Categories: ಬೀದರ್

ಬೀದರ್‌ನಲ್ಲಿ ಪ್ರಾಬಲ್ಯ ಹೆಚ್ಚಿಸಿಕೊಂಡ ಬಿಜೆಪಿ

ಬೀದರ್‌: ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ರಾಜಕೀಯ ಲೆಕ್ಕಾಚಾರಗಳು ಬುಡ ಮೇಲಾಗಿವೆ. ರಾಜ್ಯದಲ್ಲಿ ಕಾಂಗ್ರೆಸ್‌ ಬಹುಮತ ಪಡೆದುಕೊಂಡರೆ, ಜಿಲ್ಲೆಯಲ್ಲಿ 2018ರ ಚುನಾವಣೆ ನಂತರ ಎರಡು ಸ್ಥಾನ ಕಳೆದುಕೊಂಡಿದೆ. ಬಿಜೆಪಿ ರಾಜ್ಯದಲ್ಲಿ ಹಿನ್ನಡೆ ಅನುಭವಿಸಿದರೂ ಜಿಲ್ಲೆಯಲ್ಲಿ ಪ್ರಾಬಲ್ಯ ಹೆಚ್ಚಿಸಿಕೊಂಡಿದೆ.

ಹುಮನಾಬಾದ್‌ ಗೌಡರ ಕುಟುಂಬದ ಒಡಕಿನ ಲಾಭ ಪಡೆದು ಸೋದರ ಸಂಬಂಧಿಯನ್ನೇ ಕಣಕ್ಕಿಸಿ ನಡೆಸಿದ ತಂತ್ರಗಾರಿಕೆಯಲ್ಲಿ ಬಿಜೆಪಿ ಯಶ ಸಾಧಿಸಿದೆ. ಕ್ಷೇತ್ರದಲ್ಲಿ ಮೋದಿ ನಡೆಸಿದ ಪ್ರಚಾರ ಹಾಗೂ ಜೆಡಿಎಸ್‌ ಅಭ್ಯರ್ಥಿ ಸಿ.ಎಂ.ಫೈಜ್‌ ಸ್ಪರ್ಧೆಯಿಂದಾಗಿ ಕಾಂಗ್ರೆಸ್‌ ಸಾಂಪ್ರದಾಯಿಕ ಮತಗಳು ವಿಭಜನೆಯಾದದ್ದೂ ಬಿಜೆಪಿ ಗೆಲುವಿಗೆ ನೆರವಾಗಿವೆ.

ಬಿಜೆಪಿಯ ಸಿದ್ದು ಪಾಟೀಲ ಮೊದಲ ಪ್ರಯತ್ನದಲ್ಲೇ ಗೆದ್ದಿದ್ದಾರೆ. ಕಾಂಗ್ರೆಸ್‌ನ ರಾಜಶೇಖರ ಪಾಟೀಲ ವಿಧಾನ ಪರಿಷತ್‌ ಸದಸ್ಯರಾಗಿರುವ ತನ್ನ ಇಬ್ಬರು ಸಹೋದರರಾದ ಚಂದ್ರಶೇಖರ ಪಾಟೀಲ ಹಾಗೂ ಭೀಮರಾವ್‌ ಪಾಟೀಲ ಜತೆ ಸೇರಿ ಸಂಘಟಿತ ಪ್ರಯತ್ನ ನಡೆಸಿದರೂ ಗೆಲುವು ಸಾಧ್ಯವಾಗಲಿಲ್ಲ.

ಬೀದರ್‌ ಕ್ಷೇತ್ರದಲ್ಲಿ ಮುಖಂಡರು ಧರ್ಮ ಹಾಗೂ ಜಾತಿ ಆಧಾರಿತ ಚುನಾವಣೆ ನಡೆಸಲು ಪ್ರಯತ್ನಿಸಿದರೂ ಮತದಾರರು ಸೊಪ್ಪು ಹಾಕಿಲ್ಲ. ಕೋಮು ಸೌಹಾರ್ದತೆ ಬೀದರ್‌ ನೆಲಗುಣ ಎನ್ನುವುದನ್ನು ಸಾಬೀತುಪಡಿಸಿದ್ದಾರೆ.

ಬೀದರ್‌ ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆ ಇರುವ ಕಾರಣ ಸಹಜವಾಗಿಯೇ ಜೆಡಿಎಸ್‌ನ ಸೂರ್ಯಕಾಂತ ನಾಗಮಾರಪಳ್ಳಿ ಆಯ್ಕೆಯಾಗಲಿದ್ದಾರೆ ಎಂದು ರಾಜಕೀಯ ಮುಖಂಡರು ಆಡಿಕೊಳ್ಳುತ್ತಿದ್ದರು. ಆದರೆ, ಕೆಲವರು ಸೂರ್ಯಕಾಂತ ಬಿಜೆಪಿಯಲ್ಲಿ ಇದ್ದಾಗ ಅಲ್ಪಸಂಖ್ಯಾತರ ವಿರುದ್ಧ ಮಾತನಾಡಿದ್ದನ್ನು ವೈರಲ್‌ ಮಾಡಿದ್ದರು. ಅವರನ್ನೂ ಬಿಜೆಪಿ ಮೈಂಡ್‌ಸೆಟ್‌ನಿಂದ ಹೊರ ತರುವುದು ಕಷ್ಟವಾಗಲಿದೆ ಎಂದು ಅರಿತ ಅಲ್ಪಸಂಖ್ಯಾತರು ಸೂರ್ಯಕಾಂತ ಅವರಿಂದ ಅಂತರ ಕಾಯ್ದುಕೊಂಡರು. ಇದು ಕಾಂಗ್ರೆಸ್‌ ಗೆಲುವಿಗೆ ಕಾರಣವಾಯಿತು.

ಬಿಜೆಪಿಯ ಈಶ್ವರಸಿಂಗ್ ಠಾಕೂರ್‌ ನಿರೀಕ್ಷೆಯಂತೆ ಸೋಲು ಅನುಭವಿಸಿದ್ದಾರೆ. ಬಸವರಾಜ ಪಾಟೀಲ ಯತ್ನಾಳ ಸೇರಿದಂತೆ ಅನೇಕ ಮುಖಂಡರು ಪ್ರಚೋದನಕಾರಿ ಭಾಷಣ ಮಾಡಿದರೂ ರಹೀಂ ಖಾನ್‌ ಅದಕ್ಕೆ ಪ್ರತಿಕ್ರಿಯೆ ಕೊಡುವ ಗೋಜಿಗೂ ಹೋಗದೆ ಜಾಣತನ ಮೆರೆದಿದ್ದರು. ಇದು ಅವರಿಗೆ ಪ್ಲಸ್‌ ಪಾಯಿಂಟ್‌ ಆಯಿತು. ಜೆಡಿಎಸ್, ಬಿಜೆಪಿ ಪ್ರಬಲ ಪೈಪೋಟಿ ಮಧ್ಯೆಯೂ ಖಾನ್‌ ನಾಲ್ಕನೇ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ.

Gayathri SG

Recent Posts

ಕಾಂಗ್ರೆಸ್ ನಾಯಕ ಎಂ.ಸಿ ವೇಣುಗೋಪಾಲ್ ಮನೆ ಮೇಲೆ ಐಟಿ ದಾಳಿ

ಕಾಂಗ್ರೆಸ್ ನಾಯಕರೂ ಆಗಿರುವ ವಿಧಾನಪರಿಷತ್ ಮಾಜಿ ಸದಸ್ಯ ಎಂ.ಸಿ ವೇಣುಗೋಪಾಲ್ ಅವರ ಮನೆ ಮೇಲೆ ಐಟಿ ಅಧಿಕಾರಿಗಳ ತಂಡ ದಾಳಿ…

9 mins ago

ವೇಷ ಕಳಚುವ ವೇಳೆ ಹೃದಯಾಘಾತ; ಯಕ್ಷಗಾನ ಕಲಾವಿದ ಗಂಗಾಧರ ಪುತ್ತೂರು ನಿಧನ

ಶ್ರೀ ಕ್ಷೇತ್ರ ಧರ್ಮಸ್ಥಳ ಮೇಳದಲ್ಲಿ ಸುಧೀರ್ಘ ಕಾಲ ಸೇವೆ ಸಲ್ಲಿಸಿದ ಯಕ್ಷಗಾನ ಕಲಾವಿದ ಗಂಗಾಧರ ಪುತ್ತೂರು ಅವರು ಹೃದಯಾಘಾತದಿಂದ ನಿಧನ…

27 mins ago

ಸೈಂಟ್ ಜೋಸೆಫ್ ವಿವಿಯಲ್ಲಿ ʼಟೆಕ್ಎಕ್ಸ್ 2.0ʼ  ರಾಷ್ಟ್ರೀಯ ಟೆಕ್ ಶೃಂಗಸಭೆ

ಸೈಂಟ್ ಜೋಸೆಫ್ ವಿವಿಯಲ್ಲಿ ಏಪ್ರಿಲ್ 29 ರಂದು  ಟೆಕ್ಎಕ್ಸ್ 2.0’  ನಡೆಯಿತು. ಈ ಕಾರ್ಯಕ್ರಮದಲ್ಲಿ ಐಟಿ ಉದ್ಯಮದ ನಾಲ್ಕು ಗಮನಾರ್ಹ…

34 mins ago

ಶಾಲಾ ಆವರಣದಲ್ಲೇ ದುಷ್ಕರ್ಮಿಗಳಿಂದ ವಿದ್ಯಾರ್ಥಿನಿಯ ಮುಖಕ್ಕೆ ಬ್ಲೇಡ್‌ನಿಂದ ಹಲ್ಲೆ

ಶಾಲಾ ಆವರಣದಲ್ಲೇ ವಿದ್ಯಾರ್ಥಿನಿಯ ಮುಖದ ಮೇಲೆ ಬ್ಲೇಡ್‌ನಿಂದ ಹಲ್ಲೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಘಟನೆಯು…

36 mins ago

ಮಂಗಳೂರು: ಇಂದಿರಾ ಎಜುಕೇಶನ್ ಟ್ರಸ್ಟ್ ಕಾಲೇಜಿನಲ್ಲಿ ಪದವಿ ದಿನ ಸಮಾರಂಭ

ನಗರದ ಇಂದಿರಾ ಎಜುಕೇಶನ್ ಟ್ರಸ್ಟ್ ಕಾಲೇಜಿನಲ್ಲಿ ಪದವಿ ದಿನವನ್ನು ಮಂಗಳೂರಿನ ಹಂಪನಕಟ್ಟೆಯ ಮಿಲಾಗ್ರಿಸ್ ಹಾಲ್ ಕಾಂಪ್ಲೆಕ್ಸ್‌ನಲ್ಲಿ 30 ಏಪ್ರಿಲ್   ರಂದು…

51 mins ago

ಜೆಕೆ ಹೊಸ ಸಿನಿಮಾ ‘ವೀರ್ʼ ಮೋಷನ್ ಪೋಸ್ಟರ್ ಬಿಡುಗಡೆ

ಕನ್ನಡದ ಪ್ರತಿಭಾನ್ವಿತ ಜಯರಾಮ್ ಕಾರ್ತಿಕ್ ಮೇ 1ರಂದು ಜನ್ಮದಿನ ಆಚರಿಸಿಕೊಂಡಿದ್ದು, ಅವರ ಹುಟ್ಟುಹಬ್ಬದ ವಿಶೇಷವಾಗಿ ಮೋಷನ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.

53 mins ago