News Karnataka Kannada
Friday, April 12 2024
Cricket
ಬೀದರ್

ಗೋಹತ್ಯೆ ತಡೆಯಲು ಹೋಗಿದ್ದ ಶಾಸಕರ ವಿರುದ್ಧ ಎಫ್‌ಐಆರ್ ದಾಖಲು

FIR lodged against MLA who went to stop cow slaughter
Photo Credit : News Kannada

ಬೀದರ್: ಗೋ ಹತ್ಯೆ ತಡೆಯಲು ಹೋದಾಗ ಅನ್ಯ ಕೋಮಿನ ವ್ಯಕ್ತಿ ಜೊತೆ ಕಿರಿಕ್ ವಿಚಾರವಾಗಿ ಬಸವಕಲ್ಯಾಣ ಶಾಸಕ ಶರಣು ಸಲಗರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಮನೆಯ ಮಾಲೀಕನ ಮಗ ಮೇಹರಾಜ್ ಇನಾಮುಲ್ಲಾಖಾನ್ ಅವರು ಶಾಸಕರು ಹಾಗೂ ಅವರ ಬೆಂಬಲಿಗರ ವಿರುದ್ಧ ದೂರು ನೀಡಿದ್ದು ದೂರಿನ್ವಯ ಬಸವಕಲ್ಯಾಣ ನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಬಕ್ರೀದ್ ಹಬ್ಬದಂದು ಕುರ್ಬಾನಿ ಕೊಡುತ್ತಿದ್ದಾಗ ಮನೆಗೆ ಬಂದು ಶಾಸಕರು ಮತ್ತು ಅವರ ಬೆಂಬಲಿಗರು ಧಮ್ಮಿ ಹಾಕಿದ್ದಾರೆ ಎಂದು ಎಫ್‌ಐಆರ್ ದಾಖಲಾಗಿದೆ.

ಶಾಸಕ ಶರಣು ಸಲಗರ್ ಹಾಗೂ ಅವರ ಜೊತೆ ಬಂದಿದ್ದ 15-25 ಜನರು ನಮ್ಮ ಮನೆಯ ಬಳಿ ಬಂದು ಕಿರುಚಾಡಿದ್ದು ಅದು ಹೇಗೆ ಕುರ್ಬಾನಿ ಕೊಡುತ್ತೀರಿ ನೋಡೋಣ, ಕಲ್ಯಾಣದಲ್ಲಿ ನಿಮ್ಮದು ಜಾಸ್ತಿಯಾಗಿದ್ದು ನಾವು ಏನು ಎಂದು ತೋರಿಸುತ್ತೇವೆ ಎಂದು ನಮ್ಮ ಹಾಗೂ ನಮ್ಮ ತಂದೆಗೆ ಶಾಸಕರು ಧಮ್ಕಿ ಹಾಕಿದ್ದಾರೆ ಎಂದು ದೂರು ಸಲ್ಲಿಸಿದ. ಮೇಹರಾಜ್ ಇನಾಮುಲ್ಲಾಖಾನ್ ಬಸವಕಲ್ಯಾಣ ನಗರ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು