News Karnataka Kannada
Friday, April 12 2024
Cricket
ಕಲಬುರಗಿ

ಕಲಬುರಗಿ: ಮಿನಿ ಲಾರಿ ಹಾಯ್ದು ಮೂವರು ಸಾವು

Husband kills wife, cooks her in kadai
Photo Credit :

ಸೇಡಂ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ಕಡತಾಲ ತಾಂಡಾದಲ್ಲಿ ಮದುವೆ ಮೆರವಣಿಗೆಯಲ್ಲಿ ಡಿ.ಜೆ. ಇದ್ದ ಮಿನಿ ಲಾರಿ ಹಾಯ್ದು ಮೂವರು ಮೃತಪಟ್ಟ ಘಟನೆ ಬುಧವಾರ ತಡರಾತ್ರಿ ಸಂಭವಿಸಿದೆ.

ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, 8ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಮೇದಕ್ ತಾಂಡಾದ ಸುಗುಣಿಬಾಯಿ (40), ತೆಲಂಗಾಣದ ವಿಜ್ಜಿಬಾಯಿ ರಾಠೋಡ (30), ಕುಮಾರನಾಯಕ ರಾಠೋಡ (35) ಮೃತಪಟ್ಟವರು.

ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಸೂತಕದ ವಾತಾವರಣ ಆವರಿಸಿತ್ತು. ಗುರುವಾರ ಬೆಳಿಗ್ಗೆ ವರನ ಮನೆಯಲ್ಲಿ ಮದುವೆ ನಡೆಯಬೇಕಿತ್ತು. ಮೆರವಣಿಗೆಗೆ ಪಕ್ಕದ ತೆಲಂಗಾಣದಿಂದ ಡಿ.ಜೆ ತರಿಸಲಾಗಿತ್ತು. ವಧುವಿನ ಮೆರವಣಿಗೆಯಲ್ಲಿ ವಾಹನದ ಮುಂದೆ ನೃತ್ಯ ಮಾಡುತ್ತ ಮನೆ ಬರುತ್ತಿದ್ದರು. ಈ ವೇಳೆ ಮಿನಿ ಲಾರಿ ಏಕಾಏಕಿ ನೃತ್ಯ ಮಾಡುತಿದ್ದವರ ಮೇಲೆ ಹರಿದಿದೆ ಎಂದು ತಿಳಿದು ಬಂದಿದೆ. ಗಾಯಗೊಂಡವರನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಮುಧೋಳ ಪೊಲೀಸ್ ಇನ್‌ಸ್ಪೆಕ್ಟರ್‌ ಸಂದೀಪಸಿಂಗ್ ಮುರಗೋಡ ಹಾಗೂ ಪಿಎಸ್‌ಐಗಳಾದ ಚಿದಾನಂದ ಕಾಶಪ್ಪಗೋಳ, ಇಂದಿರಾಬಾಯಿ ಪಾಟೀಲ ಸ್ಥಳಕ್ಕೆ ಭೇಟಿ ನೀಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು