Categories: ಬೀದರ್

ಬೀದರ: ವೀರಶೈವ ಮಠಗಳ ಸೇವೆ ಅನನ್ಯ-ಶಾಸಕ ಈಶ್ವರ ಬಿ.ಖಂಡ್ರೆ

ಬೀದರ: ವೀರಶೈವ ಮಠಗಳು ಧರ್ಮದ ರಕ್ಷಣೆ ಪ್ರಚಾರದ ಜೊತೆಗೆ ವಿದ್ಯಾರ್ಥಿಗಳಿಗೆ ಶಿಕ್ಷಣ,ವಸತಿ, ಅನ್ನದಾಸೋಹ ಹಾಗೂ ಸಮಾಜದಲ್ಲಿ ಸಾಮರಸ್ಯ ಮೂಡಿಸುವಂತಹ ಅನನ್ಯ ಸೇವೆಗಳನ್ನು ಮಾಡುವ ಮೂಲಕ ಮಾದರಿಯಾಗಿವೆ ಎಂದು ಭಾಲ್ಕಿ ಶಾಸಕ ಈಶ್ವರ ಬಿ. ಖಂಡ್ರೆ ಹೇಳಿದರು.

ಅವರು ರವಿವಾರ ನಗರದ ಚನ್ನಬಸವ ಪಟ್ಟದೇವರು ರಂಗಮದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಬೀದರ ಹಾಗೂ ಕನ್ನಡ ಮತ್ತು ಸಂಸ್ಕçತಿ ಇಲಾಖೆ ಬೀದರ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ಜಗದ್ಗುರು ರೇಣುಕಾಚಾರ್ಯರ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದಾರ್ಶನಿಕರ ಸಂದೇಶ ಹಾಗೂ ಆದರ್ಶಗಳು ಇಂದಿನ ಸಮಾಜಕ್ಕೆ ಅರಿವಾಗಲಿ ಎಂಬ ಉದ್ದೇಶದಿಂದ ಸರ್ಕಾರ ಅವರ ಜಯಂತಿಯನ್ನು ಆಚರಿಸುತ್ತಿವೆ. ಆದ್ದರಿಂದ ನಾವು ಅವರ ತತ್ವ ಆದರ್ಶವನ್ನು ನಮ್ಮ ಜೀವದಲ್ಲಿ ಅಳವಡಿಸಿಕೊಳ್ಳಬೇಕು. ವೀರಶೈವ ಲಿಂಗಾಯತ ಸಮುದಾಯವು ಆರ್ಥಿಕವಾಗಿ ಬಲಿಷ್ಠವಾದರು ಸಾಮೂಹಿಕವಾಗಿ ಒಗ್ಗಟಾಗಿಲ್ಲಾ, ಈ ಸಮಸ್ಯೆಯನ್ನು ಹಾನಗಲ್ ಕುಮಾರಸ್ವಾಮಿಗಳು ಅಖಿಲ ಭಾರತ ವೀರಶೈವ ಮಹಾಸಭಾ ಸ್ಥಾಪನೆ ಮೂಲಕ ನಿವಾರಿಸಿದ್ದಾರೆ ಎಂದು ಅಭಿಪ್ರಾಯ ಪಟ್ಟರು.

ಭಾರತ ಪ್ರಸ್ತುತ ಶೇ.70 ರಷ್ಟು ಯುವಸಮೂಹ ಹೊಂದಿದ ದೇಶವಾಗಿದ್ದು, ಪ್ರಪಂಚದ ಹಲವಾರು ದೇಶಗಳಲ್ಲಿ ಭಾರತೀಯ ಯುವಕರು ವೈದ್ಯಕೀಯ, ಇಂಜೀನಿಯರಿಗ ಸೇರಿದಂತೆ ಹಲವಾರು ಕ್ಷೇತ್ರದಲ್ಲಿ ತಮ್ಮ ಛಾಪನ್ನು ಮೂಡಿಸುತ್ತಿರುವುದರಿಂದ ಇಂದು ಜಗತ್ತು ಭಾರತದತ್ತ ತಿರುಗಿ ನೋಡುತ್ತಿದೆ. ಜಗತ್ತಿನಲ್ಲಿಯೇ ಭಾರತವು ವಿವಿಧ ಸಂಸ್ಕçತಿ, ಪರಂಪರೆ ಹೊಂದಿದ ದೇಶವಾಗಿದ್ದು, ನಾವೇಲರು ಮೊದಲು ಭಾರತೀಯರು ನಂತರ ವಿವಿಧ ಧರ್ಮಿಯರು ಎನ್ನುವ ಮೂಲಕ ನಾವು ಒಗ್ಗಟಾಗಿ ಉತ್ತಮ ಸಮಾಜ ನಿರ್ಮಾಣ ಮಾಡಬೇಕು ಎಂದು ಹೇಳಿದರು.

ಬೀದರ ಉತ್ತರ ಶಾಸಕ ರಹೀಮ ಖಾನ್ ಮಾತನಾಡಿ, ಎಲ್ಲಾ ಮಹಾತ್ಮರ ಸಂದೇಶದ ಉದ್ದೇಶ ಒಂದೆಯಾಗಿದ್ದು ನಾವು ಅವರ ಮಾರ್ಗದಲ್ಲಿ ನಡೆದರೆ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುವುದು. ನಾವು ದೇವರುಗಳಿಗೆ ಮಂದಿರ, ಮಜೀದ್‌ದಲ್ಲಿ ಸಿಮೀತಗೊಳಿಸಿದ್ದೆವೆ ದೇವನು ಸರ್ವವ್ಯಾಪಿಯಾಗಿದ್ದಾನೆ ಎಂದು ಹೇಳಿದರು.

ನಮ್ಮ ಸುತ್ತ ಮುತ್ತಲಿನ ಪರಿಸರು ನಮ್ಮೆರನ್ನು ಒಂದೇ ರೀತಿ ಕಾಣುವಂತೆ ನಾವು ಎಲ್ಲಾ ಮಹಾತ್ಮರನ್ನು ನಾವು ಒಂದೇ ರೀತಿ ಕಾಣಬೇಕು ಅಂದಾಗ ಮಾತ್ರ ಎಲ್ಲಾ ಸಮಾಜಗಳು ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.

ಕಾರ್ಯಕ್ರದಲ್ಲಿ ಹಿರೇಮಠ ಸಂಸ್ಥಾನ ಬೇಮಳಖೇಡ ಗೋರಟಾದ ಡಾ. ರಾಜಶೇಖರ ಶಿವಾಚಾರ್ಯರು ಜಗದ್ಗುರು ರೇಣುಕಾಚಾರ್ಯರ ಜೀವನದ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಈ ಸಂದರ್ಭದಲ್ಲಿ ಮೇಕರ ತಡೊಳದ ಪೀಠದ ರಾಜೇಶ್ವರ ಶಿವಚಾರ್ಯರು, ರೇಣುಕಾಚಾರ್ಯರ ಜಯಂತಿ ಆಚರಣೆ ಸ್ವಾಗತ ಸಮಿತಿ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ, ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಶಿವಯ್ಯ ಸ್ವಾಮಿ, ಸಮಾಜದ ಮುಖಂಡರಾದ ಸಿದ್ರಾಮಯ್ಯ ಸ್ವಾಮಿ, ಈಶ್ಚರ ಸಿಂಗ ಠಾಕೂರ, ಬಸವರಾಜ ಜಾಬಶೆಟ್ಟಿ, ಶಿವಶರಣಪ್ಪ ವಾಲಿ, ವೈಜಿನಾಥ ಕಮಠಾಣೆ, ಜಗದೀಶ ಖೂಬಾ, ಬಿ.ಜಿ ಶೇಟಕಾರ, ಸೇರಿದಂತೆ ಇತರರು ಉಪಸ್ಥಿತರಿದ್ದರು.

Ashika S

Recent Posts

ಹೆಚ್​​ಡಿ ರೇವಣ್ಣಗೆ ಮೇ 14ರವರೆಗೆ ನ್ಯಾಯಾಂಗ ಬಂಧನ

ಅಶ್ಲೀಲ ವಿಡಿಯೋ, ಲೈಂಗಿಕ ದೌರ್ಜನ್ಯ ಹಾಗೂ ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್​​ಡಿ ರೇವಣ್ಣ ಅವರಿಗೆ ಏಳು ದಿನದವರೆಗೆ ಅಂದರೆ ಮೇ…

12 seconds ago

ಸರ್ಕಾರಿ ಆಸ್ಪತ್ರೆಯ ಕಾರಿಡಾರ್​ನಲ್ಲಿ ನರ್ಸ್ ವೊಬ್ಬರು ಸ್ಕೂಟಿಯಲ್ಲಿ ಓಡಾಟ

ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್ ವೊಬ್ಬರು ಕಪ್ಪು ಕನ್ನಡಕ ಹಾಕಿಕೊಂಡು ಒಂದು ವಾರ್ಡ್​ನಿಂದ ಮತ್ತೊಂದು ವಾರ್ಡ್​ನ ರೋಗಿಗಳ ಬಳಿ ಸ್ಕೂಟಿಯಲ್ಲಿ ಹೋಗಿ  ಚಿಕಿತ್ಸೆ…

18 mins ago

ಚಾಮರಾಜನಗರದಲ್ಲಿ ಪ್ರಜ್ವಲ್ ರೇವಣ್ಣ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಬಂಧನಕ್ಕೆ ಆಗ್ರಹಿಸಿ ನಗರದಲ್ಲಿ ಜಿಲ್ಲಾ  ಮಹಿಳಾ ಕಾಂಗ್ರೆಸ್ ಘಟಕ  ಪ್ರತಿಭಟನೆ…

18 mins ago

ರೇವಣ್ಣ ಕಿಡ್ನಾಪ್ ಕೇಸ್​ : ಜಾಮೀನು ಅರ್ಜಿ ವಿಚಾರಣೆ ​ಮುಂದೂಡಿದ ಕೋರ್ಟ್​

ಪ್ರಜ್ವಲ್ ರೇವಣ್ಣ ಪೆನ್​ ಡ್ರೈವ್ ಕೇಸ್​ನಲ್ಲಿ ಸಂತ್ರಸ್ತ ಮಹಿಳೆಯನ್ನ ಕಿಡ್ನಾಪ್ ಮಾಡಿದ ಪ್ರಕರಣದಲ್ಲಿ ಬಂಧಿತರಾಗಿರುವ ಹೆಚ್​ ಡಿ ರೇವಣ್ಣ ಎಸ್​ಐಟಿ…

24 mins ago

ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ ಕಾಮಾಕ್ಯ ದೇವಸ್ಥಾನಕ್ಕೆ ಭೇಟಿ

ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ ಅವರು  ಕಾಮಾಕ್ಯ ದೇವಸ್ಥಾನಕ್ಕೆ  ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಕುರಿತ ಫೋಟೋಗಳು…

36 mins ago

ಎಚ್ಚರ! ಚಿಕನ್ ಶವರ್ಮಾ ತಿಂದು ಓರ್ವ ಯುವಕ ಸಾವು : ಐವರು ಅಸ್ವಸ್ಥ

ಚಿಕನ್‌ ಶವರ್ಮ ಎಂದರೆ ಕೆಲವರಿಗೆ ತುಂಬ ಪ್ರಿಯ ಇದರ ಅಡ್ಡ ಪರಿಣಾಮ ತಿಳಿದಿದ್ದರು ತಿನ್ನುವುದು ಕಡಿಮೆ ಮಾಡುವುದಿಲ್ಲ ಆದರೆ ಇದೇ…

38 mins ago