News Karnataka Kannada
Saturday, April 13 2024
Cricket
ಬೀದರ್

ಬೀದರ್: ಸುಳ್ಳು ಮಾಹಿತಿ ನೀಡಿ ದುರ್ನಡತೆ; ಇಬ್ಬರು ಪೊಲೀಸ್ ಸಿಬ್ಬಂದಿ ಅಮಾನತು

 ಪೇದೆ ಹುದ್ದೆಗಳ ಭರ್ತಿಗಾಗಿ ದೇಹ ದಾರ್ಡ್ಯತೆ ಪರೀಕ್ಷೆ ವೇಳೆ ಹಿರಿಯ ಅಧಿಕಾರಿಗಳಿಗೆ ಸುಳ್ಳು ಮಾಹಿತಿ ನೀಡಿ ದುರ್ನಡೆತೆ ತೋರಿದ ಹಿನ್ನಲೆ ಪೊಲೀಸ್ ಇಲಾಖೆಯ ಇಬ್ಬರು ಸಿಬಂದಿಗಳನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಎಸ್‌ಪಿ ಚನ್ನಬಸವಣ್ಣ ಲಂಗೋಟಿ ತಿಳಿಸಿದ್ದಾರೆ.
Photo Credit : News Kannada

ಬೀದರ್: ಪೇದೆ ಹುದ್ದೆಗಳ ಭರ್ತಿಗಾಗಿ ದೇಹ ದಾರ್ಡ್ಯತೆ ಪರೀಕ್ಷೆ ವೇಳೆ ಹಿರಿಯ ಅಧಿಕಾರಿಗಳಿಗೆ ಸುಳ್ಳು ಮಾಹಿತಿ ನೀಡಿ ದುರ್ನಡೆತೆ ತೋರಿದ ಹಿನ್ನಲೆ ಪೊಲೀಸ್ ಇಲಾಖೆಯ ಇಬ್ಬರು ಸಿಬ್ಬಂದಿಗಳನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಎಸ್‌ಪಿ ಚನ್ನಬಸವಣ್ಣ ಲಂಗೋಟಿ ತಿಳಿಸಿದ್ದಾರೆ.

ಡಿಎಆರ್ ಎಪಿಸಿ ಐವಾನ್ ಮತ್ತು ಜನವಾಡಾ ಠಾಣೆಯ ಸಿಪಿಸಿ ಶಫಿಕ್ ಅಮಾನತ್ತುಗೊಂಡ ಸಿಬ್ಬಂದಿಗಳು. ಪೊಲೀಸ್ ಪೇದೆ ಭರ್ತಿಗಾಗಿ ಶುಕ್ರವಾರ ನಗರದ ಕವಾಯಿತು ಮೈದಾನದಲ್ಲಿ ದೇಹ ದ್ರಾಡ್ಯತೆ ಮತ್ತು ದೇಹ ಸಹಿಷ್ಣುತೆ (ಪಿಎಸ್‌ಟಿ-ಪಿಇಟಿ) ಪರೀಕ್ಷೆ ನಡೆಸಲಾಗಿತ್ತು. ಪರೀಕ್ಷೆಯಲ್ಲಿ ಅಭ್ಯರ್ಥಿಯಾಗಿದ್ದ ಐವಾನ್ 1600 ಮೀ. ಓಟವನ್ನು 6.30 ನಿಮಿಷದಲ್ಲಿ ಪೂರ್ಣಗೊಳಿಸಬೇಕಾಗಿತ್ತು. ಇವರ ಓಟದ ಸಮಯ ನಿರೀಕ್ಷೆಗಾಗಿ ಸಿಪಿಸಿ ಶಫಿಕ್ ಅವರನ್ನು ನೇಮಿಸಲಾಗಿತ್ತು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಭ್ಯರ್ಥಿ ಐವಾನ್ ಓಟದ ವಿಷಯದಲ್ಲಿ ಅಧಿಕಾರಿಗಳಿಗೆ ಸುಳ್ಳು ಮಾಹಿತಿ ದುರ್ನಡತೆ ತೋರಿದ್ದು, ಇತರ ಓಟದ ಸಮಯ ನಿರೀಕ್ಷೆಗಾಗಿ ನಿಗದಿಪಡಿಸಿದ್ದ ಶಫಿಕ್ ಅವರು ಸಹ ಐವಾನ್ ಅವರು ಓಟ್ ಪೂರ್ಣಗೊಳಿಸಿದ್ದಾರೆಂದು ಸುಳ್ಳು ಮಾಹಿತಿ ನೀಡಿ ಕರ್ತವ್ಯ ನಿರ್ವಹಣೆಯಲ್ಲಿ ಬೇಜಬ್ದಾರಿತನ ತೋರಿದ್ದಾರೆ. ಈ ಕುರಿತು ಡಿಎಆರ್ ಡಿಎಸ್‌ಪಿ ವರದಿ, ಸಿಸಿಟಿವಿ ಮತ್ತು ವಿಡಿಯೋ ರಿಕಾರ್ಡಿಂಗ್ ಪರಿಶೀಲಿಸಿದಾಗ ಸಿಬಂದಿಗಳ ದುರ್ನಡತೆ ಬಯಲಾಗಿದ್ದು, ಇಬ್ಬರನ್ನು ಅಮಾನತು ಮಾಡಲಾಗಿದೆ ಎಂದು ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು