News Karnataka Kannada
Tuesday, April 30 2024
ಕಲಬುರಗಿ

ಕಲಬುರಗಿ ವಿಮಾನ ನಿಲ್ದಾಣದ ಟರ್ಮಿನಲ್‌ಗೆ ₹3.81 ಕೋಟಿ

Rs 3.81 crore for Kalaburagi airport terminal
Photo Credit : News Kannada

ಕಲಬುರಗಿ: ಇಲ್ಲಿನ ಕಲಬುರಗಿ ವಿಮಾನ ನಿಲ್ದಾಣ ಟರ್ಮಿನಲ್ ಕಟ್ಟಡದ ಒಳಾಂಗಣದ ಮರುನಿರ್ಮಾಣದ ಕಾಮಗಾರಿಗೆ ₹3.81 ಕೋಟಿ ಬಿಡುಗಡೆಯಾಗಿದೆ.

ವಿಮಾನ ನಿಲ್ದಾಣದ ಕಾರ್ಯಾಚರಣೆ ಆರಂಭವಾಗಿ ಇದೇ ನ.22ಕ್ಕೆ ನಾಲ್ಕು ವರ್ಷಗಳು ತುಂಬಲಿವೆ. ರನ್‌ವೇ ಮೇಲ್ಪದರು ಮರು ನಿರ್ಮಾಣದ ಬೆನ್ನಲ್ಲೇ ಟರ್ಮಿನಲ್ ಕಟ್ಟಡದ ಒಳಾಂಗಣದ ಮರುನಿರ್ಮಾಣವೂ ಕೈಗೆತ್ತಿಕೊಳ್ಳಲಾಗುತ್ತಿದೆ.

ಈ ಬಗ್ಗೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ(ಎಎಐ) ಟೆಂಡರ್ ಕರೆದಿದ್ದು, 2 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಹೇಳಿದೆ.

‘ಈಗಿರುವ ಟರ್ಮಿನಲ್‌ ಕೆಡವಿ ನೂರು ಪ್ರಯಾಣಿಕರ ಸಾಮರ್ಥ್ಯದ ಹೊಸ ಟರ್ಮಿನಲ್ ಕಟ್ಟಡ ನಿರ್ಮಾಣ ಮಾಡುವಂತೆ ನಿಲ್ದಾಣ ಅಧಿಕಾರಿಗಳು ಎಎಐಗೆ ಮನವಿ ಮಾಡಿದ್ದರು. ಇದಕ್ಕಾಗಿ ಸುಮಾರು ₹50 ಕೋಟಿ ತಗುಲಬಹುದು ಎಂದಿದ್ದರು. ಪ್ರಯಾಣಿಕರ ಸಂಖ್ಯೆ ಕಡಿಮೆ ಇದೆ. ಹೊಸ ಕಟ್ಟಡ ಆಗುವುದಿಲ್ಲ’ ಎಂದು ನಮ್ಮ ಮನವಿ ತಿರಸ್ಕರಿಸಿದ್ದಾರೆ ಎಂದು ನಿಲ್ದಾಣ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು