Categories: ಕಲಬುರಗಿ

ದೇವಸ್ಥಾನಗಳಿಗೆ ಬಿಲ್ವಪತ್ರೆ-ಹೂವು ಬರ್ತಾವೆ, ಆದ್ರೆ ನನಗೆ ಪೊಲೀಸ್ ನೋಟಿಸ್ ಬರುತ್ತೆ

ಕಲಬುರಗಿ: ಶಿವರಾತ್ರಿ ಸೇರಿದಂತೆ ಇನ್ನಿತರ ಹಬ್ಬಗಳು ಬಂದರೆ ದೇವಸ್ಥಾನಗಳಿಗೆ ಬಿಲ್ವಪತ್ರೆ ಮತ್ತು ಹೂವು ಬರುತ್ತವೆ. ಆದರೆ ನನಗೆ ಪೊಲೀಸರಿಂದ ನೋಟಿಸ್ ಬರುತ್ತದೆ ಎಂದು ಆಂದೋಲದ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದ್ದಾರೆ.

ಜಿಲ್ಲೆಯ ಆಳಂದ ಪಟ್ಟಣದಲ್ಲಿ ಮಾತನಾಡಿದ ಅವರು, ಹಿಂದೂತ್ವದ ಸೂನಾಮಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಎದ್ದಿದೆ‌. ಹಿಂದೂ ಧರ್ಮದ ಉಳಿವಿಗಾಗಿ ನಾವು ಹೋರಾಟ ಆರಂಭಿಸಿದ್ದೇವೆ. ಹಿಂದೂತ್ವದ ಗೆಲುವು ಬಿಜೆಪಿ ಹಿರಿಯ ನಾಯಕರಿಗೆ ಅರ್ಪಿಸುತ್ತೇವೆ. 2022 ರಲ್ಲಿ ಆಳಂದದಲ್ಲಿ ದೊಡ್ಡಮಟ್ಟದ ದಂಗಲ್ ಎಬ್ಬಿಸಲಾಗಿತ್ತು‌. ನಮ್ಮ ಮೇಲೆ ದಾಳಿ ಮಾಡಲು ಬಾಬರನ ಮೊಮ್ಮಕ್ಕಳು ಹೊಂಚು ಹಾಕಿದ್ದರು‌. 100 ಜನರಿಗೆ ಪೂಜೆ ಮಾಡಲು ವಕ್ಫ್ ಬೋರ್ಡ್​​ ಗೆ ಅರ್ಜಿ ಸಲ್ಲಿಸಿದ್ದೆವು ಎಂದು ಹೇಳಿದ್ದಾರೆ.

ಆಳಂದ ಪಟ್ಟಣದ ಶ್ರೀ ರಾಘವ ಚೈತನ್ಯ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಅನುಮತಿ ಕೋರಿದ್ದೆವು. ಆದರೆ ನಮ್ಮ ಮನವಿಯನ್ನ ವಕ್ಫ್ ಬೋರ್ಡ್ ತಿರಿಸ್ಕರಿಸಿತ್ತು. ಆದರೆ ಕಲಬುರಗಿ ಹೈಕೋರ್ಟ್ ಪೀಠ 15 ಜನರಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಿತ್ತು. ಭಾರತ ಮಾತೆ ಜನ್ಮಕೊಟ್ಟಂತಹ ಈ ರಕ್ತ ಯಾರಿಗೂ ಹೆದರಲ್ಲ ಎಂದು ಕಿಡಿಕಾರಿದ್ದಾರೆ.

ಸಿದ್ದರಾಮಯ್ಯರ ಗ್ಯಾರಂಟಿಗಳನ್ನ ಬೆನ್ನತ್ತಿ ಜನ ಎಲ್ಲವನ್ನ ಕಳೆದುಕೊಳ್ಳುತ್ತಿದ್ದಾರೆ. ಹೈಕೋರ್ಟ್‌ನಲ್ಲಿ ವಾದ ಮಂಡಿಸಿ ದರ್ಗಾದಲ್ಲಿ ಶ್ರೀ ರಾಘವ ಚೈತನ್ಯ ದೇವಸ್ಥಾನ ಸ್ಥಾಪಿಸುತ್ತೇವೆ. ಆ ದೇವಸ್ಥಾನವನ್ನ ಯುಪಿ ಸಿಎಂ ಯೋಗಿ ಆದಿತ್ಯಾನಾಥ್‌ರಿಂದ ಉದ್ಘಾಟಿಸಲಾಗುವುದು.

ನಾನು ದ್ವೇಷದ ಭಾಷಣ ಮಾಡುವುದಿಲ್ಲ. ನಾನು ದೇಶದ ಭಾಷಣ ಮಾಡುತ್ತಿದ್ದೇನೆ‌.ರಾಹುಲ್ ಬಾಬಾ ಪ್ರಧಾನಿಯಾಗಿದ್ದರೆ ಮೇಲೆ ರಾಮಮಂದಿರ, ಕೆಳಗೆ ಬಾಬರ್​ನ ಮಂದಿರ ಮಾಡುತ್ತಿದ್ದರು. ಪಾಕಿಸ್ತಾನ್ ಜಿಂದಾಬಾದ್ ಹೇಳೆ ಇಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದರು. ಆದರೆ ಪಾಕಿಸ್ತಾನ್ ಜಿಂದಾಬಾದ್ ಕೂಗಿದ್ದು ನಿಜವಾಗಿದೆ. ಇದೀಗ ಪ್ರಿಯಾಂಕ್ ಖರ್ಗೆರ ಮುಖ ಕಪ್ಪೆ ಥರ ಆಗಿದೆ ಎಂದು ವಾಗ್ದಾಳಿ ಮಾಡಿದ್ದಾರೆ.

Ashika S

Recent Posts

ಪ್ರೀತಿಸಿದ ಹುಡುಗಿ ಆತ್ಮಹತ್ಯೆಗೈದ ಬೆನ್ನಲ್ಲೇ ಹುಡುಗನೂ ಆತ್ಮಹತ್ಯೆ

ಪ್ರೀತಿಸಿದ ಹುಡುಗಿ ಆತ್ಮಹತ್ಯೆಗೈದ ಬೆನ್ನಲ್ಲೇ ಹುಡುಗನೂ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಅತಿಕಾರಿಬೆಟ್ಟು ನಿವಾಸಿ 20 ವರ್ಷದ ಕಾರ್ತಿಕ್ ಪೂಜಾರಿ…

11 mins ago

ಮಸೀದಿಯೊಳಗೆ ಅರೆನಗ್ನ ಸ್ಥಿತಿಯಲ್ಲಿ ಮಹಿಳೆಯ ಡೆಡ್‌ಬಾಡಿ ಪತ್ತೆ

ತಾಜ್‌ಮಹಲ್‌ ಸಮೀಪದ ಮಸೀದಿವೊಂದರಲ್ಲಿ ಘೋರ ಕೃತ್ಯ ನಡೆದಿದ್ದು ಅರೆನಗ್ನ ಸ್ಥಿತಿಯಲ್ಲಿ 22 ವರ್ಷದ ಮಹಿಳೆಯ ಶವ ಪತ್ತೆಯಾಗಿದೆ. ಈ ಘಟನೆ…

31 mins ago

ಮಾಜಿ ಸಂಸದ ಎಲ್​ ಆರ್ ಶಿವರಾಮೇಗೌಡ ಮನೆ ಮೇಲೆ ಮೊಟ್ಟೆ ದಾಳಿ

ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಕೇಸ್‌ ಸಂಬಂಧಿಸಿದಂತೆ ಎಚ್‌ ಡಿ ದೇವೆಗೌಡ ಅವರ ವಿರುದ್ದ ಆಡಿಯೋ ಒಂದರಲ್ಲಿ ಅವಹೇಳನವಾಗಿ ನಿಂಧಿಸಿದ ಮಾಜಿ…

57 mins ago

ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಮೃತ್ಯು; ಪ್ರಧಾನಿ ಮೋದಿ ಸಂತಾಪ

ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಪ್ರಯಾಣಿಸುತ್ತಿದ್ದ ಬೆಂಗಾವಲು ಪಡೆ ಹೆಲಿಕಾಪ್ಟರ್‌ಗಳ ಪೈಕಿ ಒಂದು ಪತನಗೊಂಡಿದ್ದು, ಅಪಘಾತದಲ್ಲಿ ಇರಾನ್‌ ಅಧ್ಯಕ್ಷ…

1 hour ago

‘ರೇವ್ ಪಾರ್ಟಿ’ ಮೇಲೆ ಸಿಸಿಬಿ ದಾಳಿ; ನಟಿ ಹೇಮಾ ಸೇರಿ ಐವರು ಅರೆಸ್ಟ್

ಆರ್ ಫಾರ್ಮ್ ಹೌಸ್ ನಲ್ಲಿ ರೇವ್​ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಪಾರ್ಟಿ ಆಯೋಜಕ ವಾಸು,…

1 hour ago

ಆನೆಯ ಕೂಡುದಂತಕ್ಕೆ ಕತ್ತರಿ ಪ್ರಯೋಗ ಸಕ್ಸಸ್

ಬಂಡೀಪುರದಲ್ಲಿ ಸೆರೆಹಿಡಿಯಲಾಗಿದ್ದ ಆನೆಯ ಕೂಡುದಂತಕ್ಕೆ ಕತ್ತರಿ ಪ್ರಯೋಗ ಮಾಡಿರುವುದು ಸಕ್ಷಸ್ ಆಗಿದೆ. ಕೂಡು ದಂತದಿಂದ ಆಹಾರ ಸೇವಿಸಲಾಗದೆ ಪರದಾಡುತ್ತಿದ್ದ ಆನೆ…

1 hour ago