News Karnataka Kannada
Wednesday, April 24 2024
Cricket
ಕಲಬುರಗಿ

ಪಿಎಸ್​ಐ ನೇಮಕಾತಿ ಅಕ್ರಮ: ಸಿಐಡಿ ತನಿಖೆಗೆ ನೀಡಿದ್ದೇವೆ- ಸಿಎಂ ಬಸವರಾಜ ಬೊಮ್ಮಾಯಿ

Cm Bommai
Photo Credit :

ಕಲಬುರಗಿ: ಪಿಎಸ್​ಐ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ದೂರು ಬಂದ ತಕ್ಷಣವೇ ಕೂಲಂಕುಶ ತನಿಖೆಗೆ ನಾವೇ ಸಿಐಡಿ ತನಿಖೆಗೆ ನೀಡಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ನಗರದ ಡಿ.ಆರ್ .ಮೈದಾನದಲ್ಲಿ ಮಾತನಾಡಿದ ಅವರು ಉತ್ತರ ಪತ್ರಿಕೆಯಲ್ಲಿ ವ್ಯತ್ಯಾಸ ಬಂದಿದ್ದರಿಂದ ಪ್ರಕರಣವನ್ನು ಸಿಐಡಿಗೆ ನಾವೇ ನೀಡಿದ್ದೇವೆ.ಸಿಐಡಿ ಹಲವಾರು ತಂಡದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರು.

ಸದ್ಯ ಶಿಕ್ಷಣ ಸಂಸ್ಥೆ ಮುಖ್ಯಸ್ಥರು ಪರಾರಿಯಾಗಿದ್ದು, ಎಂ.ವೈ ಪಾಟೀಲ್​​ ಹಾಗೂ ಗನ್ ಮ್ಯಾನ್​ ಹಯ್ಯಾಳಿ ದೇಸಾಯಿ ಅವರಿಗೆ ಸಹಾಯ ಮಾಡಿದ ರುದ್ರೇಗೌಡ ಪಾಟೀಲ್​ ಬಂಧನವಾಗಿದೆ ಎಂದರು.ಇನ್ನಷ್ಟು ಆಳವಾಗಿ ತನಿಖೆ ಮಾಡಲು ಸೂಚಿಸಲಾಗಿದೆ.ಯುಪಿಎಸ್ಸಿ ಮಾದರಿಯಲ್ಲಿ ಪರೀಕ್ಷೆ ನಡೆಯಬೇಕು ಅನ್ನೋ ರೀತಿ ವ್ಯವಸ್ಥೆ ಮಾಡಲಾಗಿತ್ತು ಇಂತಹ ಪಾರದರ್ಶಕತೆ ಇದ್ದಾಗಲು ಅಕ್ರಮವಾಗಿ ಪರೀಕ್ಷೆ ಬರೆದಿರುವುದು ಅಚ್ಚರಿಯಾಗಿದೆ ಎಂದರು.

ಇನ್ನು ಪ್ರಕರಣದಲ್ಲಿ ಕೇಳಿ ಬಂದ ಮಹಿಳೆ ದಿವ್ಯಾ ಹಾಗರಗಿ ನಮ್ಮ ಪಕ್ಷದಲ್ಲಿ ಯಾವುದೇ ಜವಬ್ದಾರಿ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದರು.ಯಾರೇ ತಪ್ಪು ಮಾಡಿದ್ರು ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ.ಬೇರೆ ಪಕ್ಷದವರು ಯಾವ ರೀತಿ ಈ ಹಿಂದೆ ಪ್ರಕರಣ ಮುಚ್ಚಿ ಹಾಕಿದ್ದಾರೆ ಎಂಬುದು ಗೊತ್ತಿದೆ.ಮರು ಪರೀಕ್ಷೆ ನಡೆಸಬೇಕಾ ಅಥವಾ ಬೇಡವಾ ಅನ್ನೋದರ ಬಗ್ಗೆ ಮಧ್ಯಂತರ ವರದಿ ಬಂದ ನಂತರವೇ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು