News Karnataka Kannada
Tuesday, April 23 2024
Cricket
ಬೀದರ್

ಎಂಎಲ್‌ಸಿ ಅರಳಿ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದಾರೆ: ಬಿಜೆಪಿ ಮುಖಂಡ ಬಾಬುವಾಲಿ

'ವಿಧಾನ ಪರಿಷತ್‌ ಸದಸ್ಯ ಅರವಿಂದಕುಮಾರ ಅರಳಿ ಅವರು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದಾರೆ. ರಾಜಕೀಯ ದುರುದ್ದೇಶದಿಂದ ಬೀದರ್‌ ನಗರಾಭಿವೃದ್ಧಿ ಪ್ರಾಧಿಕಾರದ (ಬುಡಾ) ಹಿಂದಿನ ಆಯುಕ್ತ ಅಭಯ್‌ ಕುಮಾರ್‌ ಅವರನ್ನು ಅಮಾನತುಗೊಳಿಸಿದ್ದಾರೆ' ಎಂದು ಬುಡಾ ಮಾಜಿ ಅಧ್ಯಕ್ಷರೂ ಆದ ಬಿಜೆಪಿ ಮುಖಂಡ ಬಾಬುವಾಲಿ ಆರೋಪಿಸಿದರು.
Photo Credit : News Kannada

ಬೀದರ್ : ‘ವಿಧಾನ ಪರಿಷತ್‌ ಸದಸ್ಯ ಅರವಿಂದಕುಮಾರ ಅರಳಿ ಅವರು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದಾರೆ. ರಾಜಕೀಯ ದುರುದ್ದೇಶದಿಂದ ಬೀದರ್‌ ನಗರಾಭಿವೃದ್ಧಿ ಪ್ರಾಧಿಕಾರದ (ಬುಡಾ) ಹಿಂದಿನ ಆಯುಕ್ತ ಅಭಯ್‌ ಕುಮಾರ್‌ ಅವರನ್ನು ಅಮಾನತುಗೊಳಿಸಿದ್ದಾರೆ’ ಎಂದು ಬುಡಾ ಮಾಜಿ ಅಧ್ಯಕ್ಷರೂ ಆದ ಬಿಜೆಪಿ ಮುಖಂಡ ಬಾಬುವಾಲಿ ಆರೋಪಿಸಿದರು.

ಬುಡಾದಲ್ಲಿ ಆಗಿರುವ ಕೆಲಸಗಳ ಕುರಿತು ಆರೋಪಗಳು ಕೇಳಿ ಬಂದ ನಂತರ ತನಿಖೆ ನಡೆಸಲಾಗಿತ್ತು. ತನಿಖಾ ತಂಡವು ಅಭಯ್‌ ಕುಮಾರ್‌ ಅವರ ಹೇಳಿಕೆ ಪಡೆದಿಲ್ಲ. ಆದರೆ, ಅರಳಿ ಅವರು ಉದ್ದೇಶಪೂರ್ವಕವಾಗಿ ಸರ್ಕಾರದ ಮೇಲೆ ಒತ್ತಡ ಹೇರಿ ಅಮಾನತುಗೊಳಿಸಿದ್ದಾರೆ. ಅರಳಿ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದಾರೆ ಎನ್ನುವುದಕ್ಕೆ ಇದೇ ಸಾಕ್ಷಿ ಎಂದು ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ನನಗೆ ವೈಯಕ್ತಿಕವಾಗಿ ಕಿರುಕುಳ ಕೊಡಲು, ನನ್ನ ಹೆಸರು ಕೆಡಿಸಲು ಪದೇ ಪದೇ ಬುಡಾದಲ್ಲಿ ಅಕ್ರಮವಾಗಿದೆ ಎಂದು ವಿಧಾನಸಭೆ ಅಧಿವೇಶನದಲ್ಲಿ ಚುಕ್ಕೆ ಗುರುತಿನ ಪ್ರಶ್ನೆ ಕೇಳುತ್ತಾರೆ. ನಾನು ಅಧ್ಯಕ್ಷನಾಗಿದ್ದ 2021ರಿಂದ 2023ರ ಅವಧಿಯಲ್ಲಿ ಸಭೆಯಲ್ಲಿ ಎಲ್ಲರ ಒಪ್ಪಿಗೆಯೊಂದಿಗೆ ಕೆಲಸಗಳಾಗಿವೆ. ಕೆಲ ಕಾನೂನಾತ್ಮಕ ಹೆಜ್ಜೆಗಳು ತಪ್ಪಾಗಿರಬಹುದು. ಅದಕ್ಕೆ ಸರ್ಕಾರಿ ಅಧಿಕಾರಿಗಳು ಉತ್ತರಿಸುತ್ತಾರೆ ಎಂದು ತಿಳಿಸಿದರು.

ಅರಳಿ ಹಾಗೂ ನಾನು ಸ್ನೇಹಿತರು. ಆದರೆ, ರಾಜ್ಯದಲ್ಲಿ ಅವರದೇ ಪಕ್ಷ ಅಧಿಕಾರದಲ್ಲಿ ಇರುವುದರಿಂದ ಅದನ್ನು ದುರ್ಬಳಕೆ ಮಾಡಿಕೊಂಡು ವೈಯಕ್ತಿಕವಾಗಿ ಹಗೆ ಸಾಧಿಸುತ್ತಿದ್ದಾರೆ. ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ನಾನು ಬುಡಾ ಅಧ್ಯಕ್ಷನಿದ್ದಾಗ ಅರಳಿ ಅವರು ಅದರ ಸದಸ್ಯರಾಗಿದ್ದರು. ನಾನು ವೈಯಕ್ತಿವಾಗಿ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಅಲ್ಲಿ ಕೈಗೊಂಡಿರುವ ‘ರೆಸುಲೂಷನ್‌’ ಮೇಲೆ ಸಹಿ ಹಾಕಿರುವೆ. ಯಾವುದೇ ಪತ್ರದ ಮೇಲೆ ವೈಯಕ್ತಿಕವಾಗಿ ಸಹಿ ಹಾಕಿಲ್ಲ. ಒಂದುವೇಳೆ ತಪ್ಪು ಮಾಡಿದರೆ ನೇಣಿಗೇರಲು ಸಿದ್ಧ. ಬುಡಾದಲ್ಲಿ ಅನೇಕರು ಸದಸ್ಯರಿರುತ್ತಾರೆ. ಎಲ್ಲಾ ತೀರ್ಮಾನ ಎಲ್ಲರ ಸಮ್ಮುಖದಲ್ಲಿಯೇ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು