Categories: ಕಲಬುರಗಿ

ಬೆಲೆ ಏರಿಕೆ ಮೂಲಕ ಜನರ ಪಿಕ್ ಪಾಕೇಟ್ ಗೆ ಬಿಜೆಪಿ ಯತ್ನ: ಡಿ.ಕೆ.ಶಿ ಆಕ್ರೋಶ

ಕಲಬುರಗಿ: ಬಿಜೆಪಿಯವರು ಪೆಟ್ರೋಲ್, ಗ್ಯಾಸ್ ಬೆಲೆ ಏರಿಕೆ ಮಾಡುವ ಮೂಲಕ ಜನರ ಪಿಕ್ ‌ಪಾಕೇಟ್ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ವಾಗ್ಧಾಳಿ ನಡೆಸಿದ್ದಾರೆ‌.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಬಿಜೆಪಿ ಜನರಿಂದ ಪಿಕ್‌ಪಾಕೇಟ್ ಮಾಡುವುದಕ್ಕೆ ಪ್ರಾರಂಭ ಮಾಡಿದೆ. ಪಂಚರಾಜ್ಯ ಚುನಾವಣೆ ಮುಗಿಯೊವರೆಗೆ ಸುಮ್ಮನಿದ್ದು, ಈಗ ಚುನಾವಣೆ ಮುಗಿದ ಮೇಲೆ ಮತ್ತೆ ಬೆಲೆ ಏರಿಕೆ ಸ್ಟಾರ್ಟ್ ಮಾಡಿದ್ದಾರೆ. ಜನರ ಆಧಾಯ ಮಾತ್ರ ಇರುವಷ್ಟೆ ಇದೆ.ಆದರೆ ಬೆಲೆಗಳು ಮಾತ್ರ ಗಗನಕ್ಕೆ ಏರಿಕೆ ಆಗುತ್ತಿದೆ ಎಂದರು.

ಖರ್ಚು ಹೆಚ್ಚಾಗಿ ಜನರು ತಾಳ್ಮೆ ಕಳೆದುಕೊಳ್ಳುವ ಸಮಯ ಸೃಷ್ಟಿಯಾಗುತ್ತಿದೆ. ಬೆಲೆ ಏರಿಕೆ ಹಾಗೂ ಬಿಜೆಪಿಯವರ ಪಿಕ್‌ಪಾಕೇಟ್ ವಿರೋಧಿಸಿ ರಾಜ್ಯಮಟ್ಟದಲ್ಲಿ ವ್ಯಾಪಕ ಹೋರಾಟ ನಡೆಸಲು ತಿರ್ಮಾನಿಸಲಾಗಿದೆ. ಇಷ್ಟರಲ್ಲೆ ಹೋರಾಟದ ರೂಪರೇಷ ತಯಾರಿಸಿ ಪ್ರಕಟಿಸುವದಾಗಿ ಡಿಕೆಶಿ ಹೇಳಿದರು. ಅಲ್ಲದೆ ರಾಜ್ಯದಲ್ಲಿ ಪೆಟ್ರೋಲ್ ಗ್ಯಾಸ್ ಬೆಲೆ ಏರಿಕೆ ಆಗದಂತೆ ಸೇಸ್ ರಾಜ್ಯ ಸರ್ಕಾರ ಬರಿಸಲು ಸಿಎಂ ಅವರಿಗೆ ಆಗ್ರಹಿಸುವದಾಗಿ ಹೇಳಿದರು.

ರಾಜ್ಯದಲ್ಲಿಯೂ ಬಿಜೆಪಿ ಜನರ ಲೂಟಿಗೆ ಇಳಿದಿದೆ. ಬಿಡಿಎ ಜಾಗಕ್ಕೆ ಸ್ಕ್ವಾಯರ್ ಫೀಟ್ ಲೆಕ್ಕದಲ್ಲಿ ಕೋಟಿ ಕೋಟಿ ಲೂಟಿ ಹೊಡೆಯುತ್ತಿದೆ ಎಂದು ಡಿಕೆಶಿ ಆರೋಪಿಸಿದರು.

ಕಾಂಗ್ರೆಸ್ ಪಕ್ಷಕ್ಕೆ ಗಾಂಧಿ ಕುಟುಂಬ ಅಗತ್ಯ

ನಮ್ಮನ್ನು ಕಷ್ಟಕಾಲದಲ್ಲಿ ಗಾಂಧಿ ಕುಟುಂಬ ಉಳಿಸಿದೆ. ಎರಡು ಬಾರಿ ಮನಮೋಹನ ಸಿಂಗ್ ಅವರನ್ನು ಕರೆದು ಪ್ರಧಾನಿ ಮಾಡಿದ ಕುಟುಂಬ ಇದು. ಜಿ- 23 ಯಾರು ಏನು‌ ಮಾತಾಡಿಲ್ಲ, ಗಾಂಧಿ ಕುಟುಂಬ ಇಲ್ಲವೆಂದರೆ ಕಾಂಗ್ರೆಸ್ ಇಲ್ಲ, ನೋ ಕಾಂಗ್ರೆಸ್ ವಿತ್‌ಔಟ್ ಗಾಂಧಿ ಫ್ಯಾಮಿಲಿ ಎಂದು ಪ್ರತಿಪಾದಿಸಿದರು.

ಪಠ್ಯಪುಸ್ತಕದಲ್ಲಿ ಭಗವದ್ಗೀತೆ ವಿಚಾರ

ಕಾಂಗ್ರೆಸ್ ಭಗವದ್ಗೀತೆ ವಿರೋಧಿ ಅಲ್ಲ, ರಾಜೀವ್ ಗಾಂಧಿ ಪ್ರಧಾನಿ ಇದ್ದಾಗ ದೂರದರ್ಶನದಲ್ಲಿ ರಾಮಾಯಣ , ಮಹಾಭಾತತ ಬಗ್ಗೆ ತೋರಿಸಿ ಭಗವದ್ಗೀತೆ ಬಗ್ಗೆ ಜನರಿಗೆ ತಲುಪಿಸಿದ್ದೆ ಕಾಂಗ್ರೆಸ್ ಪಕ್ಷ ಎಂದರು. ಯದಾ ಯದಾ ಹೀ ಧರ್ಮಸ್ಯ’ ಶ್ಲ್ಯೋಕ್ ಹೇಳಿದ ಡಿಕೆಶಿ, ಇದೇನು ಬಿಜೆಪಿ ಅವರು ನನಗೆ ಹೇಳಿಕೊಟ್ಟಿದ್ದಾ ಎಂದು ಪ್ರಶ್ನೆ ಮಾಡಿದರು.

ಧರ್ಮ ಯಾವುದಾದರೇನೂ, ತತ್ವ ಒಂದೆ. ದೇವರು ಹಲವು ನಾಮ ಹಲವು, ಅನೇಕ ಧರ್ಮಗಳಲ್ಲಿ ಒಳ್ಳೆಯ ವಿಚಾರಗಳಿವೆ ಅವು ಅಳವಡಿಸಿಕೊಳ್ಳಬೇಕು. ಈಗ ಹಿಂದುತ್ವ ತಮ್ಮ ಆಸ್ತಿ ಎಂಬಂತೆ ಬಿಜೆಪಿ ಹೇಳುತ್ತಿದೆ ಎಂದರು.

ಇದೇ ವೇಳೆ ಮಹಾರಾಷ್ಟ್ರದ ಶಿವಸೇನೆಯ ನಾಯಕ ಸಂಜಯ್ ರಾವತ್ ಬೆಳಗಾವಿ ಫೈಲ್ಸ್ ಎಂಬ ವಿವಾಧಿತ ಪೊಸ್ಟ್ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿ ಎದ್ದು ನಡೆದರು.

Sneha Gowda

Recent Posts

ಬಾತ್​ರೂಂನಲ್ಲಿ ಹುಟ್ಟಿದ ನವಜಾತ ಶಿಶು : ತಕ್ಷಣವೆ ಕತ್ತು ಹಿಸುಕಿ ಕೊಂದ ತಾಯಿ

ಕೊಚ್ಚಿಯ ಮಹಿಳೆಯರೊಬ್ಬರು ನವಜಾತ ಶಿಶುವನ್ನು ಕತ್ತು ಹಿಸುಕಿ, ಕೆಳಗೆ ಎಸೆದು ಕೊಂದಿರುವ ಆಘಾತಕಾರಿ ಘಟನೆ ನಡೆದಿದೆ. ಕೊಚ್ಚಿಯ  ಅಪಾರ್ಟ್‌ಮೆಂಟ್‌ನಲ್ಲಿ ಪೋಷಕರೊಂದಿಗೆ…

12 mins ago

ಮುಕ್ಕಾಲು ಕರ್ನಾಟಕಕ್ಕೆ ಸುಡು ಬಿಸಿಲು : ಉಳಿದೆಡೆ ಗುಡುಗು ಸಹಿತ ಮಳೆ

ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆಯಾಗಲಿದ್ದು, ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಪ್ರಮುಖವಾಗಿ ಬೆಂಗಳೂರು ಗ್ರಾಮಾಂತರ, ರಾಮನಗರ, ಬೆಂಗಳೂರು…

36 mins ago

ಈ ರಾಶಿಯವರಿಗೆ ಇಂದು ಆಪ್ತರಿಂದ ಆರ್ಥಿಕವಾಗಿ ಸಹಾಯ

ದೈಹಿಕ ಶ್ರಮ ಹೆಚ್ಚಲಿದೆ. ಸಂಶಯಾಸ್ಪದವಾದ ಹಣಕಾಸು ವ್ಯವಹಾರದಲ್ಲಿ ತೊಡಗುವುದು ಬೇಡ. ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಆಪ್ತರಿಂದ ಸಿಹಿ…

56 mins ago

85 ರೂನಷ್ಟು ಕಡಿಮೆಗೊಂಡ ಚಿನ್ನದ ಬೆಲೆ : ಇಲ್ಲಿದೆ ಇವತ್ತಿನ ದರಪಟ್ಟಿ

ಮೂರ್ನಾಲ್ಕು ವಾರಗಳ ಅದ್ವಿತೀಯ ರೀತಿಯಲ್ಲಿ ಏರಿಕೆ ಕಂಡಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಈ ವಾರ ಶಾಂತಗೊಂಡಿವೆ. ಈ ವಾರ…

1 hour ago

ಇಂದು ವಿಶ್ವ ನಗುವಿನ ದಿನ : ನಾವು ನಗೋಣ, ಇನ್ನೊಬ್ಬರನ್ನು ನಗಿಸೋಣ

ʻನಗುʼ ಇದು ಎಲ್ಲ ಮಾನಸಿಕ ಹಾಗೂ ದೈಹಿಕ ಕಾಯಿಲೆಗಳನ್ನು ದೂರವಿರಿಸುವ ಒಂದು ಅಸ್ತ್ರ.ಹೀಗಾಗಿಯೇ ನಗುವಿನ ಪ್ರಾಮುಖ್ಯತೆಯನ್ನು ಸಾರಲು ವಿಶ್ವದಾದ್ಯಂತ ಮೇ…

1 hour ago

ಗುಜರಾತ್ ವಿರುದ್ಧ ಆರ್‌ಸಿಬಿಗೆ 4 ವಿಕೆಟ್‌ಗಳ ಭರ್ಜರಿ ಜಯ

ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಆರ್‌ಸಿಬಿ ಮತ್ತು ಗುಜರಾತ್ ಟೈಟನ್ಸ್ ಮಧ್ಯೆ ನಡೆದ ರೋಚಕ ಪಂದ್ಯದಲ್ಲಿ 152 ರನ್ ಗಳಿಸುವ ಮೂಲಕ ಆರ್‌ಸಿಬಿ…

9 hours ago