News Karnataka Kannada
Sunday, April 28 2024
ಬೀದರ್

ಬೀದರ್: ಕೇಂದ್ರ ಬಜೆಟ್ ರೈತರ ಅಭಿವೃದ್ಧಿಗೆ ಪೂರಕ – ಪ್ರಭು ಚವ್ಹಾಣ್

Union Budget 2018 for farmers' development: Prabhu Chavan
Photo Credit : News Kannada

ಬೀದರ್: ರೈತರ ಆದಾಯ ಹೆಚ್ಚಿಸಲು ಸರ್ಕಾರ ಹಲವು ಯೋಜನೆಗಳನ್ನು ಬಜೆಟ್‌ನಲ್ಲಿ ಘೋಷಿಸಿದ್ದು, ಪಶುಸಂಗೋಪನೆ, ಮೀನುಗಾರಿಕೆ, ಹೈನುಗಾರಿಕೆ ಕ್ಷೇತ್ರವನ್ನು ಉತ್ತೇಜಿಸಲು ಅನುದಾನ ಮೀಸಲಿಡಲಾಗಿದೆ. ಇದು ರೈತರ ಅಭ್ಯುದಯಕ್ಕೆ ಪೂರಕವಾಗಲಿದೆ ಎಂದು ಪಶುಸಂಗೋಪನೆ ಸಚಿವ ಪ್ರಭು ಬಿ.ಚವ್ಹಾಣ್ ಬಣ್ಣಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಗ್ರಾಮೀಣ ಆರ್ಥಿಕತೆಯ ಬಗ್ಗೆ ಈ ಬಾರಿಯ ಬಜೆಟ್ ವಿಶೇಷ ಗಮನ ನೀಡಿದೆ.

ಪಶುಸಂಗೋಪನೆ, ಡೇರಿ ಮತ್ತು ಮೀನುಗಾರಿಕೆಯನ್ನೂ ಒಳಗೊಂಡಂತೆ ಕೃಷಿ ಸಾಲಕ್ಕಾಗಿ ₹ 20 ಲಕ್ಷ ಕೋಟಿ ಅನುದಾನ ಮೀಸಲಿಟ್ಟಿರುವುದು ರೈತರ ಆರ್ಥಿಕತೆಯ ವೃದ್ಧಿಗೆ ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ.

ರೈತರ ಆದಾಯವನ್ನು ದ್ವಿಗುಣಗೊಳಿಸುವ ಉದ್ದೇಶದಿಂದ ಜಾನುವಾರು ಗೊಬ್ಬರವನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡುವುದನ್ನು ಉತ್ತೇಜಿಸಲು ಗೋಬರ್ ಧನ್ ಯೋಜನೆ ಘೋಷಿಸಲಾಗಿದೆ. ಜಾನುವಾರು ಗೊಬ್ಬರವಷ್ಟೇ ಅಲ್ಲದೇ ಕೃಷಿ ಭೂಮಿಯಲ್ಲಿನ ಘನ ತ್ಯಾಜ್ಯ ನಿರ್ವಹಣೆಗೂ ಉತ್ತೇಜನ ಸಿಗಲಿದೆ. ತ್ಯಾಜ್ಯವನ್ನು ಕಾಂಪೋಸ್ಟ್, ರಸಗೊಬ್ಬರ, ಜೈವಿಕ ಅನಿಲ ಮತ್ತು ಜೈವಿಕ-ಸಿಎನ್ ಜಿ ಯನ್ನಾಗಿ ಮರುಬಳಕೆ ಮಾಡುವುದನ್ನೂ ಸಹ ಈ ಯೋಜನೆ ಉತ್ತೇಜಿಸಲಿದೆ ಎಂದು ಹೇಳಿದ್ದಾರೆ.

ಸಮುದಾಯ ಹಂತದಲ್ಲಿ ಗೋಬರ್ ಧನ್ ಘಟಕವನ್ನು ನಿರ್ಮಿಸಿ ಹಸಿ ತ್ಯಾಜ್ಯವನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವುದಲ್ಲದೇ ಆರ್ಥಿಕವಾಗಿಯೂ ಲಾಭ ಗಳಿಸಬಹುದು. ಅತೀ ಹೆಚ್ಚು ಹಸಿ ತ್ಯಾಜ್ಯ ಉತ್ಪತ್ತಿಯಾಗುವ ಸ್ಥಳಗಳಾದ ಗೋಶಾಲೆ, ಅನ್ನದಾಸೋಹವಿರುವ ಧಾರ್ಮಿಕ ಸ್ಥಳಗಳು, ಸ್ವಚ್ಛ ಸಂಕೀರ್ಣ ಘಟಕ, ವಸತಿ ನಿಲಯಗಳು, ಸಮುದಾಯ ಭವನ, ತರಕಾರಿ/ಹೂ/ ಹಣ್ಣಿನ ಮಾರುಕಟ್ಟೆ, ಶಾಲೆಗಳಲ್ಲಿ ಗೋಬರ್ ಧನ್ ಘಟಕವನ್ನು ಸ್ಥಾಪಿಸಬಹುದು.

2023ರ ಬಜೆಟ್ ನಲ್ಲಿ ಕರ್ನಾಟಕ ನೀರಾವರಿ ಕ್ಷೇತ್ರಕ್ಕೆ ಉತ್ತಮ ಕೊಡುಗೆ ಸಿಕ್ಕಿದೆ. ಬರಗಾಲ ಪೀಡಿತ ಪ್ರದೇಶಗಳಿಗೆ ನೀರಾವರಿ ಕಲ್ಪಿಸುವ ಭದ್ರಾ ಮೇಲ್ದಂಡೆ ಯೋಜನೆಗೆ ₹ 5,300 ಕೋಟಿ ಅನುದಾನ ಘೋಷಿಸಲಾಗಿದೆ. ಬಜೆಟ್ ನಲ್ಲಿ ರಾಸಾಯನಿಕ ಮುಕ್ತ‌ ಸಹಜ/ ಸಾವಯವ ಕೃಷಿಗೆ ಆದ್ಯತೆ ನೀಡಲಾಗಿದ್ದು, ಸಹಜ/ ಸಾವಯವ ಕೃಷಿಗೆ ಮರಳುವ 1 ಕೋಟಿ ರೈತರಿಗೆ ನೆರವು ಘೋಷಿಸಿರುವುದು ಅರೋಗ್ಯಕರ ಬೆಳವಣಿಗೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ರೈತರು, ಯುವಕರು, ಮಹಿಳೆಯರು ಮತ್ತು ಹಿಂದುಳಿದವರ ಅಭಿವೃದ್ಧಿಗೆ ಬದ್ಧತೆ ತೋರುವ ಬಜೆಟ್ ಇದಾಗಿದೆ. ಎಲ್ಲ ಕ್ಷೇತ್ರಗಳಿಗೂ ಆದ್ಯತೆ ನೀಡುವ ಮೂಲಕ 2047ರ ಹೊತ್ತಿಗೆ ಭಾರತವನ್ನು ಸಮೃದ್ಧ ದೇಶವಾಗಿಸಲು ಹೊರಟಿರುವ ವಿಶ್ವನಾಯಕ ನರೇಂದ್ರಮೋದಿಯವರು ಮತ್ತು ರೈತಸ್ನೇಹಿ ಬಜೆಟ್ ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಅವರಿಗೆ ಸಚಿವ ಪ್ರಭು ಚವ್ಹಾಣ್ ಅಭಿನಂದನೆ ಸಲ್ಲಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು