Categories: ಬೀದರ್

ಮತದಾನ ದಿನದಂದು ಪ್ರತಿ ೨ ತಾಸಿಗೊಮ್ಮೆ ಮತದಾನದ ಮಾಹಿತಿ ನೀಡಬೇಕು: ಗೋವಿಂದರೆಡ್ಡಿ

ಬೀದರ್, ಮೇ.9: ಮೇ.೧೦ ರಂದು ನಡೆಯುವ ಮತದಾನದ ಮಾಹಿತಿಯನ್ನು ಪ್ರತಿ ೨ ತಾಸಿಗೊಮ್ಮೆ ತಮ್ಮ ಮತಗಟ್ಟೆಯಲ್ಲಾದ ಮತದಾನದ ಮಾಹಿತಿಯನ್ನು ನಿಗದಿತ ಸಮಯದಲ್ಲಿ ಅಧಿಕಾರಿಗಳು ನೀಡಬೇಕೆಂದು ಜಿಲ್ಲಾ ಚುನಾವಣಾ ಅಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ಗೋವಿಂದರೆಡ್ಡಿ ಹೇಳಿದರು.

ಅವರು ಸೋಮವಾರ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಚುನಾವಣೆಗೆ ನಿಯೋಜಿತ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದದ ಮೂಲಕ ಮಾತನಾಡಿದರು.

ಜಿಲ್ಲೆಯ ಆಯಾ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮತದಾನದ ಪರ್ಸಂಟೇಜ ಕೊಡಲು ರಿಸರ್ವ ಸಿಬ್ಬಂದಿಗಳನ್ನು ನಿಯೋಜನೆ ಮಾಡುವದರ ಜೊತೆಗೆ ಅವರ ಮಾಹಿತಿಯನ್ನು ಬಿಎಲ್‌ಓ ಗ್ರೂಪ್‌ಗಳಲ್ಲಿ ಹಾಕಬೇಕು ಮತ್ತು ಮ್ಯಾಪಿಂಗ್ ಮಾಡಿಕೊಂಡು ಯಾರು ಯಾವ ಕೆಲಸ ಮಾಡಬೇಕೆಂಬುದರ ಕುರಿತು ಮುಂಚಿತವಾಗಿ ಅವರಿಗೆ ಜವಾಬ್ದಾರಿಗಳನ್ನು ನೀಡಿದಾಗ ಎಲ್ಲಾ ಕೆಲಸಗಳು ಸುಗಮವಾಗಿ ನಡೆಯುತ್ತವೆ ಎಂದರು.

ಜಿಲ್ಲೆಯ ಎಲ್ಲಾ ಪೋಲಿಂಗ ಬೂತಗಳ ಮಾಹಿತಿಯನ್ನು ಪ್ರತಿ ೨ ತಾಸಿಗೊಮ್ಮೆ ಸರಿಯಾದ ಸಮಯದಲ್ಲಿ ನೀಡಲು ಆಪರೇಟರಗಳು ಮಾಹಿತಿ ನೀಡುವುದರ ಕುರಿತು ಚೆನ್ನಾಗಿ ತಿಳಿದುಕೊಳ್ಳಬೇಕು ಮತ್ತು ಮೇ ೧೦ ರಂದು ಬೆಳಿಗ್ಗೆ ೫:೩೦ ಗಂಟೆಗೆ ಎಲ್ಲಾ ಮತಗಟ್ಟೆಗಳಿಗೆ ನಿಯೋಜಿತ ಅಧಿಕಾರಿ ಹಾಗೂ ಸಿಬ್ಬಂದಿಗಳು ಮತಗಟ್ಟೆಗಳಲ್ಲಿ ಹಾಜರಿರಬೇಕು ಎಂದು ಹೇಳಿದರು.

ಎನ್.ಐ.ಸಿ ಅಧಿಕಾರಿ ಶ್ರೀನಿವಾಸ ಅವರು ಮತಗಟ್ಟೆಯಲ್ಲಿ ಪ್ರತಿ ೨ ತಾಸಿಗೊಮ್ಮೆ ಮಾಹಿತಿಯನ್ನು ಯಾವ ರೀತಿಯಲ್ಲಿ ಕೊಡಬೇಕು ಹಾಗೂ ಗೂಗಲ್ ಮತ್ತು ಎನಕೋರಲ್ಲಿ ಮಾಹಿತಿಯನ್ನು ಯಾವ ರೀತಿಯಲ್ಲಿ ಎಂಟ್ರೀ ಮಾಡಬೇಕೆಂಬುದರ ಕುರಿತು ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಮತಗಟ್ಟೆ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಮಾಹಿತಿಯನ್ನು ನೀಡಿದರು.

ಈ ವಿಡಿಯೋ ಸಂವಾದದಲ್ಲಿ ಅಪರ ಜಿಲ್ಲಾ ಚುನಾವಣಾ ಅಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿಗಳಾದ ಶಿವಕುಮಾರ ಶೀಲವಂತ. ನೋಡಲ್ ಅಧಿಕಾರಿಳು. ಆರ್.ಓ. ಎ.ಆರ್.ಓ ಮತ್ತು ಚುನಾವಣೆಗೆೆ ನಿಯೋಜಿತ ಅಧಿಕಾರಿ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

Gayathri SG

Recent Posts

ಅಶ್ಲೀಲ ವಿಡಿಯೋ ವೈರಲ್ ಪ್ರಕರಣ; ಜೆಡಿಎಸ್‌ನಿಂದ ಪ್ರಜ್ವಲ್ ಉಚ್ಛಾಟನೆ

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ಕೇಸ್‌ಗೆ ದೊಡ್ಡ ತಿರುವು ಸಿಕ್ಕಿದ್ದು, ಈ ಪ್ರಕರಣ ದೊಡ್ಡ ಮಟ್ಟದಲ್ಲಿ ಬೆಂಕಿ ಹಚ್ಚಿರುವ…

2 mins ago

ಇಪ್ಪತ್ತೆಂಟು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ನಿಶ್ಚಿತ : ಯಡಿಯೂರಪ್ಪ

ಕರ್ನಾಟಕದಲ್ಲಿ ಚುನಾವಣೆ ವಾತಾವರಣ ಚೆನ್ನಾಗಿ ಇದೆ. ಈಗ ಚುನಾವಣೆ ನಡೆದಿರೋ 14 ಕ್ಷೇತ್ರಗಳಲ್ಲಿ ನಾವು 14 ಗೆಲ್ಲುತ್ತೇವೆ. ಮುಂದೆ ನಡೆಯುವ…

6 mins ago

ಲಾರಿಗೆ ಡಿಕ್ಕಿ ಹೊಡೆದ ಕಾರು : ಚಾಲಕ ಸ್ಥಳದಲ್ಲೇ ಸಾವು

ಅತಿ ವೇಗದಲ್ಲಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ, ಡಿವೈಡರ್ ದಾಟಿ ಎದುರಿಗೆ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ…

14 mins ago

ಮೋದಿ ಚುನಾವಣೆಯಲ್ಲಿ ಹತಾಶರಾಗಿದ್ದಾರೆ: ಸಿಎಂ ಸಿದ್ದರಾಮಯ್ಯ

ನರೇಂದ್ರ ಮೋದಿ ಈ ಚುನಾವಣೆಯಲ್ಲಿ ಹತಾಶರಾಗಿದ್ದಾರೆ. ಅವರಿಗೆ ಚುನಾವಣೆ ಗೆಲ್ಲುವ ವಿಶ್ವಾಸ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಳ್ಳಾರಿ-ವಿಜಯನಗರ ಲೋಕಸಭಾ…

16 mins ago

ರಾಮೇಶ್ವರಂ ಕೆಫೆ ಸ್ಫೋಟ ​​: ಇಬ್ಬರು ಆರೋಪಿಗಳಿಗೆ ನ್ಯಾಯಾಂಗ ಬಂಧನ

ನಗರದ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳಾದ ಮೊಹಮ್ಮದ್ ಮತೀನ್ ಮತ್ತು ಮುಸಾವಿರ್ ಹುಸೇನ್​ಗೆ 14…

33 mins ago

ʻಮಹಾನಟಿ’ ತಂಡದ ವಿರುದ್ಧ ದೂರು ದಾಖಲು..!

ಕಿರುತೆರೆಯ ಖ್ಯಾತ ನಿರೂಪಕಿ,ತುಳುನಾಡ ಕುವರಿ ಅನುಶ್ರೀ, ರಮೇಶ್​ ಅರವಿಂದ್, ಪ್ರೇಮಾ ಅವರುಗಳ ವಿರುದ್ದ ಪ್ರಕರಣ ದಾಖಲಾಗಿದೆ.

1 hour ago