News Karnataka Kannada
Sunday, April 14 2024
Cricket
ಬೀದರ್

ಬೀದರ್‌ನಲ್ಲಿ ಹೆಚ್ಚಿದ ಬಿಡಾಡಿ ದನಗಳ ಹಾವಳಿ

ಬೇಸಿಗೆ ಉರಿಬಿಸಿಲಿನ ತಾಪದಿಂದ ರಕ್ಷಣೆ, ಹಸಿದ ಹೊಟ್ಟೆ ತುಂಬಿಸಿಕೊಳ್ಳಲು ದನಗಳು ಪಟ್ಟಣದ ಅಂಗಡಿಗಳ ಒಳಗೆ ಯಾರ ಭಯವಿಲ್ಲದೆ ನುಗ್ಗುತ್ತಿವೆ.
Photo Credit : NewsKarnataka

ಬೀದರ್‌: ಬೇಸಿಗೆ ಉರಿಬಿಸಿಲಿನ ತಾಪದಿಂದ ರಕ್ಷಣೆ, ಹಸಿದ ಹೊಟ್ಟೆ ತುಂಬಿಸಿಕೊಳ್ಳಲು ದನಗಳು ಪಟ್ಟಣದ ಅಂಗಡಿಗಳ ಒಳಗೆ ಯಾರ ಭಯವಿಲ್ಲದೆ ನುಗ್ಗುತ್ತಿವೆ. ಅಂಗಡಿಗಳ ಮುಂದೆ ಬಕೆಟ್‌ಗಳಲ್ಲಿ ತುಂಬಿಟ್ಟ ನೀರು ಕುಡಿಯುತ್ತಿವೆ. ದವಸ ಧಾನ್ಯ, ಹಣ್ಣು, ತರಕಾರಿ ಅಂಗಡಿಗಳ ಮುಂದೆ ಜೋಡಿಸಿಟ್ಟ ಪದಾರ್ಥಗಳು ತಿನ್ನುತ್ತಿವೆ. ಕೆಲವು ವ್ಯಾಪಾರಿಗಳಿಗೆ ಕಿರಿಕಿರಿಯಾದರೇ, ಕೆಲವರು ತಾವಾಗಿಯೇ ದನಗಳಿಗೆ ಬನ್, ಬ್ರೆಡ್, ರೊಟ್ಟಿ, ಹಣ್ಣು ತಿನ್ನಿಸುತ್ತಿದ್ದಾರೆ.

ಬರದಿಂದ ಅಡವಿ, ಹೊಲ ಗದ್ದೆಗಳಲ್ಲಿ ಮೇವು ಸಿಗಲಾರದಕ್ಕೆ ಸಾಕಿದ ಮಾಲೀಕರು ಎಲ್ಲಾದರೂ ತಿರುಗಾಡಿ ಹೊಟ್ಟೆ ತುಂಬಿಸಿಕೊಂಡು ಮನೆಗೆ ಬರಲಿ ಎಂಬಂತೆ ದನಗಳಿಗೆ ಬಿಡುತ್ತಿದ್ದಾರೆ. ಕೆಲವು ದನಗಳು ದೇವರ ಹೆಸರಿನಲ್ಲಿ ಗೂಳಿ ರೂಪದಲ್ಲಿ ಬಿಟ್ಟಿದ್ದರಿಂದ ಅವುಗಳಿಗೆ ಯಾವ ಆಶ್ರಯವೂ ಇಲ್ಲದಕ್ಕೆ ಎಲ್ಲೆಂದರಲ್ಲಿ ತಿರುಗಾಡುತ್ತ ಹೊಟ್ಟೆ ತುಂಬಿಸಿಕೊಳ್ಳುತ್ತಿವೆ ಎನ್ನುತ್ತಾರೆ ವರ್ತಕರಾದ ರಮೇಶ್, ಚಂದು, ಸೋಮನಾಥ್, ಪ್ರಭು.

ಬಿಡಾಡಿ ದನಗಳು ನಡುರಸ್ತೆಯಲ್ಲೇ ಮಲಗುವುದು, ಕಾದಾಟಕ್ಕೆ ಇಳಿಯುವುದರಿಂದ ವ್ಯಾಪಾರಸ್ಥರು, ಸಾರ್ವಜನಿಕರು ಮತ್ತು ವಾಹನ ಸವಾರರಿಗೆ ನಿತ್ಯ ಕಿರಿಕಿರಿಯಾಗುತ್ತಿದೆ. ಪಟ್ಟಣದ ಬಸವರಾಜ್‌ ವೃತ್ತದಿಂದ ಕುಡಂಬಲ್‌ ರಸ್ತೆ ಮಧ್ಯ ಅಂಚೆ ಕಚೇರಿ ಎದುರಿನ ರಸ್ತೆ, ಹಳೆ ಬಸ್‌ ನಿಲ್ದಾಣ ರಸ್ತೆ, ಗಾಂಧಿ ವೃತ್ತದ ಸುತ್ತಲಿನ ಪ್ರದೇಶಗಳಲ್ಲಿ ದನಗಳು ಗುಂಪುಗುಂಪಾಗಿ ಮಲಗಿರುತ್ತವೆ.

ಬೇಸಿಗೆ ಮುಗಿಯುವ ತನಕ ಪುರಸಭೆ ಪಟ್ಟಣದ ವಿವಿಧೆಡೆ ದನಗಳಿಗೆ ಕುಡಿಯಲು ನೀರಿನ ತೊಟ್ಟಿ, ಹೊರ ಊರುಗಳಿಂದ ಪಟ್ಟಣಕ್ಕೆ ಬರುವ ನಾಗರಿಕರಿಗೆ ನೀರಿನ ಮಡಕೆ ವ್ಯವಸ್ಥೆ ಮಾಡಬೇಕು ಎಂದು ಪಟ್ಟಣದ ಗೌರೀಶ್, ಶಿವಕುಮಾರ್, ಉತ್ತಮಕುಮಾರ್‌ ಇತರರು ಆಗ್ರಹ.

ಬೀದಿಯಲ್ಲಿ ಓಡಾಡುವ ಬಿಡಾಡಿ ದನಗಳನ್ನು ಪತ್ತೆ ಹಚ್ಚಿ ಅವುಗಳಿಗೆ ಗೋ ಶಾಲೆಗೆ ಸಾಗಿಸಬೇಕು. ಜಾನುವಾರು ಸಾಕಣೆದಾರರನ್ನು ಪತ್ತೆ ಹಚ್ಚಿ ದನಗಳು ರಸ್ತೆಗೆ ಬಿಡದಂತೆ ಸೂಚಿಸಿ ನಿಯಮ ಉಲ್ಲಂಘಿಸಿದಲ್ಲಿ ಸೂಕ್ತ ದಂಡ ವಿಧಿಸಲಾಗುತ್ತದೆ ಎಂಬ ಸಂದೇಶ ಪುರಸಭೆ ನೀಡಬೇಕು ಎನ್ನುತ್ತಾರೆ ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆ ನಿರ್ದೇಶಕ ಮಲ್ಲಿಕಾರ್ಜುನ ಪಾಟೀಲ.

ನಾಗರಿಕರಿಗೆ ಹಲವು ಬಾರಿ ದನಗಳು ರಸ್ತೆಗಳ ಮೇಲೆ ಬಿಡಬಾರದು ಸಾಕಿದ ಜಾನುವಾರುಗಳ ರಕ್ಷಣೆ ಅವುಗಳ ಮಾಲೀಕರು ಮಾಡಬೇಕು ತಪ್ಪಿದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು