Categories: ಬೀದರ್

ಬೀದರ್: ರೈತನ ಬಾಳು ಬೆಳಗಿದ ಮಿಶ್ರ ಬೇಸಾಯ ಕೃಷಿ

ಕಮಲನಗರ: ತಾಲ್ಲೂಕಿನ ಡೋಣಗಾಂವ್ (ಎಂ) ಗ್ರಾಮದ ಸೋಮನಾಥ ಬಸವರಾಜ ಗಂಧಗೆ ಕಲ್ಲಂಗಡಿ ಬೇಸಾಯದಲ್ಲಿ ಹೆಚ್ಚಿನ ಪರಿಣಿತಿ ಇಲ್ಲದಿದ್ದರೂ ಎರಡು ವರ್ಷದಲ್ಲಿ ಮಿಶ್ರ ಬೇಸಾಯ ಅಳವಡಿಸಿಕೊಂಡು ಒಂದೇ ಎಕರೆಯಲ್ಲಿ ವರ್ಷಕ್ಕೆ ₹9-10 ಲಕ್ಷ ಆದಾಯ ಪಡೆಯುತ್ತಿದ್ದಾರೆ.

ಕಲ್ಲಂಗಡಿ, ಚಂಡು ಹೂವು, ಹಸಿಮೆಣಸಿನಕಾಯಿ, ಸೌತೆ ಕಾಯಿಗಳನ್ನು ಬೆಳೆಯುತ್ತಿದ್ದಾರೆ.

ಮಹಾರಾಷ್ಟ್ರದ ದೇವಣಿಯಿಂದ ₹9ನಂತೆ ಒಂದು ತಂದಿದ್ದಾರೆ. ಎಕರೆಗೆ ₹30-40 ಸಾವಿರ ಖರ್ಚಾಗುತದೆ. ಕಲ್ಲಂಗಡಿಯಿಂದಲೇ ಒಂದೂವರೆ ಲಕ್ಷ ನಿವ್ವಳ ಲಾಭ ಬಂದಿದೆ. 90 ದಿನದಲ್ಲಿ ಕಲ್ಲಂಗಡಿ ಕಟಾವಿಗೆ ಬರುತ್ತದೆ’ ಎಂದು ರೈತ ಸೋಮನಾಥ ತಿಳಿಸಿದರು.

ಒಂದು ಸಸಿಗೆ ₹10 ರೂಪಾಯಿ ನೀಡಿ ಭಾಲ್ಕಿ ತಾಲ್ಲೂಕಿನ ಮೇಳಕುಂದಾದಿಂದ ಚಂಡು ಹೂವಿನ 5,531 ಸಸಿಗಳನ್ನು ತಂದು ಕಲ್ಲಂಗಡಿ ನಡುವೆ ಹಚ್ಚಿದ್ದಾರೆ. ಇದು ಸಹ ಮೂರು ತಿಂಗಳ ಬೆಳೆ. ಹೈದರಾಬಾದ್, ಬಾಲ್ಕಿ, ಉದಗೀರನಿಂದ ವ್ಯಾಪಾರಿಗಳು ಪ್ರತಿ ಕೆ.ಜಿಗೆ ₹100-120 ರಂತೆ 200 ಕ್ವಿಂಟಾಲ್ ಹೂವು ಖರೀದಿಸಿಕೊಂಡು ಹೋಗಿದ್ದು ₹1ಲಕ್ಷ ಲಾಭ ಪಡೆದಿದ್ದಾರೆ.

ಕಲ್ಲಂಗಡಿ, ಚಂಡುಹೂವಿನ ಬೆಳೆ ನಡುವೆ ಸೌತೆಕಾಯಿ ಬೀಜ ಉರಲಾಗಿದ್ದು ಹಚ್ಚಲಾಗಿದ್ದು ಇದೂ ಮೂರು ತಿಂಗಳಲ್ಲಿ ಕಟಾವಿಗೆ ಬರುತ್ತದೆ. ಇವರು ಹಚ್ಚಿರುವ ಸೌತೆ ಬೀಜ ಗುಜರಾತಿ ತಳಿಯದ್ದಾಗಿದ್ದು ಉದ್ದನೆ ಕಾಯಿ ಬರುತ್ತದೆ. ಜನರೆಲ್ಲರೂ ಬಹಳ ಇಷ್ಟಪಡುವುದರಿಂದ ₹1ಲಕ್ಷ ರೂಪಾಯಿ ಆದಾಯ ಪಡೆದಿದ್ದಾರೆ.

ಕಲ್ಲಂಗಡಿ, ಚಂಡುಹೂವು, ಸೌತೆಕಾಯಿಗಳ ಮಧ್ಯದಲ್ಲಿ ಹಸಿ ಮೆಣಸಿನಕಾಯಿಯನ್ನೂ ಹಚ್ಚಿದ್ದೇವೆ. ಇದು 90 ದಿನಗಳಲ್ಲಿಯೇ ಕಟಾವಿಗೆ ಬರುತ್ತದೆ. ಬೇಡಿಕೆ ಇರುವುದರಿಂದ ಕೆ.ಜಿಗೆ ₹80 -₹100ರ ಸಿಕ್ಕಿದೆ. ಒಣ ಬೇಸಾಯ ಪದ್ಧತಿಗಿಂತ ಮಿಶ್ರ ಬೇಸಾಯಲ್ಲಿ ನಾಲ್ಕು ಪಟ್ಟು ಆದಾಯ ಹಚ್ಚಿನ ಆದಾಯ ಪಡೆಯಬಹುದು’ ಎಂದು ಸೋಮನಾಥ ತಿಳಿಸಿದರು.

Ashika S

Recent Posts

ಮಸೀದಿಯೊಳಗೆ ಅರೆನಗ್ನ ಸ್ಥಿತಿಯಲ್ಲಿ ಮಹಿಳೆಯ ಡೆಡ್‌ಬಾಡಿ ಪತ್ತೆ

ತಾಜ್‌ಮಹಲ್‌ ಸಮೀಪದ ಮಸೀದಿವೊಂದರಲ್ಲಿ ಘೋರ ಕೃತ್ಯ ನಡೆದಿದ್ದು ಅರೆನಗ್ನ ಸ್ಥಿತಿಯಲ್ಲಿ 22 ವರ್ಷದ ಮಹಿಳೆಯ ಶವ ಪತ್ತೆಯಾಗಿದೆ. ಈ ಘಟನೆ…

17 mins ago

ಮಾಜಿ ಸಂಸದ ಎಲ್​ ಆರ್ ಶಿವರಾಮೇಗೌಡ ಮನೆ ಮೇಲೆ ಮೊಟ್ಟೆ ದಾಳಿ

ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಕೇಸ್‌ ಸಂಬಂಧಿಸಿದಂತೆ ಎಚ್‌ ಡಿ ದೇವೆಗೌಡ ಅವರ ವಿರುದ್ದ ಆಡಿಯೋ ಒಂದರಲ್ಲಿ ಅವಹೇಳನವಾಗಿ ನಿಂಧಿಸಿದ ಮಾಜಿ…

43 mins ago

ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಮೃತ್ಯು; ಪ್ರಧಾನಿ ಮೋದಿ ಸಂತಾಪ

ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಪ್ರಯಾಣಿಸುತ್ತಿದ್ದ ಬೆಂಗಾವಲು ಪಡೆ ಹೆಲಿಕಾಪ್ಟರ್‌ಗಳ ಪೈಕಿ ಒಂದು ಪತನಗೊಂಡಿದ್ದು, ಅಪಘಾತದಲ್ಲಿ ಇರಾನ್‌ ಅಧ್ಯಕ್ಷ…

51 mins ago

‘ರೇವ್ ಪಾರ್ಟಿ’ ಮೇಲೆ ಸಿಸಿಬಿ ದಾಳಿ; ನಟಿ ಹೇಮಾ ಸೇರಿ ಐವರು ಅರೆಸ್ಟ್

ಆರ್ ಫಾರ್ಮ್ ಹೌಸ್ ನಲ್ಲಿ ರೇವ್​ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಪಾರ್ಟಿ ಆಯೋಜಕ ವಾಸು,…

1 hour ago

ಆನೆಯ ಕೂಡುದಂತಕ್ಕೆ ಕತ್ತರಿ ಪ್ರಯೋಗ ಸಕ್ಸಸ್

ಬಂಡೀಪುರದಲ್ಲಿ ಸೆರೆಹಿಡಿಯಲಾಗಿದ್ದ ಆನೆಯ ಕೂಡುದಂತಕ್ಕೆ ಕತ್ತರಿ ಪ್ರಯೋಗ ಮಾಡಿರುವುದು ಸಕ್ಷಸ್ ಆಗಿದೆ. ಕೂಡು ದಂತದಿಂದ ಆಹಾರ ಸೇವಿಸಲಾಗದೆ ಪರದಾಡುತ್ತಿದ್ದ ಆನೆ…

1 hour ago

ಮತಗಟ್ಟೆ ದ್ವಂಸ ಪ್ರಕರಣ : ಬಿಡುಗಡೆಗೊಂಡ ಗ್ರಾಮಸ್ಥರಿಗೆ ಎನ್. ಮಹೇಶ್ ಸಾಂತ್ವಾನ

ಏಪ್ರಿಲ್ 26 ರಂದು ನಡೆದ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಮ…

1 hour ago