News Karnataka Kannada
Saturday, April 20 2024
Cricket
ಕಲಬುರಗಿ

ಬಾಪೂರ-ಮಹಿಬೂಬನಗರ ಹೆದ್ದಾರಿಗೆ ಕೇಂದ್ರ ಅಸ್ತು: ಮೈದಳೆಯಲಿದೆ ಚತುಷ್ಪಥ ರಸ್ತೆ

Centre approves Bapur-Mahibubnagar highway, four-lane road to come up
Photo Credit : News Kannada

ಚಿಂಚೋಳಿ: ತಾಲ್ಲೂಕಿಗೆ ಕೇಂದ್ರ ಭೂಸಾರಿಗೆ ಸಚಿವಾಲಯ ರಾಷ್ಟ್ರೀಯ ಹೆದ್ದಾರಿ ಕೊಡುಗೆ ನೀಡಿದೆ.

ರಾಜ್ಯದಿಂದ ಸಲ್ಲಿಸಿದ್ದ ಪ್ರಸ್ತಾವಕ್ಕೆ ಕೇಂದ್ರದ ಭೂಸಾರಿಗೆ ಸಚಿವಾಲಯದ ಅಧಿಕಾರಿಗಳು ಅನುಮೋದನೆ ನೀಡಿದ್ದಾರೆ. ಕ್ರಿಯಾಯೋಜನೆಗೆ ಮಂಜೂರಾತಿ ಸಿಕ್ಕಿದ್ದರಿಂದ ವಿಸ್ತೃತ ಯೋಜನಾ ವರದಿ ಸಲ್ಲಿಸುವಂತೆ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.

ಈಗಾಗಲೇ ವಿಸ್ತೃತ ಯೋಜನಾ ವರದಿ ತಯಾರಿ ಕೆಲಸವನ್ನು ಖಾಸಗಿ ಸಂಸ್ಥೆಗೆ ವಹಿಸಿದ್ದು, ಸ್ಥಳ ಪರಿಶೀಲನೆ ನಡೆದು ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಎಂದರು.

ಒಟ್ಟು 32 ಕಿ.ಮೀ ರಾಷ್ಟ್ರೀಯ ಹೆದ್ದಾರಿ ತಾಲ್ಲೂಕಿನಲ್ಲಿ ಹಾದು ಹೋಗಲಿದೆ. ಇದರಲ್ಲಿ ಈಗಾಗಲೇ 16 ಕಿ.ಮೀ ರಸ್ತೆಯನ್ನು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ (ಪಿಪಿಪಿ) ಖಾಸಗಿ ಸಹಭಾಗಿತ್ವದಲ್ಲಿ 4 ವರ್ಷಗಳ ಹಿಂದೆಯೇ ಅಭಿವೃದ್ಧಿ ಪಡಿಸಿದೆ. ಖಾಸಗಿಯವರೊಂದಿಗಿನ ಒಪ್ಪಂದದ ಅವಧಿ ಮುಗಿಯುವವರೆಗೆ ಇಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕೈಗೆತ್ತಿಕೊಳ್ಳಲು ತೊಡಕಾಗಿದೆ. ಹೀಗಾಗಿ ಇದರ ಮುಂದಿನ ಭಾಗದಲ್ಲಿ ಬರುವ ಚಿಂಚೋಳಿಯಿಂದ ಮಿರಿಯಾಣ(ತೆಲಂಗಾಣ) ಗಡಿವರೆಗೆ 15.8 ಕಿ.ಮೀ ಚತುಷ್ಪಥದ ಹೆದ್ದಾರಿ ನಿರ್ಮಾಣಕ್ಕೆ ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಧಿಕಾರಿಗಳು ಮುಂದಾಗಿದ್ದಾರೆ.

ಇದರಲ್ಲಿ 9.8 ಕಿ.ಮೀ ಬೈಪಾಸ್ ರಸ್ತೆ ನಿರ್ಮಾಣಗೊಳ್ಳಲಿದೆ. ಚಿಂಚೋಳಿ ಹೊರ ವಲಯದಿಂದ ಹೆದ್ದಾರಿ ವಿಭಜಿಸಿ ಚಿಂಚೋಳಿ ಚಂದಾಪುರ ಅವಳಿಪಟ್ಟಣದ ಹೊರಗಿನಿಂದ ಪೋಲಕಪಳ್ಳಿ ಬಳಿ ಸಂಧಿಸುವಂತೆ ಸುಮಾರು 6.7 ಕಿ.ಮೀ ಹಾಗೂ ಮಿರಿಯಾಣ ಬಳಿ ಕೆರೆಯ ಬಂಡ್ ಕೆಳಗಿನಿಂದ ಸುಮಾರು 3.1 ಕಿ.ಮೀ ರಸ್ತೆ, ಹೀಗೆ ಎರಡು ಬೈಪಾಸ್ ರಸ್ತೆ ನಿರ್ಮಾಣಗೊಳ್ಳಲಿವೆ.

ಈ ಚತುಷ್ಪಥದ ಹೆದ್ದಾರಿ ನಿರ್ಮಾಣಕ್ಕೆ ಪ್ರಾಥಮಿಕ ಅಂದಾಜಿನಂತೆ ₹400 ಕೋಟಿ ವೆಚ್ಚವಾಗಲಿದ್ದು ಇದರಲ್ಲಿ ₹60 ಕೋಟಿ ಭೂಸ್ವಾಧೀನಕ್ಕೆ ಖರ್ಚಾಗಲಿದೆ ಎಂದು ಮೂಲಗಳು ತಿಳಿಸಿವೆ.

ಈಗಾಗಲೇ ಈ ರಸ್ತೆಯನ್ನು ಲೋಕೋಪಯೋಗಿ ಇಲಾಖೆಯಿಂದ ರಾಷ್ಟ್ರೀಯ ಹೆದ್ದಾರಿ ಹುಮನಾಬಾದ ಉಪ ವಿಭಾಗಕ್ಕೆ ಹಸ್ತಾಂತರ ಮಾಡಿಕೊಳ್ಳಲಾಗಿದೆ ಎಂದು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಗೋರಕನಾಥ ಚನಶೆಟ್ಟಿ ತಿಳಿಸಿದ್ದಾರೆ.

ಕಳೆದ ಜೂನ್ 7ರಂದು ‘ಘೋಷಣೆಗೆ ಸೀಮೀತವಾದ ರಾಷ್ಟ್ರೀಯ ಹೆದ್ದಾರಿ’ ಶೀರ್ಷಿಕೆ ಅಡಿಯಲ್ಲಿ ವರದಿ ಪ್ರಕಟಿಸಿತ್ತು.

ಭಗವಂತ ಖೂಬಾ ಕೇಂದ್ರ ಸಚಿವಚಿಂಚೋಳಿ ತಾಲ್ಲೂಕಿಗೆ ಇದು ಮಹತ್ವದ ಕೊಡುಗೆಯಾಗಿದೆ. ತಾಲ್ಲೂಕಿಗೆ 32 ಕಿ.ಮೀ ಹೆದ್ದಾರಿ ನೀಡಲಾಗಿದೆ. ವಿಸ್ತೃತ ಯೋಜನಾ ವರದಿ ಆದ್ಯತೆ ಮೇಲೆ ಅನುಮೋದನೆ ಪಡೆದು ಕಾಮಗಾರಿ ಪ್ರಾರಂಭಿಸಲು ಕ್ರಮ ಕೈಗೊಳ್ಳುತ್ತೇನೆ ಡಾ.ಉಮೇಶ ಜಾಧವ ಕಲಬುರಗಿ ಸಂಸದರಾಷ್ಟ್ರೀಯ ಹೆದ್ದಾರಿ ಕ್ರಿಯಾ ಯೋಜನೆಗೆ ಅನುಮೋದನೆ ಸಿಕ್ಕಿದ್ದರಿಂದ ಈ ಭಾಗದಲ್ಲಿ ಸಿಮೆಂಟ್ ಎಥೆನಾಲ್ ಕೈಗಾರಿಕೆಗಳಿಗೆ ಹಾಗೂ ವಾಣಿಜ್ಯೋದ್ಯಮ ಚಟುವಟಿಕೆ ವೃದ್ಧಿಗೆ ಸಹಕಾರಿಯಾಗಲಿದೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು