News Karnataka Kannada
Thursday, April 25 2024
Cricket
ಬೀದರ್

ಬೀದರ್ ಜಿಲ್ಲೆಯಲ್ಲಿ ಧಾರಾಕಾರ ಮಳೆ: ಜನಜೀವನ ಅಸ್ತವ್ಯಸ್ತ

Heavy rains disrupt normal life in Bidar district
Photo Credit : News Kannada

ಬೀದರ್: ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು, ಸತತ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಸೋಮವಾರ ತಡರಾತ್ರಿ ಆರಂಭಗೊಂಡ ಧಾರಾಕಾರ ಮಳೆ ಬಿಡುವಿಲ್ಲದೆ ಮಂಗಳವಾರೂ ಸುರಿಯುತ್ತಿದೆ. ಇದರ ಪರಿಣಾಮ ನಗರದ ಬೊಮ್ಮಗೊಂಡೇಶ್ವರ ವೃತ್ತ ಸಮೀಪದ ರೈಲ್ವೆ ಕೆಳಸೇತುವೆಯಲ್ಲಿ ನೀರು ಸಂಗ್ರಹವಾಗಿ ವಾಹನಗಳ ಸಂಚಾರಕ್ಕೆ ತೊಡಕಾಗಿದೆ.

ನಗರದ ಪ್ರಮುಖ ರಸ್ತೆಗಳಲೆಲ್ಲಾ ನೀರು ಸಂಗ್ರಹವಾಗಿದ್ದು, ವಾಹನಗಳು ನಿಧಾನ ಗತಿಯಲ್ಲಿ ಸಂಚರಿಸುತ್ತಿವೆ. ವರ್ಷಧಾರೆಗೆ ಬೆಳಿಗ್ಗೆ ಶಾಲಾ, ಕಾಲೇಜು, ಕಚೇರಿಗಳಿಗೆ ಹೋಗುವವರು ಪರದಾಟ ನಡೆಸುಂತಾಯಿತು. ಅನೇಕರು ಕೊಡೆಗಳನ್ನು ಹಿಡಿದುಕೊಂಡು ದೈನಂದಿನ ಕೆಲಸಗಳಿಗೆ ತೆರಳಿದರು.

ಜಿಲ್ಲೆಯ ಬಸವಕಲ್ಯಾಣ, ಭಾಲ್ಕಿ, ಕಮಲನಗರ, ಹುಲಸೂರ, ಹುಮನಾಬಾದ್, ಚಿಟಗುಪ್ಪ, ಔರಾದ್ ಸೇರಿದಂತೆ ಎಲ್ಲೆಡೆ ಮಳೆ ವ್ಯಾಪಿಸಿದೆ. ಸತತ ಮಳೆಗೆ ರೈತರು ಸಂತಸಗೊಂಡಿದ್ದಾರೆ. ಮಳೆಗಾಲ ಆರಂಭಗೊಂಡ ನಂತರ ಸತತವಾಗಿ ಮಳೆ ಸುರಿಯುತ್ತಿರುವುದು ಇದೇ ಮೊದಲು. ಮಳೆಗಾಗಿ ಇತ್ತೀಚೆಗೆ ಜನ ಕಪ್ಪೆ, ಕತ್ತೆಗಳ ಮದುವೆ ಮಾಡಿದ್ದರು. ಧಾರ್ಮಿಕ ಕ್ಷೇತ್ರಗಳಿಗೆ ಪಾದಯಾತ್ರೆ ಕೈಗೊಂಡಿದ್ದರು.

ಮುನ್ನೆಚ್ಚರಿಕೆ:

ಜಿಲ್ಲೆಯಾದ್ಯಂತ ಇನ್ನೂ ಎರಡ್ಮೂರು ದಿನ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಅಗತ್ಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವಂತೆ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರ ತಿಳಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು