News Karnataka Kannada
Thursday, April 18 2024
Cricket
ಬೀದರ್

ಏ.10ರ ಒಳಗೆ ವನ್ಯಜೀವಿಗಳ ಅಂಗಾಂಗಗಳನ್ನು ಹಿಂದಿರುಗಿಸಿ: ಈಶ್ವರ್ ಖಂಡ್ರೆ

ಬುದ್ಧ, ಬಸವ, ಅಂಬೇಡ್ಕರ್ ಎಲ್ಲರಿಗೂ ಪೂಜನೀಯರಾಗಿದ್ದು, ಅವರ ಆದರ್ಶ ಪಾಲಿಸುವ ನಾವು ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಕಾಪಾಡಬೇಕು, ಸಹಬಾಳ್ವೆಯಿಂದ ಬಾಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮನವಿ ಮಾಡಿದ್ದಾರೆ.
Photo Credit : News Kannada

ಬೀದರ್: ಏ. 10ರ ಒಳಗೆ ವನ್ಯಜೀವಿಗಳ ಅಂಗಾಂಗಗಳನ್ನು ಹಿಂದಿರುಗಿಸಬೇಕೆಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.

ಯಾವುದೇ ಪರವಾನಿಗೆ ಇಲ್ಲದೆ, ಅಕ್ರಮವಾಗಿ ಹುಲಿ, ಚಿರತೆ ಮತ್ತು ಆನೆಗಳ ಕೊಂಬು, ಹಲ್ಲು, ಕೂದಲು ಸೇರಿದಂತೆ ಎಲ್ಲಾ ವನ್ಯಜೀವಿ ಅಂಗಾಂಗಗಳನ್ನು ಹಿಂತಿರುಗಿಸಲು ಕೊನೆಯದಾಗಿ ಗಡುವು ನೀಡಿದ್ದು, ಜನರು ತಮ್ಮ ಬಳಿ ಇರುವ ಅಂಗಾಗಳನ್ನು ಸಮೀಪದಲ್ಲಿರುವ ಅರಣ್ಯ ಕಚೇರಿಗೆ ನೀಡಬೇಕು ಎಂದರು.

ಪ್ರಮಾಣ ಪತ್ರ ಇಲ್ಲದೆ ಅಕ್ರಮವಾಗಿ ವನ್ಯಜೀವಿ ಅಂಗಾಂಗಗಳನ್ನು ಇಟ್ಟುಕೊಳ್ಳುವುದು ಶಿಕ್ಷಾರ್ಹ ಅಪರಾಧ. 1973 ಹಾಗೂ 2003 ರಲ್ಲಿ ವನ್ಯಜೀವಿ ಅಂಗಾಂಗಗಳ ವಾಪಸ್‌ಗೆ ಅವಕಾಶ ನೀಡಲಾಗಿತ್ತು. ಆದರೆ ಇನ್ನೂ ವಾಪಸ್ ಮಾಡದೇ ಇರುವುದು ದೊಡ್ಡ ಅಪರಾಧ. ಮೌಢ್ಯತೆ ಹಾಗೂ ನಂಬಿಕೆಗಾಗಿ ಕೆಲವು ಮುಗ್ದ ಜನರು ಇನ್ನೂ ಇಟ್ಟುಕೊಂಡಿದ್ದಾರೆ. ಇಂತಹ ಮುಗ್ದ ಜನರಿಗೆ ಶಿಕ್ಷೆಯಾಗಬಾರದು ಎಂದು ನಮ್ಮ ಸರ್ಕಾರ ಏಪ್ರಿಲ್ 10 ರಂದು ಕೊನೆಯ ಬಾರಿ ವಾಪಸ್ ಮಾಡುವಂತೆ ಅವಕಾಶ ನೀಡಿದೆ ಎಂದು ಅವರು ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು