Categories: ಬೀದರ್

ಮನೆ ಮನೆಗೆ ಭೇಟಿ ನೀಡಿದ ಪ್ರಭು ಚವ್ಹಾಣ: ಮತಯಾಚನೆ

ಔರಾದ: ಸಚಿವರಾದ ಪ್ರಭು.ಬಿ ಚವ್ಹಾಣ ಅವರು ಏಪ್ರಿಲ್ 30ರಂದು ಔರಾದ(ಬಿ) ಕ್ಷೇತ್ರದ ಸಂತಪೂರ, ಚಟ್ನಾಳ, ಜೀರ್ಗಾ(ಕೆ), ಜೀರ್ಗಾ(ಬಿ), ಶೆಂಬೆಳ್ಳಿ, ಮುಸ್ತಾಪೂರ, ಕೌಡಗಾಂವ, ಬಲ್ಲೂರ(ಜೆ), ಕೌಠಾ(ಕೆ), ಕೌಠಾ(ಬಿ) ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸಂಚರಿಸಿ ಚುನಾವಣಾ ಪ್ರಚಾರ ಮಾಡಿದರು.

ಗ್ರಾಮಗಳಲ್ಲಿ ಮನೆ ಮನೆಗೆ ಭೇಟಿ ನೀಡಿ ಕರಪತ್ರಗಳನ್ನು ವಿತರಿಸಿ, ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸಬೇಕೆಂದು ಕೋರಿದರು.

ಕ್ಷೇತ್ರದ ಜನತೆ ಸಾಕಷ್ಟು ಪ್ರೀತಿ, ವಿಶ್ವಾಸ ನೀಡಿದ್ದಾರೆ. ಜನತೆ ನೀಡಿರುವ ಆಶೀರ್ವಾದದಿಂದಾಗಿ ನಾನು ಮೂರು ಅವಧಿಗೆ ಶಾಸಕನಾಗಿ ಮತ್ತು ಸಚಿವನಾಗಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದೆ. ಅದನ್ನು ಸಮರ್ಥವಾಗಿ ನಿಭಾಯಿಸಿ ಕ್ಷೇತ್ರದ ಬೆಳವಣಿಗೆಗೆ ಪ್ರಯತ್ನಿಸಿದ್ದೇನೆ.

ಔರಾದ(ಬಿ) ಕ್ಷೇತ್ರದಲ್ಲಿ ಯಾವುದೇ ರೀತಿಯ ಕಲಹಗಳಿಗೆ ಆಸ್ಪದ ನೀಡದೇ ಜನತೆ ಸುಖ ಶಾಂತಿಯಿಂದ ಜೀವನ ನಡೆಸುವ ವಾತಾವರಣ ನಿರ್ಮಿಸಲಾಗಿದೆ. ಇದನ್ನು ಕಾಪಾಡಿಕೊಂಡು ಹೋಗಬೇಕಿದೆ. ಕ್ಷೇತ್ರ ಸರ್ವಾಂಗೀಣ ಅಭಿವೃದ್ಧಿ ಹೊಂದಲು ಹಾಕಿಕೊಂಡಿರುವ ಯೋಜನೆಗಳನ್ನು ಸಾಕಾರಗೊಳಿಸಲು, ಅಭಿವೃದ್ಧಿ ಕೆಲಸಗಳನ್ನು ಮುಂದುವರೆಸಲು ಹೆಚ್ಚು ಮತಗಳ ಅಂತರದಿಂದ ತಮ್ಮನ್ನು ಗೆಲ್ಲಿಸಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ವಸಂತ ಬಿರಾದಾರ, ರಾಮಶೆಟ್ಟಿ ಪನ್ನಾಳೆ, ಮಾರುತಿ ಚವ್ಹಾಣ, ದೊಂಡಿಬಾ ನರೋಟೆ, ವಿಜಯಕುಮಾರ ಪಾಟೀಲ ನಾಗೂರ, ಶಿವಕುಮಾರ ಪಾಂಚಾಳ, ಸಚಿನ ರಾಠೋಡ್, ಸಂತೋಷ ಪಾಟೀಲ, ಬಾಲಾಜಿ ಠಾಕೂರ, ಮಹಾದೇವ ತರನಾಳೆ, ಶ್ರೀಮಂತ ಪಾಟೀಲ್, ನಾಗಶೆಟ್ಟಿ ಶಂಬೆಳ್ಳಿ ಹಾಗೂ ಇತರರು ಉಪಸ್ಥಿತರಿದ್ದರು.

Sneha Gowda

Recent Posts

ಕರಾವಳಿ ಜಿಲ್ಲೆಯಾದ್ಯಂತ ತೆರೆಗಪ್ಪಳಿಸಲಿದೆ “ಗಬ್ಬರ್ ಸಿಂಗ್”

ಮುತ್ತು ಗೋಪಾಲ್ ಫಿಲ್ಮ್ಸ್ ಬಾರ್ಕೂರು ಲಾಂಛನದಲ್ಲಿ ಚಂದ್ರಶೇಖರ ನಾನಿಲ್, ನಾಗೇಶ್ ಪೂಜಾರಿ ಅರ್ಪಿಸುವ ಸತೀಶ್ ಪೂಜಾರಿ ಬಾರ್ಕೂರು ನಿರ್ಮಾಣದ "ಗಬ್ಬರ್…

14 mins ago

ರಾಯಚೂರಿನಲ್ಲಿ ಬಿಸಿ ಹೆಚ್ಚಲು ಕೈ ಅಭ್ಯರ್ಥಿ ಜಿ.ಕುಮಾರ್ ನಾಯಕ್ ಪಾತ್ರವಿದೆ-ರಾಜಾ ಅಮರೇಶ್ವರ್ ನಾಯಕ್

ರಾಯಚೂರಿನಲ್ಲಿ ತಾಪಮಾನ ಹೆಚ್ಚಳವಾಗಿರುವುದರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಿ.ಕುಮಾರ್ ನಾಯಕ್ ಪಾತ್ರವಿದೆ ಅಂತ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ್ ನಾಯಕ್ ಆರೋಪ…

32 mins ago

ಕಾಂಗ್ರೆಸ್ ಅಭ್ಯರ್ಥಿ ಕಿಶೋರಿ ಲಾಲ್ ಶರ್ಮಾ ಅಮೇಥಿಯಿಂದ ಕಣಕ್ಕೆ

ಅಮೇಥಿ ಲೋಕಸಭಾ ಕ್ಷೇತ್ರದಿಂದ ಕಿಶೋರಿ ಲಾಲ್ ಶರ್ಮಾ ಅವರನ್ನು ಕಾಂಗ್ರೆಸ್  ಹೈಕಮಾಂಡ್ ಕಣಕ್ಕಿಳಿಸಿದೆ.

38 mins ago

ಬಸ್ಸೊಂದು ನದಿ ಕಣಿವೆಗೆ ಉರುಳಿ 20 ಪ್ರಯಾಣಿಕರು ಮೃತ್ಯು

ಪ್ರಯಾಣಿಕರ ಬಸ್ಸೊಂದು ಬೆಟ್ಟ ಪ್ರದೇಶದಲ್ಲಿ ಚಲಿಸುವಾಗ ನದಿ ಕಣಿವೆಗೆ ಉರುಳಿ ಕನಿಷ್ಠ 20 ಜನ ಮೃತಪಟ್ಟಿರುವ ಘಟನೆ ವಾಯವ್ಯ ಪಾಕಿಸ್ತಾನದಲ್ಲಿ…

57 mins ago

ಅಂಚೆಮತಪತ್ರ ವಿತರಣೆ: ಮೇ.1 ರಂದು1262 ಜನ ಸಿಬ್ಬಂದಿಯಿಂದ ಮತದಾನ

ಧಾರವಾಡ ಲೋಕಸಭೆ ಮತಕ್ಷೇತ್ರದಲ್ಲಿ ಚುನಾವಣಾ ಕರ್ತವ್ಯ ನಿಯೋಜಿತರಾದ ಸಿಬ್ಬಂದಿ, ಅಧಿಕಾರಿಗಳು ಧಾರವಾಡ ಲೋಕಸಭಾ ಮತಕ್ಷೇತ್ರದ ಮತದಾರರಾಗಿದ್ದು ಮತ್ತು ಚುನಾವಣಾ ಆಯೋಗ…

1 hour ago

ಪುತ್ರನ ಕರ್ಮಕಾಂಡ; ಭವಾನಿ ರೇವಣ್ಣಗೂ ಎಸ್‌ಐಟಿ ನೋಟಿಸ್‌ !

ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ಇದೀಗ ದೇಶ್ಯಾದ್ಯಂತ ಸದ್ದು ಮಾಡುತ್ತಿದ್ದು, ಈಗಾಗಲೇ ಈ ಸಂಬಂಧ ಸಂತ್ರಸ್ತೆಯರ ಆರೋಪದ ಮೇಲೆ…

2 hours ago