News Karnataka Kannada
Tuesday, April 23 2024
Cricket
ಕಲಬುರಗಿ

ವಿಧಾನಸೌಧದಲ್ಲಿ ಪಾಕ್​ ಪರ ಘೋಷಣೆ, ಬಾಂಬ್​ ಬ್ಲಾಸ್ಟ್​​ ಸಿಲ್ಲಿ ಅಟೆಂಪ್ಟ್​ ಎಂದ ಸಚಿವ !

Mla
Photo Credit : News Kannada

ಕಲಬುರಗಿ: ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ವಿಚಾರ ಮತ್ತು ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ್ದ ಬಾಂಬ್​ ಸ್ಫೋಟ ಪ್ರಕರಣಗಳ ಕುರಿತಾಗಿ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್​ ಪಾಟೀಲ್ ಲಘುವಾಗಿ ಮಾತನಾಡಿದ್ದಾರೆ.

ರಾಜ್ಯದಲ್ಲಿನ ಶಾಂತಿ-ಸುವ್ಯವಸ್ಥೆ ಕದಡಲು ಈ ರೀತಿ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ನಮ್ಮ ಸರ್ಕಾರ ಸೊಪ್ಪು ಹಾಕಲ್ಲ, ಇಂತಹ ಸಿಲ್ಲಿ ಅಟೆಂಪ್ಟ್‌‌​​​​ಗಳಿಂದ ಸರ್ಕಾರ ವಿಚಲಿತವಾಗುವುದಿಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಕಲಬುರಗಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಇವಾವುದಕ್ಕೂ ಆಸ್ಪದವಿಲ್ಲ. ನಮ್ಮ ಸರ್ಕಾರದ ಉದ್ದೇಶ ರಾಜ್ಯದ ಯೋಗಕ್ಷೇಮ, ಶಾಂತಿ-ಸುವ್ಯವಸ್ಥೆ ಮತ್ತು ಅಭಿವೃದ್ಧಿ ಇದು ಒಂದೇ ಗುರಿ ಎಂದರು. ಇತರಹದ ಕೃತ್ಯಗಳು ಪ್ರತಿದಿನ ನಡೆಯಲ್ಲ. ಬಿಗಿ ಭದ್ರತೆಯ ಸಂಸತ್ತಿನಲ್ಲಿ ಅಂತಹ ದೊಡ್ಡ ಘಟನೆ ನಡೆದಿದೆ. ಸಂಸತ್ತಿಗೆ ಇರುವಷ್ಟು ಭದ್ರತೆ ವಿಧಾನಸೌಧಕ್ಕೆ ಇಲ್ಲ. ಸಭಾಪತಿಗಳು ಇನ್ಮುಂದೆ ಬಿಗಿ ಭದ್ರತೆ ಮಾಡುತ್ತಾರೆ. ಇನ್ನು ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆಂದು ಎಫ್​ಎಸ್​ಎಲ್ ವರದಿ ಬಂದರೇ ಕ್ರಮ ಕೈಗೊಳ್ಳುತ್ತೇವೆ. ಕೆಲವರು ವಾಕ್ ಸ್ವಾತಂತ್ರ್ಯವನ್ನು ದುರಪಯೋಗ ಮಾಡಿಕೊಳ್ಳುತ್ತಿದ್ದಾರೆ. ಅವರ ವಿರುದ್ಧ ಕಾನೂನು ಪ್ರಕಾರ ಕೈಗೊಳ್ಳುತ್ತೆವೆ ಎಂದು ಹೇಳಿದರು.

ಇನ್ನು ಶರಣಪ್ರಕಾಶ ಪಾಟೀಲ್​ ಅವರ ಹೇಳಿಕೆಯನ್ನು ವಿರೋಧಿಸಿ ರಾಜ್ಯ ಬಿಜೆಪಿ ಘಟಕ ಟ್ವೀಟ್​ ಮೂಲಕ ಆಕ್ರೋಶ ವ್ಯಕ್ತಪಡಿಸಿದೆ. “ಪಾಕಿಸ್ತಾನ್‌ ಜಿಂದಾಬಾದ್ ಎಂದು ಕೂಗಿರುವುದು ಸಿಲ್ಲಿ ಅಟೆಂಪ್ಟಾ? ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟ ಮಾಡಿದ್ದು ಸಿಲ್ಲಿ ಅಟೆಂಪ್ಟಾ? ನೂರಾರು ಜನ ಸತ್ತರೆ ಮಾತ್ರ ನಿಮ್ಮ ಪ್ರಕಾರ ಭಯೋತ್ಪಾದನಾ ದಾಳಿ. ಹತ್ತು ಜನ ಬಾಂಬ್‌ ಸ್ಫೋಟದಿಂದ ಗಾಯಗೊಂಡರೆ ನಿಮಗೆ ಸಣ್ಣ ಘಟನೆ. ಬಾಂಬ್‌ ಇಟ್ಟವನು ಬ್ರದರ್‌, ಬೆಂಕಿ ಹಚ್ಚಿದವರಿಗೆ ಅಮಾಯಕ ಅನ್ನೋ ಪಟ್ಟ ಕಟ್ಟುವ ನಿಮಗೆ, ನಿಮ್ಮ ಸಿಲ್ಲಿ ಅಟೆಂಪ್ಟ್‌‌ಗಳಿಗೆ ಕರ್ನಾಟಕದ ಜನತೆ ಇನ್ನೊಂದು ತಿಂಗಳಲ್ಲಿ ತಕ್ಕ ಉತ್ತರ ನೀಡ್ತಾರೆ” ಎಂದು ಕಿಡಿಕಾರಿದೆ.

 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು