News Karnataka Kannada
Saturday, April 13 2024
Cricket
ಕಲಬುರಗಿ

ಪಿಎಸ್ಐ ನೇಮಕಾತಿ : ಡಿವೈಎಸ್ಪಿ, ಸಿಪಿಐನ್ನು ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದ ಸಿಐಡಿ

Latest News
Photo Credit :

ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿಯ ಫಿಂಗರ್ ಪ್ರಿಂಟ್ ವಿಭಾಗದ ಸಿಪಿಐ ಆಗಿರುವ ಆನಂದ ಮೇತ್ರಿ ಅವರನ್ನು ಸಿಐಡಿ ಕಚೇರಿಗೆ ಕರೆತಂದು ಸಿಐಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ಧಾರೆ.

ಇನ್ನೊಂದೆಡೆ  ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಮತ್ತೆ‌ ಸಿಐಡಿ ಕಚೇರಿಗೆ ಲಿಂಗಸುಗೂರು ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ ಅವರನ್ನು ಕರೆಸಲಾಗಿದೆ. ನಿನ್ನೆ ಐದು ಗಂಟೆ ಕಾಲ ವಿಚಾರಣೆಗೊಳಗಾಗಿದ್ದರೂ ಇಂದು ಮತ್ತೆ ವಿಚಾರಣೆಗೆ ಸಿಐಡಿ ಅಧಿಕಾರಿಗಳು ಬರ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಮಲ್ಲಿಕಾರ್ಜುನ್‌ ಸಾಲಿ ಮತ್ತೆ ಆಗಮಿಸಿದ್ದು ವಿಚಾರಣೆ ನಡೆದಿದೆ.

ಮಧ್ಯಾಹ್ನ 3.30ರವರೆಗೂ ತೀವ್ರ ವಿಚಾರಣೆಯ ನಂತರ ಇಬ್ಬರೂ ಆರೋಪಿತ ಪೋಲೀಸ್‌ ಅಧಿಕಾರಿಗಳನ್ನು ಸಿಐಡಿ ಅಧಿಕಾರಿಗಳು ವೈದ್ಯಕೀಯ ತಪಾಸಣೆಗಾಗಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ಇಬ್ಬರೂ ಅಧಿಕಾರಿಗಳನ್ನು ಬುಧವಾರ ನಿರಂತರ ವಿಚಾರಣೆ ನಡೆಸಿದ್ದ ಸಿಐಡಿ ಅಧಿಕಾರಿಗಳು, ಗುರುವಾರ ಬೆಳಿಗ್ಗೆ ಮತ್ತೆ ಕರೆಸಿದ್ದರು. ಸಂಜೆಗೆ ಅವರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಸಿಐಡಿ ಮೂಲಗಳು ಮಾಹಿತಿ ನೀಡಿವೆ.

ಬ್ಲೂಟೂತ್ ಬಳಸಿ ವಾಮಮಾರ್ಗದ ಮೂಲಕ ಅಭ್ಯರ್ಥಿಗಳನ್ನು ಪಾಸ್ ಮಾಡಿಸಲು, ಆರೋಪಿ ರುದ್ರಗೌಡ ಪಾಟೀಲ ಬಳಿ ಡೀಲ್ ಮಾಡಿದ ಆರೋಪ ಇವರ ಮೇಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು