Categories: ಕಲಬುರಗಿ

ಆನ್‌ಲೈನ್‌ನಲ್ಲಿ ಹಸು ಖರೀದಿಗೆ ಮುಂದಾದ ಅನ್ನದಾತನಿಗೆ ವಂಚನೆ: ಹಣ ವಾಪಸ್‌ ಕೊಡಿಸಿದ ಪೊಲೀಸರು

ಕಲಬುರಗಿ: ಇದೊಂದು ರೀತಿ ಹೊಸ ತರದ ವಂಚನೆ. ಜಾನುವಾರುಗಳ ಫೋಟೋ ಅಪ್ಲೋಡ್‌ ಮಾಡಿ ವಂಚಿಸುವ ಪರಿ. ಈ ವಂಚನೆ ಜಾಲಕ್ಕೆ ಸಿಲುಕಿದವರು ಕಲಬುರಗಿಯ ರೈತ. ಆದರೆ ಇವರ ಅದೃಷ್ಟ ಚೆನ್ನಾಗಿತ್ತು ಎನ್ನಿಸುತ್ತದೆ. ವಂಚನೆಗೆ ಒಳಗಾದ ರೈತನ ಹಣ ವಾಪಾಸ್‌ ಕೊಡಿಸುವಲ್ಲಿ ಕಲಬುರಗಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಸಾಮಾಜಿಕ ಜಾಲತಾಣವಾದ ಫೇಸ್‌ ಬುಕ್‌ನಲ್ಲಿ ನಕಲಿ ಖಾತೆ ತೆರೆದು ಗುಜರಾತ್‌ನ ಖಿಲಾರಿ ಎತ್ತುಗಳ ಮಾರಾಟದ ಜಾಹೀರಾತನ್ನು ನಂಬಿದ ರೈತನೊಬ್ಬರು 52 ಸಾವಿರ ರೂ. ಹಣ ಹಾಕಿ ವಂಚನೆಗೊಳಗಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿ ಜಿಲ್ಲಾ ಸೆನ್‌ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ ಇದೀಗ ರೈತನಿಗೆ 38,167 ರೂ. ಹಣವನ್ನು ಹಿಂದಿರುಗಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ ಮಾರ್ಚ್‌ 20 ರಂದು ವಂಚಕನೊಬ್ಬ ರಾಜ್ಯಸ್ಥಾನ ಜೈಪುರ ಮೂಲದ ಹೆಸರಿನಲ್ಲಿ ಫೇಸ್‌ ಬುಕ್‌ ಖಾತೆಯನ್ನು ತೆರೆದಿದ್ದು, ಅದರಲ್ಲಿ ಎರಡು ಸುಂದರವಾದ ಖಿಲಾರಿ ಎತ್ತುಗಳ ಫೋಟೋ ಹಾಕಿ ಇದಕ್ಕೆ 70 ಸಾವಿರವೆಂದು ಬರೆದು ಅಪ್‌ ರೋಡ್‌ ಮಾಡಿದ್ದಾನೆ. ಇದನ್ನು ನೋಡಿದ ಕಲಬುರಗಿ ಜಿಲ್ಲೆಯ ಮರತೂರಿನ ಮಲ್ಲಿಕಾರ್ಜುನ ಅವರು ಆ ವ್ಯಕ್ತಿಯನ್ನು ಫೇಸ್‌ ಬುಕ್‌ ಚ್ಯಾಟಿಂಗ್‌ ಮೂಲಕವೇ ಸಂಪರ್ಕಿಸಿದ್ದಾರೆ.

ಹೀಗಿದ್ದು, ಆಕಳುಗಳನ್ನು ಖರೀದಿ ಮಾಡುವುದಾಗಿ ಹೇಳಿದ ಮಲ್ಲಿಕಾರ್ಜುನನಿಂದ ವಂಚಕ ಎರಡುಬಾರಿಯಂತೆ ಒಟ್ಟು 52 ಸಾವಿರ ರೂ. ತನ್ನ ಖಾತೆಗೆ ಹಾಕಿಸಿಕೊಂಡಿದ್ದಾನೆ. ಆದರೆ, ಹಣ ಜಮೆಯಾದರೂ ಸಹ ಎರಡು ಎತ್ತುಗಳನ್ನು ನೀಡದೆ ತನ್ನ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿದ್ದಾನೆ.

ಇದರಿಂದ ಗಾಬರಿಗೊಂಡ ರೈತ ಮಲ್ಲಿಕಾರ್ಜುನ ಕೂಡಲೇ 1930ಗೆ ಕರೆ ಮಾಡಿದ್ದರಿಂದ ಗೋಲ್ಡನ್‌ (ಸುವರ್ಣ ಅವಧಿ) ಅವರ್‌ನಲ್ಲಿ ದಾಖಲಿಸಿಕೊಂಡ ಜಿಲ್ಲಾ ಸೆನ್‌ ಪೊಲೀಸರು ಪಿಐ ಪರಶುರಾಮ ವನಂಜಕರ್‌ ಅವರ ನೇತೃತ್ವದಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ವಂಚಕನ ಖಾತೆಯಲ್ಲಿದ್ದ ಹಣಕ್ಕೆ ಲಾಕ್‌ ಮಾಡಿದ್ದಾರೆ. ಇದರಿಂದಾಗಿ ರೈತನ 38 ಸಾವಿರ ಹಣವನ್ನು ಪೊಲೀಸರು ವಂಚಕನಿಂದ ರಕ್ಷಣೆ ಮಾಡಿದ್ದಾರೆ.

ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿದ ಪಿಐ ಪರಶುರಾಮ ವನಂಜಕರ್‌ ಅವರ ನೇತೃತ್ವದಲ್ಲಿ ಪಿಎಸ್‌ಐ ಶ್ರೀದೇವಿ, ಸಿಬ್ಬಂದಿಗಳಾದ ಸಿದ್ದು ಪೂಜಾರಿ, ಕುಶಣ್ಣ ಗುಡೂರ್‌, ಸಿದ್ದು ಪಾಟೀಲ್‌ ಅವರ ತಂಡವು ನಿನ್ನೆ ರೈತ ಮಲ್ಲಿಕಾರ್ಜುನ ಅವರನ್ನು ಕಚೇರಿಗೆ ಕರೆಸಿ 38 ಸಾವಿರದ165 ರೂ. ಹಣವನ್ನು ಹಿಂದಿರುಗಿಸಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ಯಾರಾದರೂ ಸಾಮಾಜಿಕ ಜಾಲತಾಣದಲ್ಲಿ ವಂಚನೆಗೆ ಒಳಗಾದಲ್ಲಿ ಕೂಡಲೇ 1930 ಸಂಖ್ಯೆಗೆ ಕರೆ ಮಾಡಿದರೆ ಸೆನ್‌ ಪೊಲೀಸರು ತಮ್ಮ ಗೋಲ್ಡನ್‌ ಅವರ್‌ನಲ್ಲಿ ಸಾಧ್ಯವಾದಷ್ಟು ಹಣವನ್ನು ವಂಚಕ ಬೇರೊಂದು ಖಾತೆಗೆ ವರ್ಗಾವಣೆ ಮಾಡುವುದರೊಳಗಾಗಿ ಆತನ ಖಾತೆ ಲಾಕ್‌ ಮಾಡುವ ಸಾಧ್ಯತೆಗಳಿದ್ದು, ಸಾರ್ವಜನಿಕರು ಇಂತಹ ಮೋಸಗಾರರ ಕುರಿತು ಎಚ್ಚರದಿಂದ ಇರಬೇಕೆಂದು ಪೊಲೀಸರು ಮನವಿ ಮಾಡಿದ್ದಾರೆ.

Ashika S

Recent Posts

ಶವರ್ಮಾ ತಿಂದು ಪ್ರಾಣಬಿಟ್ಟ 19 ವರ್ಷದ ಯುವಕ

ಚಿಕನ್​​ ಶವರ್ಮಾ ತಿಂದು ಸಾವನ್ನಪ್ಪುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇಂಥದ್ದೇ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದ್ದು, 19 ವರ್ಷದ ಯುವಕನೊಬ್ಬ ಚಿಕನ್ ಶವರ್ಮಾ…

5 mins ago

ಮೇ 11ರಿಂದ 13ರವರೆಗೆ ವಾಮಂಜೂರಿನಲ್ಲಿ ಕೃಷಿ ಮೇಳ, ದಶಮ ಸಂಭ್ರಮ

ಇದೇ ಮೇ 11ರಿಂದ 13ರವರೆಗೆ ವಾಮಂಜೂರಿನ ಶ್ರೀ ಅಮೃತೇಶ್ವರ ದೇವಸ್ಥಾನದ ಮುಂಭಾಗ ಜರುಗಲಿದೆ ಎಂದು ಗುರುಪುರ ವ್ಯವಸಾಯ ಸೇವಾ ಸಹಕಾರಿ…

7 mins ago

ವಿದ್ಯುತ್ ಸಮಸ್ಯೆ ಪರಿಹರಿಸಲು ಬೆಸ್ಕಾಂನಿಂದ ವಾಟ್ಸಾಪ್ ನಂಬರ್ ಬಿಡುಗಡೆ

ಮಳೆಗಾಲದಲ್ಲಿ ವಿದ್ಯುತ್ ಸಮಸ್ಯೆ ಪರಿಹರಿಸಲು ಬೆಸ್ಕಾಂ ಎಂಟು ಜಿಲ್ಲೆಗಳಿಗೆ ವಾಟ್ಸಾಪ್ ನಂಬರ್ ಬಿಡುಗಡೆ ಮಾಡಿದ್ದು, ಬೆಸ್ಕಾಂ ವ್ಯಾಪ್ತಿಯ ಜಿಲ್ಲೆಯ ಜನರು…

21 mins ago

ಎಸ್‌ಎಸ್‌ಎಲ್‌ಸಿ 2,3ನೇ ಪರೀಕ್ಷೆ ಬರೆಯುವವರಿಗೆ ಸ್ಪೆಷಲ್‌ ಕ್ಲಾಸ್‌ ಯೋಜನೆ

2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶವನ್ನು ಗುರುವಾರ (ಮೇ 9) ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ…

24 mins ago

ಚುನಾವಣೆ ಮುಕ್ತಾಯದ ಬೆನ್ನಲ್ಲೇ ಆಕ್ಟಿವ್ ಆದ ಶಾಸಕ ಪ್ರಭು ಚವಾಣ್

ಲೋಕಸಭಾ ಚುನಾವಣೆ ಮುಕ್ತಾಯ ಬೆನ್ನಲ್ಲೇ ಬೀದರ್ ಜಿಲ್ಲೆ ಔರಾದ್ ಶಾಸಕ ಪ್ರಭು ಚವಾಣ್ ಕ್ಷೇತ್ರದಲ್ಲಿ ಆಕ್ಟಿವ್ ಆಗಿದ್ದಾರೆ. ಅನಾರೋಗ್ಯ ಕಾರಣ…

38 mins ago

ಶಾಸಕ ಇಕ್ಬಾಲ್‌ ಹುಸೇನ್‌ ವಿಡಿಯೋ ವೈರಲ್‌ ಕೇಸ್‌ : ಇಬ್ಬರ ಬಂಧನ

ಶಾಸಕ ಇಕ್ಬಾಲ್‌ ಹಸೇನ್‌ ಅವರು ಮಹಿಳಾ ಕಾಂಗ್ರೆಸ್‌ ಕಾರ್ಯಕರ್ತೆ ಜೊತೆ ವಿಡಿಯೋ ಕಾಲ್‌ನಲ್ಲಿ ಮಾತನಾಡುತ್ತಿದ್ದ ವಿಡಿಯೋ ವೈರಲ್‌ ಮಾಡಿದ್ದ ಆರೋಪದಡಿ…

40 mins ago