News Karnataka Kannada
Monday, April 29 2024
ಬೀದರ್

ಹಸಿ ಮಾವಿನಿಂದ ಉತ್ತಮ ಆದಾಯ ಗಳಿಸಿದ ಪ್ರಗತಿಪರ ರೈತ

ಹೆಚ್ಚಿನ ಮಾವಿನ ಗಿಡಗಳಲ್ಲಿ ಇನ್ನೂ ಮಿಡಿಗಾಯಿಗಳು ಇವೆ. ಆಗಲೇ ಚಿಟ್ಟಾ ಗ್ರಾಮದ ಪ್ರಗತಿ ಪರ ರೈತ ಜಾಫರ್‌ ಮಿಯಾ ಹಸಿ ಮಾವಿನಕಾಯಿ ಮಾರಾಟದಿಂದ ₹ 75 ಸಾವಿರ ಆದಾಯ ಗಳಿಸಿದ್ದಾರೆ.
Photo Credit : NewsKarnataka

ಬೀದರ್: ಹೆಚ್ಚಿನ ಮಾವಿನ ಗಿಡಗಳಲ್ಲಿ ಇನ್ನೂ ಮಿಡಿಗಾಯಿಗಳು ಇವೆ. ಆಗಲೇ ಚಿಟ್ಟಾ ಗ್ರಾಮದ ಪ್ರಗತಿ ಪರ ರೈತ ಜಾಫರ್‌ ಮಿಯಾ ಹಸಿ ಮಾವಿನಕಾಯಿ ಮಾರಾಟದಿಂದ ₹ 75 ಸಾವಿರ ಆದಾಯ ಗಳಿಸಿದ್ದಾರೆ.

15 ದಿನಗಳಿಂದ ನಿತ್ಯ ಸರಾಸರಿ ₹ 5 ಸಾವಿರ ಆದಾಯ ಪಡೆಯುತ್ತಿದ್ದಾರೆ. ಇನ್ನೂ 15 ದಿನ ಇದೇ ಪ್ರಮಾಣದ ಗಳಿಕೆಯ ನಿರೀಕ್ಷೆಯಲ್ಲಿ ಇದ್ದಾರೆ.

ಬೀದರ್‌ನ ಹಣ್ಣು ಮತ್ತು ತರಕಾರಿ ಮಾರುಕಟ್ಟೆಯಲ್ಲಿ ಅವರ ಹಸಿ ಮಾವಿನಕಾಯಿ ಕೆಜಿಗೆ ₹ 60 ರಂತೆ ಮಾರಾಟ ಆಗುತ್ತಿವೆ.

‘ಬಡಾ ಮದ್ರಾಸಿ, ಛೋಟಾ ಮದ್ರಾಸಿ, ನವಾಬ್ ಪುರುಷ್ ತಳಿಗಳು ಸೇರಿದಂತೆ 15 ದಿನಗಳಿಂದ ನಿತ್ಯ ಒಂದು ಕ್ವಿಂಟಲ್ ಹಸಿ ಮಾವು ಮಾರಾಟ ಮಾಡುತ್ತಿದ್ದೇನೆ. ಯೋಗ್ಯ ಧಾರಣೆ ಇರುವುದರಿಂದ ಉತ್ತಮ ಆದಾಯ ಬರುತ್ತಿದೆ’ ಎಂದು ಹೇಳುತ್ತಾರೆ ಜಾಫರ್‌ ಮಿಯಾ.

‘ಒಂದು ಹಸಿ ಮಾವಿನಕಾಯಿ ತೂಕ 500 ಗ್ರಾಂ.ನಿಂದ 750 ಗ್ರಾಂ. ವರೆಗೆ ಇದೆ. ಜನ ಉಪ್ಪಿನಕಾಯಿ, ಚಟ್ನಿ ತಯಾರಿಸಲು ಖರೀದಿಸುತ್ತಿದ್ದಾರೆ. ಮಾವು ಗಿಡಗಳ ನಿರ್ವಹಣೆ ಹಾಗೂ ಸಾಗಣೆ ವೆಚ್ಚ ಹೊರತುಪಡಿಸಿದರೆ ಕ್ವಿಂಟಲ್‍ಗೆ ಸರಾಸರಿ ₹5 ಸಾವಿರ ಗಳಿಕೆ ಆಗುತ್ತಿದೆ’ ಎಂದು ತಿಳಿಸುತ್ತಾರೆ.

ನನಗೆ 15 ಎಕರೆ ಜಮೀನು ಇದೆ. ಐದು ವರ್ಷಗಳ ಹಿಂದೆ ಏಳು ಎಕರೆಯಲ್ಲಿ 900 ಮಾವಿನ ಸಸಿಗಳನ್ನು ಹಚ್ಚಿದ್ದೇನೆ. 200 ಗಿಡಗಳು ಈಗ ಅಧಿಕ ಫಲ ನೀಡುತ್ತಿವೆ’ ಎಂದು ಹೇಳುತ್ತಾರೆ.

‘ಕರೆ ಕೊಬ್ಬರಿ, ಗೋಲಾ, ಬಡಾ ಸೇಬ್ ತಳಿಯ ಮಾವಿನ ಮರಗಳೂ ತೋಟದಲ್ಲಿ ಇವೆ. ಮಾರುಕಟ್ಟೆಗೆ ಬೇರೆಯವರ ಹಸಿ ಮಾವು ಬರಲು ಇನ್ನೂ 15 ದಿನಗಳು ಆಗಲಿವೆ. ಆ ವೇಳೆಗೆ ನಮ್ಮ ತೋಟದಲ್ಲಿನ ಮಾವು ಮಾಗಲಿವೆ. ಸುವಾಸಿತ ಹಾಗೂ ತಿನ್ನಲು ರುಚಿಕರವಾಗಿರಲಿವೆ. ಮಾಗಿದ ಮಾವು ಮಾರಾಟದಿಂದ ಹಸಿ ಮಾವಿಗಿಂತ ಎರಡು-ಮೂರು ಪಟ್ಟು ಹೆಚ್ಚು ಆದಾಯ ಬರಲಿದೆ’ ಎಂದು ತಿಳಿಸುತ್ತಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು