News Karnataka Kannada
Monday, April 29 2024
ಬೀದರ್

ಅಗ್ನಿಶಾಮಕ ಸೇವ ಸಪ್ತಾಹ ದಿನ ಆಚರಣೆ : ವೀರ ಮರಣ ಹೊಂದಿದ ಅಗ್ನಿಶಾಮಕರಿಗೆ ಶ್ರದ್ದಾಂಜಲಿ

ಮುಂಬೈ ಬಂದರಿನ ವಿಕ್ಟೋರಿಯಾ ಡಾಕ್‌ನಲ್ಲಿ ಸ್ಪೋಟಕ ವಸ್ತುಗಳನ್ನು ಸಾಗಿಸುತ್ತಿದ್ದ “ಎಸ್.ಎಸ್ ಪೋರ್ಟ ” ಎಂಬ ಹಡಗು 14 ನೇ ಏಪ್ರೀಲ್ -1944 ರಂದು ಘೋರ ಅಗ್ನಿ ಅನಾಹುತಕ್ಕೆ ಒಳಗಾಗಿದ್ದು, ಆ ಬೆಂಕಿಯನ್ನು ನಂದಿಸಲು ಮುಂಬೈ ಫೈರ್ ಬ್ರಿಗೇಡ್‌ನ ಅಧಿಕಾರಿ ಮತ್ತು ಸಿಬ್ಬಂದಿಯವರು ಕಾರ್ಯ ನಿರತರಾಗಿದ್ದ ಸಂದರ್ಭದಲ್ಲಿ ಹಡಗು ಸ್ಪೋಟಗೊಂಡು 66 ಜನ ಅಧಿಕಾರಿ ಮತ್ತು ಸಿಬ್ಬಂಗಳು ವೀರ ಮರಣ ಹೊಂದಿದರು.
Photo Credit : NewsKarnataka

ಬೀದರ್‌ : ಮುಂಬೈ ಬಂದರಿನ ವಿಕ್ಟೋರಿಯಾ ಡಾಕ್‌ನಲ್ಲಿ ಸ್ಪೋಟಕ ವಸ್ತುಗಳನ್ನು ಸಾಗಿಸುತ್ತಿದ್ದ “ಎಸ್.ಎಸ್ ಪೋರ್ಟ ” ಎಂಬ ಹಡಗು 14 ನೇ ಏಪ್ರೀಲ್ -1944 ರಂದು ಘೋರ ಅಗ್ನಿ ಅನಾಹುತಕ್ಕೆ ಒಳಗಾಗಿದ್ದು, ಆ ಬೆಂಕಿಯನ್ನು ನಂದಿಸಲು ಮುಂಬೈ ಫೈರ್ ಬ್ರಿಗೇಡ್‌ನ ಅಧಿಕಾರಿ ಮತ್ತು ಸಿಬ್ಬಂದಿಯವರು ಕಾರ್ಯ ನಿರತರಾಗಿದ್ದ ಸಂದರ್ಭದಲ್ಲಿ ಹಡಗು ಸ್ಪೋಟಗೊಂಡು 66 ಜನ ಅಧಿಕಾರಿ ಮತ್ತು ಸಿಬ್ಬಂಗಳು ವೀರ ಮರಣ ಹೊಂದಿದರು.

ಈ ನೇನಪಿಗಾಗಿ ಏಪ್ರೀಲ್ 14ರಂದು ಹುತಾತ್ಮರ ದಿನಾಚರಣೆಯನ್ನಾಗಿ ಆಚರಣೆ ಮಾಡಲಾಗುತ್ತದೆ. ಅಂದು ಸಾರ್ವಜನಿಕರ ಪ್ರಾಣ ಮತ್ತು ಆಸ್ತಿ ರಕ್ಷಣಾ ಕಾರ್ಯದಲ್ಲಿ ತಮ್ಮ ಪ್ರಾಣವನ್ನು ಬಲಿದಾನಗೈದು ಅಮರರಾದ ವೀರ ಅಗ್ನಿಶಾಮಕರಿಗೆ ಶ್ರದ್ದಾಂಜಲಿಯನ್ನು ಅರ್ಪಿಸಲಾಗುತ್ತದೆ ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ರವೀಂದ್ರ ಎ. ಘಟಗೆ ಅವರು ಹೇಳಿದರು.

ರವಿವಾರದಂದು ಬೀದರ ನಗರದ ಅಗ್ನಿಶಾಮಕ ಠಾಣೆಯಲ್ಲಿ ಅಗ್ನಿಶಾಮಕ ಸೇವಾ ಸಪ್ತಾಹ ದಿನದ ಅಂಗವಾಗಿ ಸಾರ್ವಜನಿಕರ ಪ್ರಾಣ ಮತ್ತು ಆಸ್ತಿ ರಕ್ಷಣಾ ಕಾರ್ಯದಲ್ಲಿ ತಮ್ಮ ಪ್ರಾಣವನ್ನು ಬಲಿಗೈದು ಅಮರರಾದ ವೀರ ಅಗ್ನಿಶಾಮಕರಿಗೆ ಶ್ರದ್ದಾಂಜಲಿ ಸಲ್ಲಿಸಿ ಮಾತನಾಡಿದರು.
ಪ್ರತಿ ವರ್ಷವು ದೇಶದಾದ್ಯಂತ ಅಗ್ನಿಶಾಮಕ ಸೇವಾ ಸಪ್ತಾಹವನ್ನಾಗಿ ಆಚರಿಸಲಾಗುತ್ತದೆ.

ಆದರಂತೆ ಬೀದರ ಜಿಲ್ಲೆಯಲ್ಲಿ ದಿನಾಂಕ 14-04-2024 ರಿಂದ 20-04-2024ರ ವರೆಗೆ ಬೀದರ, ಹುಮನಾಬಾದ, ಭಾಲ್ಕಿ, ಬಸವಕಲ್ಯಾಣ, ಔರಾದ ಮತ್ತು ಚಿಟ್ಟಗುಪ್ಪಾ ಅಗ್ನಿಶಾಮಕ ಠಾಣೆಗಳಲ್ಲಿ ಸಪ್ತಾಹ ನಡೆಯಲ್ಲಿದೆ. ಈ ಸಪ್ತಾಹದಲ್ಲಿ ಸಾರ್ವಜನಿಕರಿಗೆ ಅಗ್ನಿ ಸುರಕ್ಷತೆಯ ಬಗ್ಗೆ ತಿಳುವಳಿಕೆ ನೀಡಿ, ಅಗ್ನಿಶಮನ ವಿಚಾರಗಳ ಬಗ್ಗೆ ಅಣಕು ಪ್ರದರ್ಶನಗಳನ್ನು ಅಯೋಜಿಸಲಾಗಿದೆ ಎಂದು ಹೇಳಿದರು.

2024ನೇ ಸಾಲಿನ ಅಗ್ನಿಶಾಮಕ ಸೇವಾ ಸಪ್ತಾಹದ ಘೋಷವಾಕ್ಯ “ಅಗ್ನಿ ಸುರಕ್ಷತೆಯನ್ನು ಖಚಿತಪಡಿಸಿಕೊಳಿ, ರಾಷ್ಟç ನಿರ್ಮಾಣಕ್ಕೆ ಕೊಡಗೆ ನೀಡಿ” (Ensure Fire safety, Contribute toards Nation Building) ಎನ್ನುವ ಘೊಷವಾಕ್ಯದ ಬ್ಯಾನರಗಳನ್ನು ಪ್ರದರ್ಶಿಸಿ ಅಗ್ನಿ ನಿವಾರಣೆ ಹಾಗೂ ಅಗ್ನಿ ಅನಾಹುತಗಳ ಬಗ್ಗೆ ಕರಪತ್ರಗಳನ್ನು ಮೂಲಕ ಮುದ್ರಿಸಿ ಸಾರ್ವಜನಿಕರಿಗೆ ವಿತರಿಸುವ ಮೂಲಕ ಸಾರ್ವಜನಿಕರಲ್ಲಿ ಅಗ್ನಿ ಮುನ್ನಚ್ಚರಿಕೆ ಅರಿವು ಮೂಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬೀದರ ಅಗ್ನಿಶಾಮಕ ದಳದ ಠಾಣಾಧಿಕಾರಿ ನವೀನಬಾಬು ಪಿ., ಪ್ರಮುಖ ಅಗ್ನಿಶಾಮಕ ಗಣಪತಿ ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿಗಳು ಭಾಗವಹಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು