Categories: ಬೀದರ್

ಬೀದರ್: ಸಂಚಾರಿ ಪಶು ಆಂಬುಲೆನ್ಸ್ ಟೆಂಡರ್‌ನಲ್ಲಿ ಅವ್ಯವಹಾರ ಆರೋಪ

ಬೀದರ್: ‘ಪಶು ಸಂಗೋಪನಾ ಇಲಾಖೆಯ ಸಂಚಾರಿ ಪಶು ಆಂಬುಲೆನ್ಸ್ ನಿರ್ವಹಣೆ ಟೆಂಡರ್‌ ಅನ್ನು ಅನುಭವವಿಲ್ಲದ ‘ಎಡುಸ್ ಪಾರ್ಕ್’ ಕಂಪನಿಗೆ ವಹಿಸಿಕೊಡುವಲ್ಲಿ ₹ 200 ಕೋಟಿ ಅವ್ಯವಹಾರ ನಡೆದಿರುವ ಅನುಮಾನ ಇದೆ. ಈ ಹಗರಣ ಬಯಲಿಗೆಳೆಯಲು ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು’ ಎಂದು ಬಿಜೆಪಿ ಮುಖಂಡ, ಏಕತಾ ಫೌಂಡೇಷನ್ ರವೀಂದ್ರ ಸ್ವಾಮಿ ಆಗ್ರಹಿಸಿದರು.

ಕೋಟ್ಯಂತರ ರೂಪಾಯಿ ಅವ್ಯವಹಾರದಲ್ಲಿ ಪಶು ಸಂಗೋಪನೆ ಸಚಿವ ಪ್ರಭು ಚವಾಣ್‌   ಭಾಗಿಯಾಗಿರುವ ಅನುಮಾನವಿದೆ ಎಂದು ನಗರದಲ್ಲಿ ಬುಧವಾರ ಮಾಧ್ಯಮ ಗೋಷ್ಠಿಯಲ್ಲಿ ಆರೋಪ ಮಾಡಿದರು.

‘ಕಲ್ಯಾಣ ಕರ್ನಾಟಕಕ್ಕೆ 68 ಆಂಬುಲೆನ್ಸ್‌ ಸೇರಿ ರಾಜ್ಯದಲ್ಲಿ ಒಟ್ಟು 290 ಸಂಚಾರಿ ಪಶು ಆಂಬುಲೆನ್ಸ್‌ಗಳನ್ನು ವಿತರಿಸಲಾಗಿದೆ.

ಮುಂಬೈ ಮೂಲದ ‘ಎಡುಸ್ ಪಾರ್ಕ್’ ಆನ್‌ಲೈನ್‌ ಮೂಲಕ ವಿದ್ಯಾರ್ಥಿಗಳ ತರಗತಿಗಳನ್ನು ನಡೆಸುವ ಸಂಸ್ಥೆಯಾಗಿದೆ. ನಿಯಮಾವಳಿ ಪ್ರಕಾರ ಪಶು ವೈದ್ಯಕೀಯ ಕ್ಷೇತ್ರದಲ್ಲಿ ಕನಿಷ್ಠ 2 ವರ್ಷದ ಅನುಭವ ಇರಬೇಕು. ಪಶುಗಳ ಆಂಬುಲನ್ಸ್‌ ನಿರ್ವಹಿಸಬೇಕು.

ಅಗತ್ಯ ಸಿಬ್ಬಂದಿ ಇರಬೇಕು. ಆದರೆ, ಇಲ್ಲಿ ಯಾವುದೇ ಅನುಭವ ಇಲ್ಲದ ಕಂಪನಿಗೆ ನಿರ್ವಹಣೆಯ ಹೊಣೆ ವಹಿಸಲಾಗಿದೆ’ ಎಂದು ಆರೋಪ ಮಾಡಿದರು.

‘ಸರ್ಕಾರ ಟೆಂಡರ್‌ ಕರೆದಾಗ ಜಿವಿಕೆ ಎಎಂಆರ್, ಬಿವಿಕೆ, ಸುಮಿತ್‌ ಹಾಗೂ ‘ಎಡುಸ್ ಪಾರ್ಕ್’ ಕಂಪನಿಗಳು ಅರ್ಜಿ ಸಲ್ಲಿಸಿದ್ದವು. ಜಿವಿಕೆ ಕಂಪನಿಗೆ ಎಲ್ಲ ಅರ್ಹತೆ ಇದ್ದರೂ ತಿರಸ್ಕರಿಸಲಾಗಿದೆ. ‘ಎಡುಸ್ ಪಾರ್ಕ್’ ನಿಂದ ಗುಣಮಟ್ಟದ ಸೇವೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಇದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಸಂಚಾರಿ ಪಶು ಆಂಬುಲನ್ಸ್‌ ಸೇವೆಯ ಯೋಜನೆ ವಿಫಲವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

‘ಅರ್ಹ ಸೇವಾದಾರರನ್ನು ನಿಯೋಜಿಸುವಾಗ ಟೆಂಡರ್‌ ಪಾರದರ್ಶಕತೆ ಕಾಯ್ದುಕೊಂಡಿಲ್ಲ. ಟೆಂಡರ್‌ನಲ್ಲಿ ಭಾಗವಹಿಸಿದವರ ಅನರ್ಹತೆಯ ವಿರುದ್ಧ ವೆಬ್‌ಸೈಟ್‌ನಲ್ಲಿ ಯಾವುದೇ ಕಾರಣ ಉಲ್ಲೇಖಿಸಿಲ್ಲ. ಬೇರೆ ರಾಜ್ಯಗಳಲ್ಲಿ ಕಾರ್ಯನಿರ್ವಹಿಸುವ ರುಜುವಾತು ಹೊಂದಿರುವ ಎನ್‌ಜಿಒಗಳನ್ನು ಪರಿಗಣಿಸಿಲ್ಲ. ಹೀಗಾಗಿ ಜಿವಿಕೆ ಕಂಪನಿ ಫೆಬ್ರುವರಿ 17ರಂದು ಹೈಕೋರ್ಟ್‌ನಲ್ಲಿ ಡಬ್ಲ್ಯೂಇಪಿ 3836/2023 ಪ್ರಕರಣ ದಾಖಲಿಸಿದೆ’ ಎಂದು ಅವರು ತಿಳಿಸಿದರು.

ಬಿಜೆಪಿ ವರಿಷ್ಠ ಮಂಡಳಿ ರಾಜ್ಯದ50 ಹಾಲಿ ಶಾಸಕರಿಗೆ ಟಿಕೆಟ್‌ ಕೊಡದಿರಲು ನಿರ್ಧರಿಸಿರುವ ಮಾಹಿತಿ ಇದೆ. ಅದರಲ್ಲಿ ಪ್ರಭು ಚವಾಣ್‌ ಅವರ ಹೆಸರೂ ಇದೆ’ ಎಂದು ಹೇಳಿದರು.

Sneha Gowda

Recent Posts

ನೇಹಾ, ಅಂಜಲಿ ಕೊಲೆ ಕೇಸ್​​ : ಎಡಿಜಿಪಿ ಆರ್.ಹಿತೇಂದ್ರ ಅಧಿಕಾರಿಗಳಿಗೆ ಕ್ಲಾಸ್​

ನೇಹಾ ಮತ್ತು ಅಂಜಲಿ ಅಂಬಿಗೇರ ಹತ್ಯೆ ಪ್ರಕರಣಗಳು ಬಾರಿ ಸಂಚಲನ ಮೂಡಿಸಿದ್ದವು ಈ ಹಿನ್ನೆಲೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ…

3 mins ago

ಕಲಬುರಗಿ: ಅಂಧ ಮಕ್ಕಳ ಶಾಲೆಗೆ 100% ಫಲಿತಾಂಶ

ನಗರದ ದಕ್ಷಿಣ ಭಾರತ ದಲಿತ ವಿದ್ಯಾ ಸಂಸ್ಥೆಯ ಸಿದ್ದಾರ್ಥ ಕಿವುಡ ಮತ್ತು ಮೂಕ ಮಕ್ಕಳ ವಸತಿಯುತ ಪ್ರೌಢಶಾಲೆಗೆ ಪ್ರಸ್ತುತ ಸಾಲಿನ…

14 mins ago

ಐಪಿಎಲ್ ಪ್ರಸಾರಕರ ಹಿಟ್​ಮ್ಯಾನ್​ ರೋಹಿತ್​ ಕಿಡಿ

ಟೀಮ್​ ಇಂಡಿಯಾದ ನಾಯಕ ರೋಹಿತ್ ಶರ್ಮಾ ಅವರು ಐಪಿಎಲ್ ಬ್ರಾಡ್‌ಕಾಸ್ಟರ್ ಸ್ಟಾರ್ ಸ್ಪೋರ್ಟ್ಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲ ದಿನಗಳ…

28 mins ago

ಈಶಾನ್ಯ ಪದವೀಧರರ ಕ್ಷೇತ್ರದ ಅಭ್ಯರ್ಥಿಗಳ ಬಂಡಾಯ ಶಮನ: ವಿಜಯೇಂದ್ರ ಮಾತಕತೆ ಸಕ್ಸಸ್

ಈಶಾನ್ಯ ಪದವೀಧರ ಕ್ಷೇತ್ರ, ನೈಋತ್ಯ ಪದವೀಧರ ಕ್ಷೇತ್ರ, ಬೆಂಗಳೂರು ಪದವೀಧರ ಕ್ಷೇತ್ರ, ಆಗ್ನೇಯ ಶಿಕ್ಷಕರ ಕ್ಷೇತ್ರ, ನೈಋತ್ಯ ಶಿಕ್ಷಕರ ಕ್ಷೇತ್ರ…

34 mins ago

ಥಾಯ್ಲೆಂಡ್ ಓಪನ್ 2024: ಸಾತ್ವಿಕ್-ಚಿರಾಗ್ ಜೋಡಿಗೆ ಭರ್ಜರಿ ಗೆಲುವು

ಇಂದು (ಭಾನುವಾರ) ನಡೆದ ಥಾಯ್ಲೆಂಡ್‌ ಓಪನ್‌ ಸೂಪರ್‌ 500 ಬ್ಯಾಡ್ಮಿಂಟನ್‌ ಫೈನಲ್​ ಪಂದ್ಯದಲ್ಲಿ ಗೆದ್ದು ಚಾಂಪಿಯನ್​ ಪಟ್ಟ ಅಲಂಕರಿಸಿದ್ದಾರೆ.

46 mins ago

ಕೇರಳದ ಕೆಲವು ರಾಜ್ಯಗಳಿಗೆ ಮೇ 20 ರವರೆಗೆ ರೆಡ್ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ

ಕೇರಳದ ಪತ್ತನಂತಿಟ್ಟ, ಇಡುಕ್ಕಿ, ಅಲಪ್ಪುಳ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ ಮೇ 20 ರವರೆಗೆ ಭಾರತೀಯ ಹವಾಮಾನ ಇಲಾಖೆ ರೆಡ್ ಅಲರ್ಟ್…

1 hour ago