್ತು ಶಿಕ್ಷಕರುಎಚ್ಚರಿಕೆಯಿಂದಿರಿ, ಜಾಗೃತರಾಗಿರಿ, ಜಾಗರೂಕರಾಗಿರಿ, ಪ್ರಜ್ಞಾ ಪೂರ್ವಕವಾಗಿರಿ ಎಂದು ಸಲಹೆ ನೀಡುವುದನ್ನು ಕೇಳಿದ್ದೇವೆ. ಆದ್ದರಿಂದ ನಾವೆಲ್ಲವನ್ನು ಅರಿತು ಮುನ್ನಡೆಯಬೇಕು ಎಂದರು.

ನಾವು ನಮ್ಮ ಆಲೋಚನೆಗಳ ಮೇಲೆ ಕಟ್ಟುನಿಟ್ಟಾದ ಎಚ್ಚರ ವಹಿಸದಿದ್ದರೆ ದುರಾಸೆ, ಸ್ವಾರ್ಥ, ವಂಚನೆ, ಕುಚೇಷ್ಟೆಯನ್ನು ಉತ್ತೇಚಿಸುವಂತಹ ಭ್ರಷ್ಟ ಮತ್ತು ಅನೈತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರಚೋದನೆ ನೀಡುವಂತಹ ನೆಗೆಟಿವ್ ಆಲೋಚನೆಗಳು ನಮ್ಮಲ್ಲಿ ಉಂಟಾಗುತ್ತವೆ. ಇದರ ಪರಿಣಾಮ ಇಂದಿನ ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ಕಾಣಬಹುದಾಗಿದೆ ಎಂದು ನ್ಯಾ. ಬಿ.ಎಸ್. ಪಾಟೀಲ್ ಹೇಳಿದರು.

Ashika S

Recent Posts

ರೈತನ ಆರು ತಿಂಗಳ ಶ್ರಮ ಅರ್ಧಗಂಟೆಯಲ್ಲೇ ಹೋಮ

ಇಂದು ಸಂಜೆ ಸುರಿದ ಬಾರಿ ಮಳೆಗೆ ರೈತ ಬೆಳೆದಿದ್ದ ಬಾಳೆ ಫಸಲು ಸಂಪೂರ್ಣವಾಗಿ ನಾಶವಾಗಿರುವ ಘಟನೆ ಚಾಮರಾಜನಗರ ತಾಲೂಕಿನ ಉತ್ತುವಳ್ಳಿಯಲ್ಲಿ…

25 mins ago

ಬಾರ್ ಗೆ ನುಗ್ಗಿದ ಕಳ್ಳರು: 60 ಲೀಟರ್ ಮದ್ಯ ಕಳ್ಳತನ

ಜಿಲ್ಲೆಯ ಹನೂರು ಪಟ್ಟಣದ ಬಂಡಳ್ಳಿ ಮುಖ್ಯ ರಸ್ತೆಯಲ್ಲಿರುವ ಅಮೃತ್ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ತಡ ರಾತ್ರಿ ಕಳ್ಳರ ತಂಡ…

39 mins ago

ಬಾಳೆ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಕೋರಿ ರಾಷ್ಟ್ರೀಯ ಹೆದ್ದಾರಿ ಬಂದ್ ಚಳುವಳಿ

ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ನೇತೃತ್ವದಲ್ಲಿ ಚಾಮರಾಜನಗರದ ಸತ್ಯಮಂಗಲಂ ಮುಖ್ಯ ರಸ್ತೆಯಲ್ಲಿ ಜಮಾಯಿಸಿದ ಸಂಘದ ಪದಾಧಿಕಾರಿಗಳು…

54 mins ago

ಗಾಳಿ ಸಮೇತ ಭಾರಿ ಮಳೆ : ನೆಲಕಚ್ಚಿದ ಮರಗಳು

ಧಾರವಾಡದಲ್ಲಿ ಶನಿವಾರ ಗಾಳಿ ಸಮೇತ ಮಳೆಯಾಗಿದ್ದು, ಅಲ್ಲಲ್ಲಿ ಮರಗಳು ನೆಲಕಚ್ಚಿದ ಬಗ್ಗೆ ವರದಿಯಾಗಿದೆ. ಬೆಳಿಗ್ಗೆಯಿಂದ ವಿಪರೀತ ಬಿಸಿಲಿನ ವಾತಾವರಣವಿತ್ತು

1 hour ago

ಮನುಷ್ಯನ ಆರೋಗ್ಯಕ್ಕೆ ಕ್ರೀಡೆಗಳು ಅತ್ಯಂತ ಸಹಕಾರಿ : ತಮ್ಮಯ್ಯ

ಕ್ರೀಡೆಗಳು ಮನುಷ್ಯನ ಆರೋಗ್ಯವನ್ನು ಸುಸ್ಥಿರವಾಗಿ ಕಾಪಾಡುವ ಜೊ ತೆಗೆ ಮನಸ್ಸನ್ನು ಹತೋಟಿಗಿಡುವ ಬಹುದೊಡ್ಡ ಸಾಧನ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ…

1 hour ago

ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಯಾಗಬೇಕು- ತಮ್ಮಯ್ಯ

ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಯಾಗಬೇಕು. ಆ ನಿಟ್ಟಿನಲ್ಲಿ ಸ್ವಯಂ ಉದ್ಯೋಗ ಕೈಗೊಳ್ಳಬೇಕೆಂದು ಶಾಸಕ ಎಚ್.ಡಿ. ತಮ್ಮಯ್ಯ ಅವರು ಹೇಳಿದ್ದಾರೆ. ನಗರದ ಬಸವನಹಳ್ಳಿಯ…

2 hours ago