Categories: ಕಲಬುರಗಿ

‘ಕೈ’ ಸೋಲಿಸಲು ಒಗ್ಗಟ್ಟಿನ ಮಂತ್ರ ಜಪಿಸಿದ ಬಿಜೆಪಿ

ಕಲಬುರಗಿ: ಲೋಕಸಭಾ ಚುನಾವಣೆಯಲ್ಲಿ ಎಐಸಿಸಿ ಅಧ್ಯಕ್ಷರ ತವರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯನ್ನು ಈ ಬಾರಿ 2 ಲಕ್ಷ ಮತಗಳ ಅಂತರದಿಂದ ಸೋಲಿಸಿ, ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಗುರಿಯೊಂದಿಗೆ ಬಿಜೆಪಿ ಮುಖಂಡರು ಹಳೆಯ ಮುನಿಸು ಮರೆತು ಒಗ್ಗಟ್ಟಿನ ಮಂತ್ರ ಜಪಿಸಿದರು.

ಇಲ್ಲಿನ ದರ್ಗಾ ರಸ್ತೆಯ ಬಿಜೆಪಿ ಕಚೇರಿಯಲ್ಲಿ ಶನಿವಾರ ಕಲಬುರಗಿ ಲೋಕಸಭಾ ಚುನಾವಣಾ ಕಾರ್ಯಾಲಯ ಉದ್ಘಾಟಿಸಲಾಯಿತು. ಕೆಲ ಮುಖಂಡರು, ‘ಕಳೆದ ಲೋಕಸಭೆ ಚುನಾವಣೆಯಲ್ಲಿ ನಿಷ್ಠಾವಂತರನ್ನು ಕಡೆಗಣಿಸಿದ್ದಕ್ಕೆ ಸೋತ್ತಿದ್ದೇವೆ’ ಎಂದು ಒಪ್ಪಿಕೊಂಡರು. ಬಹುತೇಕರು, ‘ನಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಮರೆಯೋಣ. ಯಾರೇ ಅಭ್ಯರ್ಥಿಯಾದರೂ ಮೋದಿಗಾಗಿ ಅವರನ್ನು ಗೆಲ್ಲಿಸೋಣ’ ಎಂದರು.

ಕಾರ್ಯಾಲಯ ಉದ್ಘಾಟಿಸಿದ ಕಲಬುರಗಿ ಲೋಕಸಭಾ ಉಸ್ತುವಾರಿ ರಾಜುಗೌಡ, ‘ಸೋಲಿಲ್ಲದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿ ಐತಿಹಾಸಿ ಸೃಷ್ಟಿಸಿದ ಕ್ರಿಕೆಟ್ (ಜಿಲ್ಲಾ ಬಿಜೆಪಿ) ತಂಡಕ್ಕೆ ದಣಿವಾದಾಗ ನೀರು ಕೊಟ್ಟು ಹುರಿದುಂಬಿಸಲು ಬಂದಿದ್ದೇನೆ. ಮೋದಿ ಇದ್ದರೆ ಸುರಕ್ಷಿತವಾಗಿ ಇರುತ್ತೇವೆ. ನಮ್ಮ ರಕ್ಷಣೆಗಾಗಿ ಚುನಾವಣೆ ನಡೆಸೋಣ’ ಎನ್ನುತ್ತಲೇ ಮೋದಿ ನಾಮ ಪಠಿಸಿದರು.

‘ಎಲ್ಲದಕ್ಕೂ ಸಿದ್ಧರಾಗಿ ಬಂದಿದ್ದೇವೆ. ಏನ್ ಸರ್ ಎಂದರೆ ನಾವು ಯಪ್ಪ ಎಂದು ಕೈಮುಗಿಯುತ್ತೇವೆ. ಏನೋಎಂದರೆ ಯಾಕಲೇ ಎನ್ನುತ್ತೇವೆ. ಕಾರ್ಯಕರ್ತರು ರೌಡಿಸಂಗೆ ಹೆದರುವ ಅವಶ್ಯಕತೆ ಎಲ್ಲ. ನಿಮ್ಮ ಹಿಂದೆ ನಾವಿದ್ದೇವೆ’ ಎಂದು ‘ಕಮಲ’ ಪಡೆಗೆ ಅಭಯ ನೀಡಿದರು.

‘ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರಿಗೆ ಬೇರೆ ಕಡೆ ಕಳುಹಿಸಿ ಅವರಿಗಿಂತ ಜ್ಯೂನಿಯರ್ ಪ್ರಿಯಾಂಕ್ ಖರ್ಗೆ ಅವರಿಗೆ ಜಿಲ್ಲೆಯ ಉಸ್ತುವಾರಿ ಕೊಟ್ಟಿದ್ದಾರೆ. ಪಾಟೀಲರ ಸಮಾಜದವರು (ವೀರಶೈವ ಲಿಂಗಾಯತ) ಇದನ್ನು ಮರೆಯುತ್ತಾರಾ? ಜೇವರ್ಗಿ ಶಾಸಕ (ಡಾ.ಅಜಯ್‌ಸಿಂಗ್) ನನ್ನ ಮಗ ಇದ್ದಂತೆ ಎಂದವರು ಸಚಿವ ಸ್ಥಾನ ಕೊಡಲಿಲ್ಲ. ಕೋಪಿಸಿಕೊಂಡ ಮೇಲೆ ಕೆಕೆಆರ್‌ಡಿಬಿಯ ಅಧ್ಯಕ್ಷರನ್ನಾಗಿ ಮಾಡಿದರು’ ಎಂದು ಕಾಂಗ್ರೆಸ್ ನಡೆಯನ್ನು ಟೀಕಿಸಿದರು.

ಮುಂದಿನ 50 ದಿನ ಸಮರೋಪಾದಿಯಲ್ಲಿ ದುಡಿಯೋಣವೆಂದು ಭಾಷಣ ಆರಂಭಿಸಿದ ಸಂಸದ ಡಾ.ಉಮೇಶ ಜಾಧವ, ‘ನಿಮಗೆ ಕೈ ಜೋಡಿಸುತ್ತೇನೆ, ನಮ್ಮ ಮುಂದೆ ಬಹಳ ಸವಾಲುಗಳಿವೆ. ಎಲ್ಲರೂಒಂದಾಗಿ ಕೆಲಸ ಮಾಡೋಣ. ಕಲಬುರಗಿಯು ಕಾಂಗ್ರೆಸ್‌ನ ಶಕ್ತಿ ಕೇಂದ್ರವಾಗಿದೆ. ಗೆಲ್ಲುವುದಕ್ಕಾಗಿ ಸಕಲ ರೀತಿಯ ಪ್ರಯತ್ನ ಮಾಡುತ್ತಾರೆ’ ಎಂದರು.

‘ಮಾಜಿ ಸಿಎಂ ಶಿವರಾಜ ಸಿಂಗ್ ಚೌಹಾಣ್ ಜಿಲ್ಲೆಗೆ ಬಂದಿದ್ದಾಗ ಕೇಂದ್ರದಿಂದ 100 ಜನ ಮಫ್ತಿಯಲ್ಲಿ ಬಂದಿದ್ದರು. ಇಲ್ಲಿನ ಬೆಳವಣಿಗೆಗಳ ಬಗ್ಗೆ ವರಿಷ್ಠರು ಕಣ್ಣಿಟ್ಟಿದ್ದಾರೆ’ ಎಂದು ತಮ್ಮ ವಿರುದ್ಧ ಭಿನ್ನಾಭಿಪ್ರಾಯ ಹೊಂದಿದವರಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.

ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ.ನಮೋಶಿ, ಮಾಜಿ ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ರಾಜಕುಮಾರ ಪಾಟೀಲ ತೇಲ್ಕೂರ, ರಾಜ್ಯ ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅವ್ವಣ್ಣ ಮ್ಯಾಕೇರಿ, ಪ್ರಮುಖರಾದ ಶೋಭಾ ಬಾಣಿ, ಅಶೋಕ ಬಗಲಿ, ಮಹಾದೇವ ಬೆಳಮಗಿ, ಶಿವಯೋಗಿ ನಾಗನಳ್ಳಿ, ಸಂತೋಷ ಹಾದಿಮನಿ, ಬಾಬುರಾವ ಹಾಗರಗುಂಡಗಿ ಉಪಸ್ಥಿತರಿದ್ದರು.

Ashika S

Recent Posts

ಚರಂಡಿ ಸ್ವಚ್ಛಗೊಳಿಸುವಂತೆ ಸಾರ್ವಜನಿಕರ ಆಗ್ರಹ

ಪಟ್ಟಣದ ವಿವಿಧ ವಾರ್ಡ್‌ಗಳು ಹಾಗೂ ಪ್ರಮುಖ ವೃತ್ತಗಳಲ್ಲಿನ ಚರಂಡಿಗಳು ಕಟ್ಟಿಕೊಂಡು ದುರ್ನಾತ ಬೀರುತ್ತಿದ್ದು, ಜನರು ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ. ಅಧಿಕಾರಿಗಳ…

3 mins ago

ನಿವೃತ್ತಿ ಘೋಷಿಸಿದ ಇಂಗ್ಲೆಂಡ್​ ತಂಡ ವೇಗದ ಬೌಲರ್​ : ಕಾರಣ ಇಲ್ಲಿದೆ

ಇಂಗ್ಲೆಂಡ್ ತಂಡದ ವೇಗದ ಬೌಲರ್ ಜೇಮ್ಸ್ ಆ್ಯಂಡರ್ಸನ್ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಇಂಗ್ಲೆಂಡ್ ಮತ್ತು…

15 mins ago

ಹಾಡಹಗಲೇ ಮನೆಗೆ ನುಗ್ಗಿ‌ದ ದುಷ್ಕರ್ಮಿಗಳು : ಜೀಪ್​ಗೆ ಬೆಂಕಿ ಹಚ್ಚಿ ಪರಾರಿ

ಹಾಡಹಗಲೇ ದುಷ್ಕರ್ಮಿಗಳು ಮನೆಗೆ ನುಗ್ಗಿ‌ ಟಿವಿ, ಫ್ರಿಡ್ಜ್ ಹಾಳು ಮಾಡಿರುವ ಘಟನೆ ಪಂಚಾಕ್ಷರಿ ನಗರದಲ್ಲಿ ನಡದಿದೆ.

19 mins ago

ಮ್ಯಾಗಿ ತಿಂದು 10 ವರ್ಷದ ಬಾಲಕ ಸಾವು : 6 ಮಂದಿ ಅಸ್ವಸ್ಥ

ಉತ್ತರ ಪ್ರದೇಶದ ಪಿಲಿಬಿತ್‌ ಜಿಲ್ಲಯಲ್ಲಿ ಒಂದು ದಾರುಣ ಘಟನೆ ನಡೆದಿದ್ದು 10 ವರ್ಷದ ಅಪ್ರಾಪ್ತ ಬಾಲಕ ಅನ್ನದೊಂದಿಗೆ ಮ್ಯಾಗಿ ತಿಂದ…

33 mins ago

ಪಲ್ಟಿಯಾದ ಲಾರಿಯಲ್ಲಿ 7 ಕೋ. ಹಣ ಪತ್ತೆ: ವಶಕ್ಕೆ ಪಡೆದ ಪೊಲೀಸರು

ಪಲ್ಟಿಯಾದ ಲಾರಿಯಲ್ಲಿ ಬರೋಬ್ಬರಿ 7 ಕೋಟಿ ಹಣವನ್ನು ವಶಕ್ಕೆ ಪಡೆದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

49 mins ago

ಪುಸ್ತಕದಲ್ಲಿ ಬೈಬಲ್‌ ಪದ ಬಳಕೆ : ಕರೀನಾ ಕಪೂರ್‌ಗೆ ಕೋರ್ಟ್‌ ನೋಟಿಸ್‌

ಗರ್ಭಧಾರಣೆಗೆ (ಪ್ರಗ್ನೆನ್ಸಿ) ಸಂಬಂಧಿಸಿದಂತೆ ಬರೆದ ಪುಸ್ತಕದ ಶೀರ್ಷಿಕೆಯಲ್ಲಿ ‘ಬೈಬಲ್’ ಪದ ಬಳಕೆ ಮಾಡಿದಕ್ಕಾಗಿ ಮಧ್ಯಪ್ರದೇಶ ಹೈಕೋರ್ಟ್ ಬಾಲಿವುಡ್ ನಟಿ ಕರೀನಾ…

56 mins ago