News Karnataka Kannada
Tuesday, April 30 2024
ಬೀದರ್

ಅಕ್ರಮ ಎಲ್.ಪಿ.ಜಿ ಗ್ಯಾಸ್ ಸಿಲಿಂಡರ್, ವಾಹನ ಜಪ್ತಿ : ಆರೋಪಿಗಳ ಬಂಧನ

18 ಲಕ್ಷಕ್ಕೂ ಅಧಿಕ ಮೌಲ್ಯದ ಅಕ್ರಮ ಎಲ್.ಪಿ.ಜಿ ಗ್ಯಾಸ್ ಸಿಲಿಂಡರ್, ವಾಹನ ಜಪ್ತಿ, ಮೂರು ಜನ ಆರೋಪಿಗಳ ಬಂಧನ”.
Photo Credit : NewsKarnataka

ಬೀದರ್‌:  18 ಲಕ್ಷಕ್ಕೂ ಅಧಿಕ ಮೌಲ್ಯದ ಅಕ್ರಮ ಎಲ್.ಪಿ.ಜಿ ಗ್ಯಾಸ್ ಸಿಲಿಂಡರ್, ವಾಹನ ಜಪ್ತಿ, ಮೂರು ಜನ ಆರೋಪಿಗಳನ್ನು ಬಂಧಿಸಲಾಗಿದೆ. ಗಡಿ ಬೀದರ್ ಜಿಲ್ಲೆಯ ಹುಮನಾಬಾದ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಧುಮ್ಮನಸೂರ ಗ್ರಾಮದಲ್ಲಿ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಜಪ್ತಿ ಮಾಡಿದ ಪೋಲಿಸರು .

ಹಿರಿಯ ಅಧಿಕಾರಿಯವರ ಮಾರ್ಗದರ್ಶನದಂತೆ, ಹುಮನಾಬಾದ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಧುಮ್ಮನಸೂರ ಗ್ರಾಮದ ವ್ಯಾಪ್ತಿಯ ಹೊಲ ಒಂದರಲ್ಲಿ ಅಕ್ರಮವಾಗಿ ಹೆಚ್.ಪಿ ಮತ್ತು ಇಂಡೇನ್ ಕಂಪನಿಯ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ದಿಂದ ವಾಣಿಜ್ಯ ಸಿಲಿಂಡರ್ ಗಳಲ್ಲಿ ಅನಧಿಕೃತವಾಗಿ ಗ್ಯಾಸನ್ನು ತುಂಬಿ ತೆಲಂಗಾಣ ರಾಜ್ಯದಲ್ಲಿ ಅಧಿಕ ಲಾಭಕ್ಕಾಗಿ ಅಕ್ರಮವಾಗಿ ಮಾರಾಟ ಮಾಡಲು ಸಿದ್ಧತೆ ಮಾಡುತ್ತಿರುವ ಮಾಹಿತಿ ಆಧಾರದ ಮೇಲೆ ಹುಮನಾಬಾದ ಪೊಲೀಸ್ ಠಾಣೆಯ ಪಿ.ಎಸ್.ಐ ಬಸವರಾಜು ಮತ್ತು ಸಿಬ್ಬಂದಿಗಳಾಧ ವಜೀರ ಪಟೇಲ್,ಸಂತೋಷ, ಚನ್ನವೀರ,ರವಿ, ಹಾಗೂ ಹುಮನಾಬಾದ ತಾಲೂಕಿನ ಆಹಾರ ನಿರೀಕ್ಷಕರಾದ ಬಿಂದುಕುಮಾರಿ, ನೇತೃತ್ವದಲ್ಲಿ ಮಾಡಿದರು .

ದಾಳಿಯಲ್ಲಿ ತುಂಬಿದ 171 ಸಿಲಿಂಡರ್ ಗಳು, 145 ಖಾಲಿ ಸಿಲಿಂಡರುಗಳು ಒಟ್ಟು 316 ಸಿಲಿಂಡರುಗಳು ಜಪ್ತಿ ಮಾಡಿದ್ದಾರೆ. ಅಂದಾಜು ಮೌಲ್ಯ 8,95,676=00 ರೂಪಾಯಿ ಹಾಗೂ 3 ಗೂಡ್ಸ್ ವಾಹನಗಳು ಅಂದಾಜು ಮೌಲ್ಯ 9,00,000=00 ರೂಪಾಯಿ, 3 ಮೋಟಾರ್ ಗಳು (2 Hp)ಅಂದಾಜು ಮೌಲ್ಯ 15,000=00 ರೂಪಾಯಿ, 3 ತೂಕ ಅಳತೆ ಮಾಡುವ ಎಲೆಟ್ರೀಕಲ್ ಮಷೀನ್ ಅಂದಾಜು ಮೌಲ್ಯ 6,000=00 ರೂಪಾಯಿ, ಹೀಗೆ ಒಟ್ಟು ಅಂದಾಜು ಮೌಲ್ಯ 18,16,676=00 ರೂ ಮೌಲ್ಯವುಗಳನ್ನು ವಶ ಪಡಿಸಿಕೊಂಡು ಆರೋಪಿಗಳ ವಿರುದ್ದ ಹುಮನಾಬಾದ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಾಳಿಯಲ್ಲಿ ಪಾಲ್ಗೊಂಡ ಹುಮನಾಬಾದ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಯವರ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಲಂಗೋಟಿ ಶ್ಲಾಘಿಸಿದ್ದಾರೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು