Categories: ಕಲಬುರಗಿ

ಬಸ್ ಅಪಘಾತದಲ್ಲಿನ ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡಬೇಕು: ಕೇಂದ್ರ ಸಚಿವ ಭಗವಂತ ಖೂಬಾ

ಕಲಬುರಗಿ: ಕಮಲಾಪುರ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಬೆಳಿಗ್ಗೆ ಸಂಭವಿಸಿದ ಬಸ್ ಅಪಘಾತದಲ್ಲಿನ ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡಬೇಕೆಂದು ಕಲಬುರಗಿಯ ಯುನೈಟೆಡ್ ಆಸ್ಪತ್ರೆಯ ವೈದ್ಯರಿಗೆ ಕೇಂದ್ರ ರಾಸಾಯನಿಕ, ರಸಗೊಬ್ಬರ ಹಾಗೂ ನೂತನ ಮತ್ತು ನವೀಕರಿಸಬಹುದಾದ ಇಂಧನ ಖಾತೆಯ ರಾಜ್ಯ ಸಚಿವ ಹಾಗೂ ಬೀದರ ಸಂಸದ ಭಗವಂತ ಖೂಬಾ ಅವರು ಸೂಚಿಸಿದರು.

ಶುಕ್ರವಾರ ಸಂಜೆ ಯುನೈಟೆಡ್ ಆಸ್ಪತ್ರೆಗೆ ಭೇಟಿ ನೀಡಿ ದಾಖಲಾಗಿರುವ 8 ಮಂದಿ ಗಾಯಾಳುಗಳನ್ನು ಭೇಟಿ ಮಾಡಿ ಆರೋಗ್ಯ ಸ್ಥಿತಿ ವಿಚಾರಿಸಿದ ಸಚಿವರು, ನಾವು ನಿಮ್ಮೊಂದಿಗಿದ್ದೇವೆ. ಆಸ್ಪತ್ರೆಯ ಗಾಯಾಳುಗಳ ವೆಚ್ಚವನ್ನು ಜಿಲ್ಲಾಡಳಿತ ಭರಿಸಲಿದೆ
ಎಂದು ಹೇಳಿ ಅವರಿಗೆ ಧೈರ್ಯ ತುಂಬಿದರು.

ಬಸ್‍ನಲ್ಲಿ ಸಂಚರಿಸುತ್ತಿದ್ದ ಎಲ್ಲಾ 35 ಜನರು ತೆಲಂಗಾಣಕ್ಕೆ ಸೇರಿದವರರಾಗಿದ್ದು, ಗೋವಾದಿಂದ ಬಸ್ ಹೈದ್ರಾಬಾದ್‍ಗೆ
ತೆರಳುತ್ತಿತು. ಶುಕ್ರವಾರ ಬೆಳಿಗ್ಗೆ 6.30ಕ್ಕೆ ಅಪಘಾತ ಸಂಭವಿಸಿದ್ದು, ಇದಕ್ಕೆ ಬಸ್ ಚಾಲಕನ ಬೇಜಬ್ದಾರಿಯೇ ಎಂದು ತಿಳಿದು
ಬಂದಿದೆ ಎಂದರು.

ಬಸ್ ಅತಿ ವೇಗವಾಗಿ ಚಾಲನೆ ಮಾಡುತ್ತಿದ್ದುದೇ ಇದಕ್ಕೆ ಕಾರಣ ಎಂದ ಸಚಿವರು, ಪೊಲೀಸರು ಚಾಲಕನ್ನು ಬಂಧಿಸಿದ್ದು, ಮುಂದಿನ ಕಾನೂನು ಕ್ರಮಕೈಗೊಂಡಿದ್ದಾರೆ ಎಂದು ಅವರು ಹೇಳಿದರು.

ಘಟನೆಯಲ್ಲಿ ಇಬ್ಬರು ಮಕ್ಕಳು ಸೇರಿ 7 ಮಂದಿ ಮೃತಪಟ್ಟಿದ್ದು, ಮೃತಪಟ್ಟವರ ಗುರುತುಪತ್ತೆ ಹಚ್ಚಿ ಸಂಬಂಧಿಕರಿಗೆ ಮೃತ
ದೇಹಗಳನ್ನು ಒಪ್ಪಿಸಲು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗಳು ಕ್ರಮಕೈಗೊಂಡಿವೆ ಎಂದು ಅವರು ತಿಳಿಸಿದರು.

ಕರ್ನಾಟಕ ಮುಖ್ಯಮಂತ್ರಿಗಳು, ತೆಲಂಗಾಣ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಸರ್ಕಾರದ ಸಂಬಂಧಪಟ್ಟ
ಇಲಾಖೆಯೊಂದಿಗೆ ಮಾತನಾಡಿ ಸೂಕ್ತ ಪರಿಹಾರ ಕೊಡಿಸುವ ಭರವಸೆಯನ್ನು ಸಚಿವರು ಈ ಸಂದರ್ಭದಲ್ಲಿ ನೀಡಿದರು.

Sneha Gowda

Recent Posts

ಪಕ್ಷಿಗಳಿಗೆ ಆಹಾರ ನೀಡುತ್ತಿರುವ ಕೆಎಲ್‌ಇ ಸಂಸ್ಥೆಯ ವಿದ್ಯಾರ್ಥಿಗಳು

ವಿದ್ಯಾಕಾಶಿ ಧಾರವಾಡದಲ್ಲಿ ಕೆಎಲ್‌ಇ ಸಂಸ್ಥೆಯ ಬಿಬಿಎ ಕಾಲೇಜಿನ ವಿದ್ಯಾರ್ಥಿಗಳು ಪಕ್ಷಿಗಳಿಗೆ ಆಹಾರ ನೀಡುವ ಕೆಲಸ ಮಾಡುತ್ತಿದ್ದಾರೆ.

2 mins ago

ನರೇಂದ್ರ ದಾಭೋಲ್ಕರ್​ ಹತ್ಯೆ ಕೇಸ್: ಇಬ್ಬರಿಗೆ ಜೀವಾವಧಿ ಶಿಕ್ಷೆ, ಮೂವರು ಖುಲಾಸೆ

ಸುಮಾರು 11 ವರ್ಷಗಳ ನಂತರ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ತೀರ್ಪು ನೀಡಿದೆ. ನ್ಯಾಯಾಲಯ ಇಬ್ಬರು ಆರೋಪಿಗಳನ್ನು…

20 mins ago

ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದಕ್ಕಾಗಿ ವ್ಯಕ್ತಿಯ ಹತ್ಯೆ

ನಗರದಲ್ಲಿ ರಾಜಕೀಯ ವೈಷಮ್ಯದ ಹಲ್ಲೆ ಹಾಗೂ ಹತ್ಯೆ ಪ್ರಕರಣಗಳು ಮುಂದುವರಿದಿವೆ. ಕಾಂಗ್ರೆಸ್ ಪಕ್ಷದ ಪರ ಪ್ರಚಾರ ಮಾಡಿದ್ದಕ್ಕಾಗಿ ಅಫಜಲಪುರ ತಾಲೂಕಿನ…

31 mins ago

ಬೀದರ್: ಸಂಭ್ರಮದಿಂದ ವಿಶ್ವಗುರು ಬಸವಣ್ಣನವರ ಜಯಂತಿ‌ ಆಚರಣೆ

ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಜಯಂತಿ‌ ನಗರದಲ್ಲಿ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.

1 hour ago

ಡಿ ಬಾಸ್ ದರ್ಶನ್ ಬಹು ನಿರೀಕ್ಷಿತ ಡೆವಿಲ್ ಚಿತ್ರದ ಮೇಕಿಂಗ್ ಔಟ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಹು ನಿರೀಕ್ಷಿತ ಡೆವಿಲ್ ಚಿತ್ರದ ಮೇಕಿಂಗ್‌ ರಿಲೀಸ್ ಆಗಿದೆ. ಸಿನಿಮಾದ ತೆರೆ ಹಿಂದಿನ ಗ್ಲಿಂಪ್ಸ್ ಇದಾಗಿದೆ.…

1 hour ago

ಧಾರವಾಡದ ಪೇಡಾ ಈ ಬಾರಿ ಯಾರ ಬಾಯಿಗೆ ಬೀಳಲಿದೆ?; ಜೋಶಿ ವಿರುದ್ಧ ವಿನ್ ಆಗ್ತಾರಾ ವಿನೋದ್

ಕರ್ನಾಟಕದ ವಾಣಿಜ್ಯ ನಗರಿ ಎಂದೇ ಪ್ರಸಿದ್ಧಿ ಪಡೆದ ಜಿಲ್ಲೆ ಧಾರವಾಡ. ಬಾಯಿ ನೀರೂರಿಸುವ ಧಾರವಾಡ ಪೇಡಾಕ್ಕೆ ಧಾರವಾಡವಲ್ಲದೆ ಬೇರೆ ಸಾಟಿಯಿಲ್ಲ,…

1 hour ago