Categories: ಕಲಬುರಗಿ

ಹಣೆಗೆ ಕುಂಕುಮ ಇಡಲು ನಿರಾಕರಿಸಿದ ವಿಪಕ್ಷ ನಾಯಕ ಆರ್.ಅಶೋಕ್: ಅಸಲಿ ಕಾರಣ ಏನು ಗೊತ್ತಾ?

ಕಲಬುರಗಿ: ವಿಪಕ್ಷ ನಾಯಕ ಆರ್.ಅಶೋಕ್ ಅವರು ತಮ್ಮ ಹಣೆಗೆ ಕುಂಕುಮ ಹಾಕಲು ನಿರಾಕರಿಸಿದ ಘಟನೆ ನಡೆದಿದೆ. ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಸುಲೆಪೇಟ್ ಬಿಜೆಪಿ ಕಚೇರಿಗೆ ಭೇಟಿ ನೀಡಿದಾಗ ಹಿರಿಯ ಮುಖಂಡರೊಬ್ಬರು ಕುಂಕುಮ ಹಚ್ಚಲು ಮುಂದಾದಾಗ ನಿರಾಕರಿಸಿದ್ದಾರೆ.

ಸಿದ್ದರಾಮಯ್ಯ ಹಿಂದೂ ವಿರೋಧಿ, ಕೇಸರಿ ಕಂಡರೆ ಆಗಲ್ಲ, ಕೇಸರಿ ಶಲ್ಯ ಧರಿಸಲ್ಲ, ಕುಂಕುಮ ಹಾಕಲ್ಲ ಎಂದೆಲ್ಲಾ ಟೀಕಿಸುವ ರಾಜ್ಯದ ಬಿಜೆಪಿ ನಾಯಕರು ತಮ್ಮ ನಾಯಕನ ಈ ನಡೆಗೆ ಏನು ಹೇಳುತ್ತಾರೆ.

ಈ ಹಿಂದೆ ಸದನದಲ್ಲಿ ತಮ್ಮನ್ನು ಹೊಗಳುವ ಭರದಲ್ಲಿ ಬಿಜೆಪಿಯನ್ನು ಬೆಂಬಲಿಸುವ ಬಜರಂಗದಳದ ಕಾರ್ಯಕರ್ತರ ವಿರುದ್ಧ “ನಾನು ಗೃಹಸಚಿವ ಆಗಿದ್ದಾಗ ಪಬ್‌ನಲ್ಲಿ ಗಲಾಟೆ ಆದಾಗ ಗೂಂಡಾ ಕಾಯ್ದೆ ಹಾಕಿದ್ದೆ” ಎಂದು ಹೇಳಿದ್ದರು. ಆ ಮೂಲಕ ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತಿದ್ದ ಅವರು ಬಜರಂಗದಳ ಕಾರ್ಯಕರ್ತರ ಕ್ಷಮೆ ಕೇಳಿದ್ದರು. ಇದೀಗ ಕುಂಕುಮ ಹಣೆಗೆ ಇಡಲು ನಿರಾಕರಿಸಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಕಚೇರಿಗೆ ಆಗಮಿಸಿದ ಅಶೋಕ್ ಅವರಿಗೆ ಬಿಜೆಪಿ ಮುಖಂಡರು ಹಾರ ಹಾಕಿ ಸ್ವಾಗತಿಸಲು ಮುಂದಾದರು. ಈ ವೇಳೆ ಎರಡು ಹಾರಗಳನ್ನು ತಾವು ಹಾಕಿಕೊಳ್ಳದೆ ಬಿಜೆಪಿ ಹಿರಿಯ ಮುಖಂಡ ಡಾ ವಿಶ್ವನಾಥ್ ಪವಾರ್ ಮತ್ತು ಇನ್ನೊಬ್ಬರಿಗೆ ಹಾಕಿ ಗೌರವಿಸಿದರು.

ಈ ನಡುವೆ ಡಾ ವಿಶ್ವನಾಥ್ ಪವಾರ್ ಅವರು ಅಶೋಕ ಅವರ ಹಣೆಗೆ ಕುಂಕುಮ ಇಡಲು ಮುಂದಾಗಿದ್ದಾರೆ. ಆದರೆ ಅಶೋಕ ಅವರು ಕುಂಕುಮ ಹಚ್ಚದಂತೆ ತಡೆದಿದ್ದಾರೆ. ಬಳಿಕ ವಿಶ್ವನಾಥ್ ಶಾಲು ಹಾಕಿ ಸನ್ಮಾನಿಸಿದರು.

Ashika S

Recent Posts

ಆಟೋ ರಿಕ್ಷಾ ಡಿಕ್ಕಿ ಹೊಡೆದು ಪಾದಚಾರಿ ಸಾವು

ಸಂಪ್ಯದಲ್ಲಿ ಆಟೋ ರಿಕ್ಷಾವೊಂದು ಡಿಕ್ಕಿಯಾಗಿ ಪಾದಚಾರಿಯಾಗಿದ್ದ ನಿವೃತ ಗಣಿತ ಶಿಕ್ಷಕ ಮರಿಕೆ ನಿವಾಸಿ ಸೂರ್ಯನಾರಾಯಣ ಕಾರಂತ (80.ವ)ರವರು ಮೃತಪಟ್ಟ ಘಟನೆ…

8 mins ago

100ರ ಮುಖ ಬೆಲೆಯ ಹಳೆ ಮಾದರಿ ನೋಟು ರದ್ದಾಗದಿದ್ದರೂ ಚಲಾವಣೆಗೆ ಹಿಂದೇಟು

ತಾಲ್ಲೂಕಿನಲ್ಲಿ ಸದ್ಯ ಚಲಾವಣೆಯಲ್ಲಿರುವ ಯಾವುದೇ ನೋಟು ಬಂದ್ ಆಗದಿದ್ದರೂ ₹100ರ ಮುಖ ಬೆಲೆಯ ಹಳೆ ಮಾದರಿ ನೋಟು ಹಾಗೂ ₹10…

18 mins ago

ಇಂದಿನ ಆರ್​​​ಸಿಬಿ, ಪಂಜಾಬ್​​ ನಡುವಿನ ಐಪಿಎಲ್​​ ಪಂದ್ಯ ರದ್ದು?

ಕಳೆದ ಮೂರು ದಿನಗಳಿಂದ ಇಡೀ ದೇಶಾದ್ಯಂತ ಭಾರೀ ಮಳೆಯಾಗಿದೆ. ಹಿಮಾಚಲ ಪ್ರದೇಶದಲ್ಲೂ ಗುಡುಗು ಸಮೇತ ಮಳೆ ಸುರಿಯುತ್ತಿದೆ. ಇಷ್ಟೇ ಅಲ್ಲ…

18 mins ago

ಎಸ್​ಎಸ್​ಎಲ್​ಸಿ ಫಲಿತಾಂಶ: ಕಲ್ಯಾಣ ಕರ್ನಾಟಕ ಜಿಲ್ಲೆಗಳಿಗೆ ಕೊನೆ ಸ್ಥಾನ

ಇಂದು ಎಸ್​ಎಸ್​ಎಲ್​ಸಿ ಫಲಿತಾಂಶ ಪ್ರಕಟವಾಗಿದ್ದು, ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳೇ ಕೊನೆಯ ಸ್ಥಾನದಲ್ಲಿ ಮುಂದುವರೆದಿವೆ. 

31 mins ago

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಆನೆಯ ಕಾಲಿಗೆ ಗಾಯ; ನಿರ್ವಹಣೆ ನಿರ್ಲಕ್ಷ್ಯ ಆರೋಪ

ರಾಜ್ಯದ ಶ್ರೀಮಂತ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಆನೆ ಕಾಲಿಗೆ ಗಾಯವಾಗಿದೆ. ಆನೆ ಮಾವುತ ಶ್ರೀನಿವಾಸ್ ಮೇಲೆ ಆನೆಯ ನಿರ್ವಹಣೆಯ ನಿರ್ಲಕ್ಷ್ಯದ…

59 mins ago

ಕಾರ್ಕಳ ಜ್ಞಾನಸುಧಾ ಶಾಲೆಯ ವಿದ್ಯಾರ್ಥಿನಿ ಸಹನಾ ರಾಜ್ಯಕ್ಕೆ ತೃತೀಯ

ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಘೋಷಣೆಯಾಗಿದ್ದು, ಕಾರ್ಕಳ ತಾಲೂಕಿನ ಗಣಿತನಗರದ ಜ್ಞಾನಸುಧಾ ಆಂಗ್ಲ ಮಾಧ್ಯಮ ಶಾಲೆಯ ಸಹನಾ…

1 hour ago