News Karnataka Kannada
Wednesday, May 01 2024
ಬೀದರ್

ಬೀದರ್: ಅಮಿತ್ ಶಾ ಅವರಿಗೆ 5 ಕೆ.ಜಿಯ ಬೆಳ್ಳಿಯ ಕಿರೀಟ, ಗದೆ ನೀಡಿದ ಶಾಸಕ ಶರಣು ಸಲಗರ್

Bjp MLA Sharanu Salgar presents 5 kg silver crown, mace to Amit Shah
Photo Credit : News Kannada

ಬೀದರ್ : ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರದ ಗದ್ದುಗೆ ಹಿಡಿಯಲು ಪಣ ತೊಟ್ಟಿರುವ ಕೇಸರಿ ಪಡೆ, ಶುಕ್ರವಾರ ಬಸವೇಶ್ವರರ ಕಾರ್ಯಕ್ಷೇತ್ರ ಬಸವಕಲ್ಯಾಣದಲ್ಲಿ ಮೂರನೇ ಹಂತದ ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿದೆ.

ಈ ಮೂಲಕ ಕಲ್ಯಾಣ ಕರ್ನಾಟಕ ಭಾಗದ ಹೆಚ್ಚು ವಿಧಾನಸಭೆ ಕ್ಷೇತ್ರಗಳಲ್ಲಿ ಕಮಲ ಅರಳಿಸಲು ಬಿಜೆಪಿ ಪ್ರಚಾರಕ್ಕೆ ಕಹಳೆ ಮೊಳಗಿಸಿದೆ.

ಲಿಂಗಾಯತರ ಪ್ರಮುಖ ಧಾರ್ಮಿಕ ಕ್ಷೇತ್ರವಾಗಿರುವ ಬಸವ ಕಲ್ಯಾಣದ ಥೇರ್ ಮೈದಾನದಲ್ಲಿ ಶುಕ್ರವಾರ ವಿಜಯ ಸಂಕಲ್ಪ ಯಾತ್ರೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಯಾತ್ರೆಗೆ ಚಾಲನೆ ನೀಡಿದ್ದಾರೆ.

ನಂತರ ವಿಶ್ಚದ ಮೊದಲ ‘ಸಂಸತ್’ ಖ್ಯಾತಿಯ ಅನುಭವ ಮಂಟಪ್ಪಕ್ಕೆ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ವೇಳೆ ಶರಣರ ಸಂದೇಶ, ವಚನ ಚಳುವಳಿಯನ್ನು ಸ್ಮರಿಸಿದ್ದಾರೆ.

ಬಸವಣ್ಣನ ನೆಲದಿಂದ ಬಿಜೆಪಿ ವೀರಶೈವ- ಲಿಂಗಾಯತರ ಪರವಾಗಿದೆ ಎಂಬ ಸಂದೇಶ ನೀಡಿದ್ದಾರೆ. ಹರಿದು ಹಂಚಿ ಹೋಗುತ್ತಿರುವ ಕಲ್ಯಾಣ ಕರ್ನಾಟಕ ಭಾಗದ ಪ್ರಬಲ, ಸಾಂಪ್ರದಾಯಿಕ ಮತಗಳನ್ನು ಸೆಳೆಯುವ ಪ್ರಯತ್ನಕ್ಕೆ ಬಿಜೆಪಿ ಮುಂದಾಗಿದೆ.

ಅಮಿತ್ ಶಾ ಅವರಿಗೆ ಶಾಸಕ ಶರಣು ಸಲಗರ್ ಅವರು 5 ಕೆ.ಜಿಯ ಬೆಳ್ಳಿಯ ಕಿರೀಟ ಮತ್ತು ಗದೆ ನೀಡಿ ಸತ್ಕರಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು