News Karnataka Kannada
Friday, April 19 2024
Cricket
ಬೀದರ್

ಬಿಸಿಲಿನ ತಾಪಮಾನ ಏರುತ್ತಿದಂತೆ ಬಡವರ ಫ್ರಿಡ್ಜ್​​ಗೆ ಭಾರಿ ಡಿಮ್ಯಾಂಡ್

ಬಿಸಿಲಿನ ತಾಪಮಾನ ಏರುತ್ತಿದಂತೆ ಬಡವರ ಫ್ರಿಡ್ಜ್​ಗೆ ಬಾರಿ ಡಿಮ್ಯಾಂಡ್ ಬಂದಿದೆ. ಎರಡು ವರ್ಷದಿಂದ ವ್ಯಾಪಾರವಿಲ್ಲದೆ ನಷ್ಟ ಅನುಭವಿಸಿದ್ದ ಕುಂಬಾರರಿಗೆ ಭರ್ಜರಿ ವ್ಯಾಪಾರವಾಗಿದೆ.
Photo Credit : News Kannada

ಬೀದರ್​: ಬಿಸಿಲಿನ ತಾಪಮಾನ ಏರುತ್ತಿದಂತೆ ಬಡವರ ಫ್ರಿಡ್ಜ್​ಗೆ ಬಾರಿ ಡಿಮ್ಯಾಂಡ್ ಬಂದಿದೆ. ಎರಡು ವರ್ಷದಿಂದ ವ್ಯಾಪಾರವಿಲ್ಲದೆ ನಷ್ಟ ಅನುಭವಿಸಿದ್ದ ಕುಂಬಾರರಿಗೆ ಭರ್ಜರಿ ವ್ಯಾಪಾರವಾಗಿದೆ.

ಎರಡು ವರ್ಷದಿಂದ ಆಗದ ವ್ಯಾಪಾರ ಬೇಸಿಗೆಯಲ್ಲಿ ಆಗಿದ್ದು ಕುಂಬಾರರು ಖಷಿಯಲ್ಲಿದ್ದಾರೆ. ಕೊರೊನಾ ಸಂಕಷ್ಟ ಬೆಸಿಗೆಯಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ವ್ಯಾಪಾರವಿಲ್ಲದೆ ನಷ್ಟದಲ್ಲಿದ್ದವರಿಗೆ ಈ ವರ್ಷ ಬಂಪರ್ ವ್ಯಾಪಾರವಾಗಿದೆ. ಮಡಿಕೆಯಲ್ಲಿನ‌ ನೀರು ಆರೋಗ್ಯಕ್ಕೆ ಒಳ್ಳೆಯದೆಂದು ಜನ ಮಡಿಕೆ ಖರೀದಿಸಲು ಸರತಿ ಸಾಲಿನಲ್ಲಿ ನಿಂತಿದ್ದಾರೆ.

ಗಡಿ ಜಿಲ್ಲೆ ಬೀದರ್ ಅಂದರೆ ಬಿಸಿಲಿನ ನಗರವೆಂದು ಕರೆಯುತ್ತಾರೆ. ಬೆಂಗಳೂರಿನಲ್ಲಿ ಕೆಲಸ ಮಾಡುವ ಕೆಲವು ಕಿರಿಕ್ ಅಧಿಕಾರಿಗಳಿಗೆ ಶಿಕ್ಷೆ ಕೊಡುವ ಬದಲು ನಿಮ್ಮನ್ನು ಬೀದರ್​ಗೆ ವರ್ಗಾವಣೆ ಮಾಡುತ್ತೇನೆ ನೋಡಿ ಎಂದರೆ ಸಾಕು ಅಧಿಕಾರಿ ಕುಂತಲೇ ಬೆವತು ಹೋಗಿರುತ್ತಾರೆ. ಇದಕ್ಕೆ ಕಾರಣ ಬೀದರ್​ನಲ್ಲಿರುವ ಕೆಂಡದಂತ ಬಿಸಿಲು.

ಬೀದರ್​ನಲ್ಲಿ ಕಳೆದೆರಡು ವಾರ 36 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇದರಿಂದ ಜನರು ಮನೆಯಿಂದ ಹೊರಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಬಿಸಿಲಿನ ಝಳಕ್ಕೆ ಕುಡಿಯುವ ನೀರು ಕೂಡ ಬಿಸಿಯಾಗುತ್ತಿದ್ದು ಜನರು ತಮ್ಮ ತಮ್ಮ ಮನೆಯಲ್ಲಿ ತಂಪು ನೀರು ಇಡಲು ಬಡವರ ಫ್ರಿಡ್ಜ್ ಅಂದರೆ ಕುಂಬಾರ ಮಾಡಿದ ಮಣ್ಣಿನ ಮಡಕೆ ಮೊರೆ ಹೋಗಿದ್ದಾರೆ.

ಹೀಗಾಗಿ ಜನರು ಮಣ್ಣಿನ ಮಡಿಕೆಯನ್ನ ಖರೀದಿಸಲು ಮುಗಿಬಿದ್ದಿದ್ದು ಈಗಾಗಲೇ ಮಾಡಿಟ್ಟಿರುವ ಶೇ 90 ರಷ್ಟು ಮಣ್ಣಿನ ಮಡಿಕೆಗಳು ಕಾಲಿಯಾಗಿದ್ದು ಹೊಸದಾಗಿ ಮತ್ತೆ ಮಣ್ಣಿನ ಮಡಿಕೆಯನ್ನ ಕುಂಬಾರರು ಹಗಲು-ರಾತ್ರಿ ಎನ್ನದೆ ಮಾಡುತ್ತಿದ್ದಾರೆ. ಈ ವರ್ಷ ಮಣ್ಣಿನ ಮಡಿಕೆಗಳು ಭಾರಿ ಪ್ರಮಾಣದಲ್ಲಿ ಮಾರಟವಗಿದ್ದು, ಕುಂಬಾರರು ಖುಷಿಯಾಗಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು