Categories: ಬೀದರ್

ಬೀದರ್: ಪವರ್ ಗ್ರಿಡ್ ಸ್ಥಾಪನೆಗೆ ಭೂಮಿ ನೀಡುವುದಿಲ್ಲ ಎಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ

ಬೀದರ್: ಗಡಿ ಬೀದರ್ ಜಿಲ್ಲೆ ಔರಾದ ತಾಲೂಕಿನ ಡೊಂಗರಗಾಂವ ಗ್ರಾಮದ ರೈತರ ಜಮೀನುಗಳಲ್ಲಿ ಪವರ್ ಗ್ರಿಡ್ ಸ್ಥಾವರ ಸ್ಥಾಪನೆಗೆ ಜಮೀನು ಕೊಡಲು ರೈತರು ನಿರಾಕರಿಸಿದ್ದು, ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಆಕ್ರೋಶ ಹೊರ ಹಾಕಿದರು.

ನಮ್ಮ ಅನ್ನದ ತಟ್ಟೆ ರಕ್ಷಣೆ ಮಾಡಿ. ಇರುವ ನಮ್ಮ ಅಲ್ಪಸ್ವಲ್ಪ ಜಮೀನಿನಲ್ಲಿ ನಮ್ಮ ಉಪಜೀವನ, ಇದನ್ನು ಬಿಟ್ಟು ನಮಗೆ ಬೇರೆ ದಾರಿ ಇಲ್ಲ. ನಮ್ಮ ಜಮೀನಿಗೆ ಎಷ್ಟೇ ಹಣ ಕೊಟ್ಟರೂ ನಮ್ಮ ಅನ್ನದ ತಟ್ಟೆ ಎಂದಿಗೂ ಕೊಡಲು ಸಾಧ್ಯವಿಲ್ಲ ಎಂದು ರೈತರು ಆಕ್ರೋಶ ಹಾಕಿದರು. ನಮ್ಮ ಜಮೀನುಗಳಲ್ಲಿ ಪವರ್ ಗ್ರಿಡ್ ಸ್ಥಾಪನೆ ಬದಲು ಬೇರೆ ಕಡೆ ಎಲ್ಲಾದರೂ ಸರ್ಕಾರಿ ಅಥವಾ ಅರಣ್ಯ ಇಲಾಖೆ ಜಮೀನಿನಲ್ಲಿ ಪವರ್ ಗ್ರಿಡ್ ಸ್ಥಾಪನೆ ಮಾಡಿ ಎಂದು ರೈತರು ಮನವಿ ಮಾಡಿದರು.

ರೈತರ ವಿರೋಧವಿದ್ದರೆ ಈ ಪ್ರದೇಶದಲ್ಲಿ ತಾವುಗಳು ಬರುವ ಅವಶ್ಯಕತೆ ಇರುವುದಿಲ್ಲ ಬಂದರೆ ಕಾನೂನು ವಿರುದ್ಧವಾಗುತ್ತದೆ. ನಮ್ಮ ವಿರೋಧದ ನಡೆಯು ತಾವು ಜಮೀನು ತೆಗೆದುಕೊಳ್ಳುವ ವಿಚಾರ ಮಾಡಿದ್ದರೆ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ರೈತ ಮುಖಂಡರು ಎಚ್ಚರಿಕೆ ನೀಡಿದರು.

ರೈತರು ತಮ್ಮ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಸಿದ್ರಾಮಪ್ಪಾ ಅಣದೂರೆ ಪ್ರಧಾನ ಕಾರ್ಯದರ್ಶಿ ದಯಾನಂದ ಸ್ವಾಮಿ ಜಿಲ್ಲಾ ಕಾರ್ಯಾಧ್ಯಕ್ಷ ಶ್ರೀಮಂತ ಬಿರಾದಾರ್ ಚಂದ್ರಶೇಖರ್ ಜಮಖಂಡಿ ಅನೇಕ ಮುಖಂಡರು ಉಪಸ್ಥಿತರಿದ್ದರು.

Gayathri SG

Recent Posts

ಶೀಘ್ರದಲ್ಲೇ ಎರ್ನಾಕುಲಂನಿಂದ ಬೆಂಗಳೂರಿಗೆ ವಂದೇ ಭಾರತ್ ಆರಂಭ

ಲೋಕಸಭೆ ಚುನಾವಣೆ ಮುಗಿದ ಬಳಿಕ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಶೀಘ್ರದಲ್ಲೇ ಕೊಚ್ಚಿಯ ಎರ್ನಾಕುಲಂನಿಂದ ಬೆಂಗಳೂರಿಗೆ ಸಂಚಾರ ಪ್ರಾರಂಭಿಸಲಿದೆ.

1 min ago

ಅಂಬೇಡ್ಕರ್ ಜಯಂತೋತ್ಸವದ ಅಂಗವಾಗಿ ಗ್ರಾಮೀಣ ಕ್ರೀಡಾಕೂಟಕ್ಕೆ ಚಾಲನೆ

ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ರವರ 133ನೇ ಜಯಂತೋತ್ಸವ ಅಂಗವಾಗಿ ನಂಜನಗೂಡು ತಾಲ್ಲೂಕಿನ ಚುಂಚನಹಳ್ಳಿ ಗ್ರಾಮದಲ್ಲಿ ವಿಮೋಚನಾ ಯುವಕರ ಸಂಘದ…

22 mins ago

ಗಾಳಿ ಮಳೆಗೆ ಮರ ಬಿದ್ದು ಮನೆಗೆ ಹಾನಿ; ಶಾಸಕರ ಭೇಟಿ, ತಕ್ಷಣ ವ್ಯವಸ್ಥೆ ಮಾಡುವಂತೆ ಸೂಚನೆ

ಭಾನುವಾರ ಸಂಜೆ ಪುತಯ್ತೂರು ನಗರ ವ್ಯಾಪ್ತಿಯಲ್ಲಿ ಭಾರೀ ಗಾಳಿಮಳೆ ಬಂದಿದ್ದು ಬಪ್ಪಳಿಗೆಯ ಸಿಂಗಾಣಿ ಎಂಬಲ್ಲಿ ಕಮಲ ಎಂಬವರ ಮನೆಯ ಮಾಡಿನ…

26 mins ago

‘ಸೀತಾರಾಮ’ ಖ್ಯಾತಿಯ ವೈಷ್ಣವಿಗೆ ದಂಡ ವಿಧಿಸಿದ ರಿಯಲ್ ಪೊಲೀಸರು

ಯಾವಾಗಲೂ ಯಾರೇ ಆದರೂ ಟ್ರಾಫಿಕ್​ ರೂಲ್ಸ್​​ ಪಾಲನೆ ಮಾಡಲೇ ಬೇಕು. ಅದು ರಿಯಲ್ ಆಗಿರಲಿ ಅಥವಾ ರೀಲ್ ಆಗಿರಲಿ. ಹೌದು…

41 mins ago

ರಷ್ಯಾದಿಂದ ಕಡಿಮೆ ಬೆಲೆಗೆ ತೈಲ ಖರೀದಿಸಲು ಭಾರತಕ್ಕೆ ಅಮೆರಿಕ ಯಾಕೆ ಒಪ್ಪಿಗೆ ನೀಡಿದ್ದು?

ಉಕ್ರೇನ್ ಮೇಲೆ ರಷ್ಯಾ ದಾಳಿ ಮಾಡಿದ ಬಳಿಕ   ಅಮೆರಿಕ ಸೇರಿದಂತೆ ಹಲವು ಯೂರೋಪಿಯನ್ ದೇಶಗಳು ರಷ್ಯಾದ ಮೇಲೆ ಅನೇಕ ನಿರ್ಬಂಧಗಳನ್ನು…

49 mins ago

ಬೆಂಗಳೂರಿನಲ್ಲಿ ಭಾರಿ ಮಳೆ; ಆರ್​ಸಿಬಿ- ಡೆಲ್ಲಿ ಪಂದ್ಯ ರದ್ದು

ಐಪಿಎಲ್ 2024ರ 62 ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವೆ ಇಂದು ಸಂಜೆ…

1 hour ago