Categories: ಬೀದರ್

ಬೀದರ್: 13 ಕೇಂದ್ರದಲ್ಲಿ ಎಸ್ಎಸ್ಎಲ್ ಸಿ ಪರೀಕ್ಷೆಗೆ ಸಿದ್ಧತೆ

ಔರಾದ್: ಮಾರ್ಚ್ 25ರಿಂದ ಆರಂಭವಾಗಲಿರುವ ಎಸ್ಎಸ್ಎಲ್ ಸಿ ಪರೀಕ್ಷೆ ಸಿದ್ಧತೆ ಕುರಿತು ಇಲ್ಲಿಯ ತಹಶೀಲ್ದಾರ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ಪರೀಕ್ಷಾ ಮುಖ್ಯ ಅಧೀಕ್ಷಕರ ಜತೆ ವಿಡಿಯೊ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು.

ಪರೀಕ್ಷೆ ತಾಲ್ಲೂಕಿನಾದ್ಯಂತ ಭಯ, ನಕಲು ಮುಕ್ತವಾಗಿ ನಡೆಯಬೇಕು. ವಿದ್ಯಾರ್ಥಿಗಳಲ್ಲಿ ಪರೀಕ್ಷೆ ಬಗ್ಗೆ ಭಯ ಇರದಂತೆ ನೋಡಿಕೊಳ್ಳಬೇಕು. ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾ ಸೇರಿದಂತೆ ಅಗತ್ಯ ವ್ಯವಸ್ಥೆ ಮಾಡುವಂತೆ’ ಸೂಚಿಸಿದರು.

‘ಈ ಬಾರಿ ಕಮಲನಗರ ಹಾಗೂ ಔರಾದ್ ತಾಲ್ಲೂಕು ಸೇರಿ 3,598 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಒಟ್ಟು 13 ಪರೀಕ್ಷಾ ಕೇಂದ್ರ ಸ್ಥಾಪಿಸಲಾಗಿದೆ. ಕಮಲನಗರದ ಚನ್ನಬಸವ ಪಟ್ಟದ್ದೇವರು ಪ್ರೌಢ ಶಾಲೆ, ಔರಾದ್ ಅಮರೇಶ್ವರ ಕಾಲೇಜು ಹಾಗೂ ಔರಾದ್ ಸರ್ಕಾರಿ ಪ್ರೌಢ ಶಾಲೆಯ ಪರೀಕ್ಷಾ ಕೇಂದ್ರಗಳನ್ನು ಸೂಕ್ಷ್ಮ ಕೇಂದ್ರ ಎಂದು ಗುರುತಿಸಲಾಗಿದೆ. ಠಾಣಾಕುಶನೂರ ಪಬ್ಲಿಕ್ ಶಾಲೆ ಅತಿ ಸೂಕ್ಷ್ಮ ಎಂದು ಗುರುತಿಸಿ ಈ ಕೇಂದ್ರಗಳ ಮೇಲೆ ವಿಶೇಷ ನಿಗಾ ವಹಿಸಲಾಗಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್. ದೊಡ್ಡೆ ತಿಳಿಸಿದರು.

ಈ ಬಾರಿ ಪೂರಕ ಪರೀಕ್ಷೆ ಬದಲು ಮೂರು ಹಂತಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಇದರಿಂದ ಮೊದಲ ಬಾರಿ ನಿರೀಕ್ಷಿತ ಅಂಕಗಳು ಲಭಿಸದಿದ್ದಲ್ಲಿ ಮತ್ತೊಂದು ಅವಕಾಶದಲ್ಲಿ ಫಲಿತಾಂಶ ಸುಧಾರಿಸಿಕೊಳ್ಳಬಹುದಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೆ ನಿರ್ಭಯವಾಗಿ ಪರೀಕ್ಷೆ ಬರೆಯುವಂತೆ’ ಅವರು ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದರು.

ತಹಶೀಲ್ದಾರ್ ನಾಗಯ್ಯ ಹಿರೇಮಠ, ‘ಶಿಕ್ಷಕರು ಸೇರಿದಂತೆ ಶಿಕ್ಷಣ ಇಲಾಖೆ ಸಿಬ್ಬಂದಿ ತಮಗೆ ವಹಿಸಿದ ಜವಾಬ್ದಾರಿ ಅಚ್ಚುಕಟ್ಟಾಗಿ ನಿಭಾಯಿಸಿ ಪರೀಕ್ಷೆ ಯಶಸ್ವಿಯಾಗಿ ನಡೆಯುವಂತೆ ನೋಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಒಟ್ಟು 13 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 155 ಕೊಠಡಿ ಸಿದ್ಧ ಮಾಡಿಕೊಳ್ಳಲಾಗಿದೆ. 200 ಶಿಕ್ಷಕರನ್ನು ಪರೀಕ್ಷಾ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ’ ಎಂದು ನೋಡಲ್ ಅಧಿಕಾ ಈಶ್ವರ ಕ್ಯಾದೆ ತಿಳಿಸಿದರು.

Ashika S

Recent Posts

ಭಯಾನಕ ದೃಶ್ಯ : ರಾಯಲ್ ಎನ್‌ಫೀಲ್ಡ್ ಬೈಕ್‌ಗೆ ಬೆಂಕಿ ತಗುಲಿ 10 ಮಂದಿಗೆ ಗಾಯ

  ಬೈಕ್ ಸ್ಫೋಟಗೊಂಡು ಸುಮಾರು ಹತ್ತು ಮಂದಿ ಗಂಭೀರವಾಗಿ ಗಾಯಗೊಂಡಿರುವ ಭೀಕರ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಈ ಭಯಾನಕ ಘಟನೆ…

11 mins ago

ಗುಂಡ್ಲುಪೇಟೆ ಪೊಲೀಸರಿಂದ ಕಾರ್ಯಾಚರಣೆ : ಗಾಂಜಾ ಸಾಗಿಸುತ್ತಿದ್ದ ಇಬ್ಬರ ಬಂಧನ

ದ್ವಿಚಕ್ರ ವಾಹನದಲ್ಲಿ ಗಾಂಜಾ ಸಾಗಣೆ ಮಾಡುತ್ತಿದ್ದ ವೇಳೆ ಗುಂಡ್ಲುಪೇಟೆ ಪೊಲೀಸರು ದಾಳಿ 2 ಕೆ.ಜಿ‌ ಗಾಂಜಾ ಸಮೇತ ಇಬ್ಬರು ಆರೋಪಿಗಳನ್ನು…

31 mins ago

13 ವಿಮಾನ ನಿಲ್ದಾಣಗಳನ್ನು ಸ್ಫೋಟಿಸುವುದಾಗಿ ಬೆದರಿಕೆ : ಪೊಲೀಸ್‌ ಅಲರ್ಟ್‌

ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಗೆ ಭಾನುವಾರ ಇ-ಮೇಲ್‌ ಮೂಲಕ ಬೆದರಿಕಯೊಂದು ಬಂದಿದ್ದು ಅದರಂತೆ ದೇಶಾದ್ಯಂತ 13 ವಿಮಾನ ನಿಲ್ದಾಣಗಳನ್ನು ಸ್ಫೋಟಿಸುವುದಾಗಿ…

38 mins ago

ಮೂರು ಕೊಲೆ ಕೇಸ್‌ : ಬೆಳ್ಳಂ ಬೆಳಗೆ ಆರೋಪಿ ಕಾಲಿಗೆ ಪೊಲೀಸ್‌ ಗುಂಡೇಟು

ಶಿವಮೊಗ್ಗದಲ್ಲಿ ನಡೆದಿದ್ದ ಗ್ಯಾಂಗ್ ವಾರ್ ಪ್ರಕರಣದಲ್ಲಿ ಮೂವರನ್ನು ನಡುಬೀದಿಯಲ್ಲಿ ಕೊಚ್ಚಿ ಕೊಲೆ ಮಾಡಿದ್ದ ಆರೋಪಿಗಳಲ್ಲಿ ಒಬ್ಬ ರೌಡಿ ಶೀಟರ್‌ ಕಾಲಿಗೆ…

1 hour ago

ಅಮೇರಿಕಾದಿಂದ ತಿರಸ್ಕೃತಗೊಂಡ ಎಂಡಿಎಚ್​ ಮಸಾಲ : ಕಾರಣ ಇಲ್ಲಿದೆ

ಅಮೇರಿಕಾದಲ್ಲಿ ಎಂಡಿಎಚ್​ ಸಾಂಬಾರ್ ಮಸಾಲ ಪದಾರ್ಥಗಳು ತಿರಸ್ಕೃತಗೊಂಡಿವೆ. ಈ ಮಸಾಲಗಳಲ್ಲಿ ಸಾಲ್ಮೋನೆಲ್ಲಾ ಬ್ಯಾಕ್ಟೀರಿಯಾ ಕಂಡುಬಂದಿದ್ದರಿಂದ ಅಮೆರಿಕದ ಆಹಾರ ಹಾಗೂ ಔಷಧ…

1 hour ago

ಜೈಪುರದ ನಾಲ್ಕು ಶಾಲೆಗಳಿಗೆ ಬಾಂಬ್​ ಬೆದರಿಕೆ

ಜೈಪುರದ ಪೊಲೀಸರು ಸೋಮವಾರ ಕನಿಷ್ಠ ನಾಲ್ಕು ಶಾಲೆಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಿದ್ದಾರೆ ಎಂದು ವರದಿ ಮಾಡಿದ್ದಾರೆ. ಸಂತ್ರಸ್ತ…

2 hours ago