Categories: ಬೀದರ್

ಕಲ್ಯಾಣ ಭಾಗದಲ್ಲಿ ನಂದಿನಿ, ಮಜ್ಜಿಗೆ ಬೇಡಿಕೆ ಮೂರೂವರೆಪಟ್ಟು ಹೆಚ್ಚಳ

ಬೀದರ್ : ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಸಿಲು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಜನರು ತಮ್ಮ ದಾಹ ನೀಗಿಸಿಕೊಳ್ಳಲು ಎಳನೀರು, ಮಜ್ಜಿಗೆಯಂಥ ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಅದರಲ್ಲೂ ನಂದಿನಿ ಮಜ್ಜಿಗೆಗೆ ಮೂರೂವರೆಪಟ್ಟು ಬೇಡಿಕೆ ಹೆಚ್ಚಿದೆ.

ಕಲಬುರಗಿ-ಬೀದರ್‌-ಯಾದಗಿರಿ ಹಾಲು ಒಕ್ಕೂಟದ ನೀಡಿರುವ ಅಂಕಿ-ಅಂಶಗಳ ಪ್ರಕಾರ ಕಳೆದ ಫೆಬ್ರವರಿ ತಿಂಗಳಲ್ಲಿ ನಿತ್ಯ ಸರಾಸರಿ 1,243 (ತಲಾ 200 ಎಂಎಲ್‌ನ 6,215 ಪ್ಯಾಕೆಟ್‌) ಲೀಟರ್‌ಗಳಷ್ಟಿದ್ದ ಮಜ್ಜಿಗೆಯ ಬೇಡಿಕೆಗೆ ಮಾರ್ಚ್‌ ತಿಂಗಳಲ್ಲಿ ಮೂರೂವರೆ ಪಟ್ಟು ಹೆಚ್ಚಾಗಿದೆ. ಇದೀಗ ಪ್ರತಿ ಸರಾಸರಿ 4,615 ಲೀಟರ್‌ಗೂ ಅಧಿಕ ಮಜ್ಜಿಗೆ (23,075 ಪ್ಯಾಕೆಟ್‌) ಮಾರಾಟವಾಗುತ್ತಿದೆ.

2023ರ ಮಾರ್ಚ್‌ಗೆ ಹೋಲಿಸಿದರೆ, 2024ರ ಮಾರ್ಚ್‌ನಲ್ಲಿ ಮಜ್ಜಿಗೆಯ ಬೇಡಿಕೆಗೆ ಬಹುತೇಕ ದುಪ್ಪಟ್ಟು ತಲುಪಿದೆ. 2023ರ ಮಾರ್ಚ್‌ನಲ್ಲಿ ನಿತ್ಯ ಸರಾಸರಿ 2,830 ಲೀಟರ್‌ ಮಜ್ಜಿಗೆಗೆ ಬೇಡಿಕೆಯಿತ್ತು. ಈ ಮಾರ್ಚ್‌ 20ರ ವೇಳೆಗೆ ನಿತ್ಯ ಸರಾಸರಿ 4,615 ಲೀಟರ್‌ ಮಜ್ಜಿಗೆ ಮಾರಾಟವಾಗುತ್ತಿದೆ ಎಂದು ಒಕ್ಕೂಟದ ಅಧಿಕಾರಿಗಳು ತಿಳಿಸಿದ್ದಾರೆ.

ಮಜ್ಜಿಗೆಯೊಂದಿಗೆ ನಂದಿನಿ ಮೊಸರಿಗೂ ಬೇಡಿಕೆ ವೃದ್ಧಿಸಿದೆ. ಕಳೆದ ಫೆಬ್ರುವರಿ ತಿಂಗಳಲ್ಲಿ ನಿತ್ಯ ಸರಾಸರಿ 9,618 ಲೀಟರ್‌ ಮೊಸರು ಮಾರಾಟವಾಗುತ್ತಿತ್ತು. ಮಾರ್ಚ್‌ 20ರ ವೇಳೆಗೆ ಈ ಬೇಡಿಕೆ ನಿತ್ಯ 10,821 ಲೀಟರ್‌ಗೆ ಹೆಚ್ಚಿದೆ. ಒಟ್ಟಾರೆ ಬೇಡಿಕೆಯಲ್ಲಿ 1,203 ಲೀಟರ್‌ಗಳಷ್ಟು ಹೆಚ್ಚಳ ಕಂಡು ಬಂದಿದೆ. ಫೆಬ್ರವರಿ ತಿಂಗಳಿಗೆ ಹೋಲಿಸಿದರೆ ಮಾರ್ಚ್‌ನಲ್ಲಿ ಒಕ್ಕೂಟ ವ್ಯಾಪ್ತಿಯಲ್ಲಿ ಬೀದರ್‌ ಜಿಲ್ಲೆಯಲ್ಲಿ ಮೊಸರಿಗೆ ಬೇಡಿಕೆ ವೃದ್ಧಿಸಿದೆ. ಯಾದಗಿರಿ ಜಿಲ್ಲೆಯಲ್ಲಿ ನಂದಿನಿ ಮಜ್ಜಿಗೆಗೆ ವ್ಯಾಪಕ ಬೇಡಿಕೆ ವ್ಯಕ್ತವಾಗಿದೆ.

ಲಸ್ಸಿ, ಐಸ್‌ಕ್ರೀಂಗೂ ಬೇಡಿಕೆ:

ಇದೇ ಸಲ ಒಕ್ಕೂಟದಿಂದ ಲಸ್ಸಿ ಕೂಡ ಉತ್ಪಾದಿಸಲಾಗುತ್ತಿದ್ದು, ನಿತ್ಯ ಸರಾಸರಿ 600 ಲೀಟರ್‌ಗಳಷ್ಟು(ತಲಾ 200 ಎಂಎಲ್‌ನ 6 ಸಾವಿರ ಪ್ಯಾಕೆಟ್‌) ಲಸ್ಸಿಗೆ ಮಾರುಕಟ್ಟೆಯಲ್ಲಿ ಬೇಡಿಕೆಯಿದೆ. ಬಿಸಿಲು ಹೆಚ್ಚಿದ ಬೆನ್ನಲ್ಲೇ ಐಸ್‌ಕ್ರೀಂಗೂ ಬೇಡಿಕೆ ಬಂದಿದೆ. ಪ್ರತಿ ತಿಂಗಳು ವಿವಿಧ ಬಗೆಯ 6 ಸಾವಿರ ಲೀಟರ್‌ ಐಸ್‌ಕ್ರೀಂ ಮಾರಾಟವಾಗುತ್ತಿತ್ತು. ಈಗ ಐಸ್‌ಕ್ರೀಂ ಬೇಡಿಕೆಗೆ ತಿಂಗಳಿಗೆ 10 ಸಾವಿರ ಲೀಟರ್‌ಗೆ ಹೆಚ್ಚಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಎಮ್ಮೆ ಹಾಲಿಗೂ ಉತ್ತಮ ಸ್ಪಂದನೆ:

‘ಒಕ್ಕೂಟದಿಂದ ಇದೇ ತಿಂಗಳು ಮಾರುಕಟ್ಟೆಗೆ ಪರಿಚಯಿಸಿರುವ ಎಮ್ಮೆ ಹಾಲಿಗೂ ದಿನೇ ದಿನೇ ಬೇಡಿಕೆಗೆ ಹೆಚ್ಚುತ್ತಿದೆ. ಸದ್ಯ ಪ್ರತಿದಿನ ಸರಾಸರಿ 3 ಸಾವಿರ ಲೀಟರ್‌ ಎಮ್ಮೆ ಹಾಲು ಮಾರಾಟವಾಗುತ್ತಿದೆ. ಸದ್ಯ ರಂಜಾನ್‌ ತಿಂಗಳು ನಡೆಯುತ್ತಿದ್ದು, ಮುಸ್ಲಿಂ ಸಮುದಾಯದ ಹೋಟೆಲ್‌ಗಳ ದಿನದ ವಹಿವಾಟು ಕಡಿಮೆಯಾಗಿರುತ್ತದೆ. ರಂಜಾನ್‌ ಮಾಸ ಮುಗಿದರೆ, ಎಮ್ಮೆ ಹಾಲಿಗೆ ಇನ್ನಷ್ಟು ಬೇಡಿಕೆ ಬರಲಿದೆ’ ಎಂಬುದು ಕಲಬುರಗಿ-ಬೀದರ್‌-ಯಾದಗಿರಿ ಹಾಲು ಒಕ್ಕೂಟದ ಅಧಿಕಾರಿಗಳ ವಿಶ್ವಾಸ.

Chaitra Kulal

Recent Posts

ಚುನಾವಣೆ ಮುಕ್ತಾಯದ ಬೆನ್ನಲ್ಲೇ ಆಕ್ಟಿವ್ ಆದ ಶಾಸಕ ಪ್ರಭು ಚವಾಣ್

ಲೋಕಸಭಾ ಚುನಾವಣೆ ಮುಕ್ತಾಯ ಬೆನ್ನಲ್ಲೇ ಬೀದರ್ ಜಿಲ್ಲೆ ಔರಾದ್ ಶಾಸಕ ಪ್ರಭು ಚವಾಣ್ ಕ್ಷೇತ್ರದಲ್ಲಿ ಆಕ್ಟಿವ್ ಆಗಿದ್ದಾರೆ. ಅನಾರೋಗ್ಯ ಕಾರಣ…

13 mins ago

ಶಾಸಕ ಇಕ್ಬಾಲ್‌ ಹುಸೇನ್‌ ವಿಡಿಯೋ ವೈರಲ್‌ ಕೇಸ್‌ : ಇಬ್ಬರ ಬಂಧನ

ಶಾಸಕ ಇಕ್ಬಾಲ್‌ ಹಸೇನ್‌ ಅವರು ಮಹಿಳಾ ಕಾಂಗ್ರೆಸ್‌ ಕಾರ್ಯಕರ್ತೆ ಜೊತೆ ವಿಡಿಯೋ ಕಾಲ್‌ನಲ್ಲಿ ಮಾತನಾಡುತ್ತಿದ್ದ ವಿಡಿಯೋ ವೈರಲ್‌ ಮಾಡಿದ್ದ ಆರೋಪದಡಿ…

15 mins ago

ಸುನೀತಾ ವಿಲಿಯಮ್ಸ್‌ ಗಗನಯಾತ್ರೆ ಮತ್ತೆ ಸ್ಥಗಿತ : ಮೇ 17ಕ್ಕೆ ಮುಂದೂಡಿಕೆ

ಭಾರತ ಮೂಲದ ವಿಶ್ವವಿಖ್ಯಾತ ಗಗನಯಾತ್ರಿ ಸುನೀತಾ ವಿಲಿಯಮ್ಸ್‌ ಕೈಗೊಂಡಿರುವ ಗಗನಯಾತ್ರೆಯನ್ನು ಮತ್ತೆ ಮುಂದೂಡಲಾಗಿದೆ

37 mins ago

ನ್ಯೂಸ್ ಕರ್ನಾಟಕ ವರದಿಯ ಫಲಶೃತಿ : ಗೋಳೂರು ಗ್ರಾಮಕ್ಕೆ ತಹಶೀಲ್ದಾರ್ ಭೇಟಿ

ತಾಲ್ಲೂಕಿನ ಗೋಳೂರು ಗ್ರಾಮದ ಅಂಬೇಡ್ಕರ್ ಬಡಾವಣೆಯಲ್ಲಿ ಗಬ್ಬೆದ್ದು ನಾರುತ್ತಿರುವ ಚರಂಡಿ ಅವ್ಯವಸ್ಥೆಯ ಬಗ್ಗೆ ನ್ಯೂಸ್ ಕರ್ನಾಟಕ ವಾಹಿನಿಯಲ್ಲಿ ಸುದ್ದಿಯನ್ನು ಪ್ರಸಾರ…

50 mins ago

ಫೋನಿನಲ್ಲಿ ಮಾತಾಡುತ್ತಾ ಅಂಗಳದಲ್ಲಿ ಬೆಳೆದ ಹೂ ತಿಂದ ಯುವತಿ ಸಾವು

ಮೊಬೈಲ್‌ ನಲ್ಲಿ ಮಾತಾಡುತ್ತಾ ಅಂಗಳದಲ್ಲಿ ಬೆಳೆದಿದ್ದ ಕಣಗಿಲೆ ಹೂವನ್ನು ಕಿತ್ತು ತಿಂದ ಪರಿಣಾಮ ಯುವತಿಯೊಬ್ಬಳು ಪ್ರಾಣವನ್ನೇ ಕಳೆದುಕೊಂಡಿರುವ ಅಹಿತಕರ ಘಟನೆ…

1 hour ago

ಜ್ಯೋತಿ ರೈ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ವೈರಲ್‌: ನಟಿಯ ಸ್ಲಷ್ಟನೆ ಏನು ?

ಸೋಷಿಯಲ್‌ ಮೀಡಿಯಾದಲ್ಲಿ ಹಸಿ ಬಿಸಿ ಫೋಟೋಗಳನ್ನು ಶೇರ್‌ ಮಾಡುತ್ತ, ಹಲ್‌ಚಲ್‌ ಸೃಷ್ಟಿಸುತ್ತಿದ್ದ ಕಿರುತೆರೆ ನಟಿ ಜ್ಯೋತಿ ರೈ, ಇದೀಗ ಖಾಸಗಿ…

1 hour ago