ಬೀದರ್: ಎಸ್ಸೆಸ್ಸೆಲ್ಸಿ ಪರೀಕ್ಷೆ ಸೋಮವಾರ ಆರಂಭಗೊಂಡಿದ್ದು, ಮೊದಲ ದಿನ ನಡೆದ ಮಾತೃಭಾಷೆ ವಿಷಯದ ಪರೀಕ್ಷೆಗೆ 1,030 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.
ಮೊದಲ ಸಲ ಪರೀಕ್ಷೆ ಬರೆಯಬೇಕಿದ್ದ 837, 193 ಪುನರಾವರ್ತಿತ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 1,030 ವಿದ್ಯಾರ್ಥಿಗಳು ಗೈರಾಗಿದ್ದಾರೆ.
ಪರೀಕ್ಷೆಗೆ ಒಟ್ಟು 27,513 ವಿದ್ಯಾರ್ಥಿಗಳು ಹೆಸರು ನೋಂದಣಿ ಮಾಡಿಸಿಕೊಂಡಿದ್ದರು. 25,693 ಮೊದಲ ಸಲ ಪರೀಕ್ಷೆ ಬರೆಯುವವರು, 790 ಪುನರಾವರ್ತಿತ ವಿದ್ಯಾರ್ಥಿಗಳು ಸೇರಿದ್ದಾರೆ.