News Karnataka Kannada
Tuesday, April 16 2024
Cricket
ಕಲಬುರಗಿ

ಮಹಿಳೆಯ ಮಾಸಿಕ ಮುಟ್ಟು ಅಪಶಕುನ ಅಲ್ಲ: ದಿನೇಶ್ ಗುಂಡೂರಾವ್

ಮಹಿಳೆಯರಿಗೆ ಮಾಸಿಕವಾಗಿ ಆಗುವ ಮುಟ್ಟು ಅಪಶಕುನ ಅಲ್ಲ. ಅದೊಂದು ನೈಸರ್ಗಿಕ ಕ್ರಿಯೆ. ಅದು ಅಶುದ್ಧವೂ ಅಲ್ಲ. ಈ ಹಂತದಲ್ಲಿ ಹೆಣ್ಣು ಮಕ್ಕಳಿಗೆ ಕುಟುಂಬ ಮತ್ತು ಗಂಡಸರೂ ಕೂಡ ಬೆಂಬಲ ಕೊಡಬೇಕಿದೆ. ಆಗಲೇ ಆಕೆಯ ಆರೋಗ್ಯ ನಳನಳಿಸಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಆರ್.ಗುಂಡೂರಾವ್ ಹೇಳಿದರು.
Photo Credit : News Kannada

ಕಲಬುರಗಿ: ಮಹಿಳೆಯರಿಗೆ ಮಾಸಿಕವಾಗಿ ಆಗುವ ಮುಟ್ಟು ಅಪಶಕುನ ಅಲ್ಲ. ಅದೊಂದು ನೈಸರ್ಗಿಕ ಕ್ರಿಯೆ. ಅದು ಅಶುದ್ಧವೂ ಅಲ್ಲ. ಈ ಹಂತದಲ್ಲಿ ಹೆಣ್ಣು ಮಕ್ಕಳಿಗೆ ಕುಟುಂಬ ಮತ್ತು ಗಂಡಸರೂ ಕೂಡ ಬೆಂಬಲ ಕೊಡಬೇಕಿದೆ. ಆಗಲೇ ಆಕೆಯ ಆರೋಗ್ಯ ನಳನಳಿಸಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಆರ್.ಗುಂಡೂರಾವ್ ಹೇಳಿದರು.

ನಗರದ ಪಿಡಿಎ ಕಾಲೇಜಿನ ಸಂಚೂನರಿ ಹಾಲ್‌ನಲ್ಲಿ ಗುರುವಾರ ಆರೋಗ್ಯ ಇಲಾಖೆ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೆಕೆಆರ್ ಡಿಬಿ ಸಹಯೋಗದಲ್ಲಿ ಪ್ರೇರಣಾ ಮತ್ತು ಆಶಾಕಿರಣ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಸ್ಯಾನಿಟರ್ ಪ್ಯಾಡ್ ಬದಲು ಮುಟ್ಟಿನ ಕಪ್ ನೀಡಲಾಗುತ್ತಿದೆ. ಇದರಿಂದ ಪರಿಸರ ಸಂರಕ್ಷಣೆಯೂ ಆಗುತ್ತದೆ. ಕಡಿಮೆ ಬೆಲೆಯಲ್ಲಿ ಇದನ್ನು ನೀಡಲಾಗುತ್ತದೆ. ಒಂದು ಕಪ್ 5ರಿಂದ 6 ವರ್ಷ ಉಪಯೋಗ ಮಾಡಬಹುದು. ಈಗಾಗಲೇ ಈ ಕುರಿತು ಪ್ರಯೋಗಾತ್ಮಕವಾಗಿ ಪರೀಕ್ಷೆ ಮಾಡಲಾಗಿದೆ. ಇದು ಬಹಳಷ್ಟು ಸುರಕ್ಷಿತವಾಗಿದೆ. ಆದ್ದರಿಂದ ಹೆಚ್ಚಿನ ರೀತಿಯಲ್ಲಿ ಕಪ್ ಬಳಕೆ ಮಾಡಬೇಕು ಎಂದು ಕರೆ ನೀಡಿದರು.

ಮುಟ್ಟು ಆಗುವ ಸ್ತ್ರೀಯರಿಗೆ ಪ್ರೇರಣಾ ಕಾರ್ಯಕ್ರಮದಲ್ಲಿ ಮುಟ್ಟಿನ ಕಪ್ ವಿತರಣೆಗೆ ಕ್ರಮಕೈಗೊಳ್ಳಲು ನಿರ್ಧರಿಸಿದ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಅಭಿನಂದಿಸುತ್ತೇನೆ ಎಂದ ದಿನೇಶ ಗುಂಡೂರಾವ್, ಮುಟ್ಟಿನ ವಿಚಾರದಲ್ಲಿ ಮಡಿವಂತಿಕೆ ಇದೆ. ಆ ಮನಸ್ಥಿತಿ ಈಗ ಬದಲಾಗಬೇಕಿದೆ. ಅ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದರು.

ಕಲಬುರಗಿ ಸೇರಿದಂತೆ ಕರ್ನಾಟಕದ ಎಂಟು ಜಿಲ್ಲೆಗಳಲ್ಲಿ ಆಶಾಕಿರಣ ಕಾರ್ಯಕ್ರಮದ ಅಡಿಯಲ್ಲಿ ಒಟ್ಟು 1.12 ಕೋಟಿ ಜನರ ಕಣ್ಣು ಮಾಡುವ ಗುರಿಹೊಂದಿ ಹಾಗೇ ಪರೀಕ್ಷೆ ಮಾಡಿದವರಿಗೆ ಈಗಾಗಲೇ 3.32 ಲಕ್ಷ ಕನ್ನಡಕ ವಿತರಣೆ ಮಾಡಲಾಗಿದೆ. ಈಗಾಗಲೇ 21 ಲಕ್ಷ ಜನರಿಗೆ ಸ್ತ್ರೀನಿಂಗ್ ಮಾಡಲಾಗಿದೆ. ಅವರಲ್ಲಿ 75,200 ಜನರಿಗೆ ಸರ್ಜರಿ ಮಾಡಲಾಗಿದೆ. ಇದಕ್ಕಾಗಿ ರೂ 61 ಕೋಟಿ ವ್ಯಯಿಸಲಾಗುತ್ತಿದೆ ಎಂದರು.

ಮುಂದಿನ ದಿನಗಳಲ್ಲಿ ಯಾದಗಿರಿ ಸೇರಿದಂತೆ ಮತ್ತೆ ಎಂಟು ಜಿಲ್ಲೆಗಳಿಗೆ ಈ ಕಾರ್ಯಕ್ರಮ ವಿಸ್ತರಿಸುವ ಆಲೋಚನೆ ಇದೆ. ಒಟ್ಟಾರೆ ರಾಜ್ಯದ ಪ್ರತಿಯೊಬ್ಬರು ಕಣ್ಣುಗಳ ರಕ್ಷಣೆಗೆ ಬೇಕಾಗುವ ತಪಾಸಣೆ ಹಾಗೂ ಸರ್ಜರಿಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು