ಬೀದರ್

ಬೀದರ್: ದೇಶದ ಪ್ರತಿ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಆರಂಭಿಸುವ ಗುರಿ, ಭಗವಂತ ಖೂಬಾ

ಬೀದರ್: ಇತ್ತೀಚೆಗೆ ಆರೋಗ್ಯ ಕ್ಷೇತ್ರವು ದೊಡ್ಡ ಬದಲಾವಣೆ ಕಾಣುತಿದ್ದು ದೇಶದ ಪ್ರತಿಯೊಂದಿ ಜಿಲ್ಲೆಯಲ್ಲಿ  ಮೆಡಿಕಲ್ ಕಾಲೇಜು ಮತ್ತು ಪ್ರತಿ ರಾಜ್ಯದಲ್ಲಿ ಏಮ್ಸ್ ಕಾಲೇಜು ಆರಂಭಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದ್ದೆ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಮೂಲ, ರಾಸಾಯನಿಕ ಮತ್ತು ರಸಗೋಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹೇಳಿದರು.

ಅವರು ಸೋಮವಾರ ನಗರದ ಸರ್ಕಾರಿ ಶುಶ್ರೂಷಾ ಶಾಲೆಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸರ್ಕಾರಿ ಶುಶ್ರೂಷಾ ಶಾಲೆ ಬೀದರನ 7ನೇ ಬ್ಯಾಚ್ ಮತ್ತು ಬ್ರಿಮ್ಸ್ ಶುಶ್ರೂಷಾ ಮಹಾವಿದ್ಯಾಲಯ, ಬೀದರನ 1ನೇ ಬ್ಯಾಚ್ ವಿದ್ಯಾರ್ಥಿಗಳ ಜ್ಯೋತಿ ಬೆಳಗಿಸುವ ಹಾಗೂ ಪ್ರತಿಜ್ಞೆ ವಿಧಿ ಬೋಧಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬೀದರದಲ್ಲಿ ಬಿಎಸ್‌ಸಿ ನರ್ಸೀಂಗ್ ಕಾಲೇಜು ಇಲ್ಲದಿರುವುದು ನನ್ನ ಗಮನಕ್ಕೆ ಬಂದ ತಕ್ಷಣ ರಾಜೀವ್ ಗಾಂಧಿ ವಿಶ್ವಾವಿದ್ಯಾಲದ ಕುಲಪತಿಗಳಾದ ಡಾ. ರಮೇಶ ಅವರಿಗೆ ಕರೆ ಮಾಡಿ ಪ್ರಸ್ತಾವನೆ ನೀಡಿದ ಒಂದು ವಾರದೊಳಗೆ ಬೀದರಲ್ಲಿ ನರ್ಸೀಂಗ್ ಕಾಲೇಜಗೆ ಅನುಮತಿ ನೀಡಿದರು ಇಂದು ಅದರ ಫಲವಾಗಿ ಸಾಕಷ್ಟು ವಿದ್ಯಾರ್ಥಿಗಳಿಗೆ ಅನುಕುಲವಾಗಿದೆ ಎಂದರು.

ಮೊದಲು ಬ್ರೀಮ್ಸ್ ಆರಂಭವಾದಾಗ ಹೊರ ರೋಗಿಗಳ ಸಂಖ್ಯೆಯೂ ಕೇವಲ 400 ಆಗಿತ್ತು ಆದರೆ ಇತ್ತೀಚೆಗೆ ಇದರ ಸಂಖ್ಯೆ 1000ಕ್ಕೆ ತಲುಪಿದೆ ಮುಂದೆ 2000ಕ್ಕೆ ತಲುಪಬೇಕು ಅದಕ್ಕೆ ನಿವು ಮುಂದಿನ ದಿನಗಳಲ್ಲಿ ರೋಗಿಗಳಿಗೆ ಇನ್ನು ಹೆಚ್ಚಿನ ಸೇವೆ ನೀಡಬೇಕು ಎಂದು ಹೇಳಿದರು.

ದೇಶದಲ್ಲಿ ಮೊದಲು ಮೇಡಿಕಲ್ ಕಾಲೇಜುಗಳನ್ನು ಆರಂಭಿಸಲು ಇದ್ದ ಕ್ಲೀಷ್ಟಕರತೆಯನ್ನು ಸರಳಿಕರಣಗೊಳಿಸಿ ದೇಶದಲ್ಲಿ ಹೊಸದಾಗಿ 33 ಮೇಡಿಕಲ್ ಕಾಲೇಜುಗಳನ್ನು ಆರಂಭಿಸಲಾಗಿದೆ ಇದಕ್ಕೆ ಇತ್ತೀಚೆಗೆ ಚಾಲನೆಗೊಂಡ ಸಿದ್ದಗಂಗಾ ಮೇಡಿಕಲ್ ಕಾಲೇಜುಯೇ ಸಾಕ್ಷಿ ಎಂದ ಅವರು ಹಿಂದೆ ಭಾರತದಲ್ಲಿ 2-3 ಏಮ್ಸ್ ಕಾಲೇಜುಗಳು ಇದ್ದವು ಆದರೆ ಇಂದು 16 ಏಮ್ಸ್ ಕಾಲೇಜುಗಳಿವೆ ಎಂದು ಹೇಳಿದರು.

ಭಾರತವು ಆತ್ಮನಿರ್ಭರ ಯೋಜನೆ ಅಡಿಯಲ್ಲಿ ಎಲ್ಲಾ ಕ್ಷೇತ್ರದಲ್ಲಿ ಸ್ವಾವಲಂಭಿಯಾಗುವತ್ತ ಪಯಣ ಆರಂಭಿಸಿದೆ ಇತ್ತೀಚೆಗೆ ಫಾರ್ಮಾಸಿಟಿಕಲ್ ಕ್ಷೇತ್ರದಲ್ಲಿ ಹೆಚ್ಚು ಸ್ವಾಲಂಭಿಯಾಗುತ್ತಿದ್ದು ಮುಂದಿನ ದಿನಗಳಲ್ಲಿ ಭಾರತವು ಫಾರ್ಮಾಸಿಟಿಕಲ್ ಹಬ್ ಆಗಲಿದೆ ಎಂದ ಅವರು ನುಡಿದರು.
ಬೀದರ ಉತ್ತರ ಶಾಸಕ ರಹೀಮ್ ಖಾನ್ ಮಾತನಾಡಿ ಬೀದರ ನರ್ಸೀಂಗ್ ಸೇವೆಯು ಪ್ರಪಂಚದಲ್ಲಿ ಉತ್ತಮ ಸೇವೆಯಾಗಿದೆ. ತಾಯಿಯು ಮಕ್ಕಳಿಗೆ ಜನ್ಮ ನೀಡಿದ್ದದರೆ ಅದಕ್ಕೆ ಮೊದಲು ಮುಟ್ಟಿ ಅದಕ್ಕೆ ಅಂಟಿರುವ ರಕ್ತ ಹಾಗೂ ಇತರೆ ಕಲೆಗಳನ್ನು ಸ್ವಚ್ಛಗೋಳಿಸಿ ಉತ್ತಮ ರೂಪ ನೀಡುವವರು ನರ್ಸ್ಗಳು ಎಂದು ಅವರು ಹೇಳಿದರು.

ಕೇಲವು ಬಾರಿ ತಂದೆ ತಾಯಿಗಳು ತಮ್ಮ ಮಕ್ಕಳ ಸೇವೆಗೆ ಬೇಸತ್ತು ಸಿಟ್ಟಾಗಬಹುದು ಆದರೆ ನರ್ಸ್ಗಳು ರೋಗಿಗಳ ಮೇಲೆ ಯಾವತ್ತು ಸಿಟ್ಟಾಗುವುದಿಲ್ಲಾ ಇದು ಅವರು ಸೇವೆ ಮನೋಭಾವ ತಿಳಿಸುತ್ತದೆ ಎಂದರು.

ಸರ್ಕಾರಿ ಶುಶ್ರೂಷಾ ಶಾಲೆ ಹಾಗೂ ಬ್ರಿಮ್ಸ್ ಶುಶ್ರೂಷಾ ಮಾಹಾವಿದ್ಯಾಲದ ಪ್ರಾಂಶುಪಾಲ ರಾಜಕುಮಾರ ಮಾಳಗೆ ಪ್ರಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಬೆಂಗಳೂರಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆಯ ನಿರ್ದೇಶಕಿ ಡಾ. ಪರಿಮಳ ಮರೂರ, ಬೀದರ ಬ್ರಿಮ್ಸ್ ಪ್ರಾಂಶುಪಾಲ ಡಾ. ರಾಜೇಶ ಪಾರಾ, ಜಿಲ್ಲಾ ಆರೋಗ್ಯ ತರಬೇತಿ ಕೇಂದ್ರ ಬೀದರನ ಪ್ರಾಂಶುಪಾಲ ಡಾ. ಅನಿಲಕುಮಾರ ಚಿಂತಾಮಣಿ, ಬ್ರಿಮ್ಸ್ ಬೋಧಕ ಆಸ್ಪತ್ರೆ ಬೀದರನ ಜಿಲ್ಲಾ ಶಸ್ತç ಚಿಕಿತ್ಸಕ ಡಾ. ಮಹೇಶ ಬಿರಾದಾರ, ಬ್ರಿಮ್ಸ್ ಬೋಧಕ ಆಸ್ಪತ್ರೆಯ ನಿವಾಸಿ ವೈಧ್ಯಧೀಕಾರಿ ಡಾ. ದೀಪಾ ಖಂಡ್ರೆ, ಬ್ರಿಮ್ಸ್ ಬೋಧಕ ಆಸ್ಪತ್ರೆಯ ಪ್ರಭಾರಿ ಶುಶ್ರೂಷಾ ಅಧೀಕ್ಷಕರು ಗ್ರೇಡ್-1 ಶಾಂತಾ.ಎಸ್, ಬ್ರಿಮ್ಸ್ ಬೋಧಕ ಆಸ್ಪತ್ರೆಯ ಪ್ರಭಾರಿ ಶುಶ್ರೂಷಾ ಅಧೀಕ್ಷಕರು ಗ್ರೇಡ್-1 ಇಮ್ಮಾನುವೇಲ್ ಕೊಡ್ಡಿಕರ, ಬ್ರಿಮ್ಸ್ ಶುಶ್ರೂಷಾ ಮಹಾವಿದ್ಯಾಲಯ ಬೀದರನ ಶುಶ್ರೂಷಾ ಭೋಧಕ ಪ್ರಕಾಶ ಮಹಿಮಾಕರ್,ನಸೀಂಗ್ ವಿದ್ಯಾರ್ಥಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.

Ashika S

Recent Posts

ಆರ್‌ಸಿಬಿ ಸಿಎಸ್‌ಕೆ ಹೈವೋಲ್ಟೇಜ್ ಪಂದ್ಯ: ಸೈಬರ್‌ ಖದೀಮರಿಂದ ವಂಚನೆ

ಇಂದು ಚಿನ್ನಸ್ವಾಮಿಯಲ್ಲಿ ನಡೆಯಲಿರುವ ಹೈವೋಲ್ಟೇಜ್ ಪಂದ್ಯದ ಟಿಕೆಟ್ ಈಗಾಗಲೇ ಸೋಲ್ಡ್ ಔಟ್ ಆಗಿದೆ. ಆದರೆ ಈ ಪಂದ್ಯದ ಟಿಕೆಟ್‌ ನೀಡುತ್ತೇವೆ…

6 mins ago

ದೇಶಿಯ ಮದ್ಯಗಳ ಬೆಲೆ ಹೆಚ್ಚಿಸಲು ಮುಂದಾದ ಸರಕಾರ

ಪಂಚ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವುದು ಸರಕಾರಕ್ಕೆ ಸವಾಲಾಗಿದ್ದು, ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ದೇಶಿಯ ಮದ್ಯಗಳ ಬೆಲೆ ಹೆಚ್ಚಿಸಲು…

21 mins ago

ಬಹುಭಾಷೆಯಲ್ಲಿ ಡಬ್ ಆಗಿದೆ ದೊಡ್ಮನೆ ಕುಡಿಯ ‘ಯುವ’ ಸಿನಿಮಾ

ದೊಡ್ಮನೆ ಕುಡಿ ಯುವರಾಜ್‌ಕುಮಾರ್ ನಟನೆಯ ‘ಯುವ’ ಸಿನಿಮಾ ಒಟಿಟಿಗೆ ಲಗ್ಗೆ ಇಟ್ಟಿದ್ದು ಇದೀಗ ಬಹುಭಾಷೆಯಲ್ಲಿ ಯುವ ಸಿನಿಮಾ ಡಬ್ ಆಗಿದೆ.…

41 mins ago

ಕೊನೆಯ ಸ್ಥಾನದೊಂದಿಗೆ ಐಪಿಎಲ್ ಅಂತ್ಯಗೊಳಿಸಿದ ಮುಂಬೈ ಇಂಡಿಯನ್ಸ್

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಶುಕ್ರವಾರ  ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ  ಹಾರ್ದಿಕ್ ಪಾಂಡ್ಯ ಪಡೆ ಮುಂಬೈ ಇಂಡಿಯನ್ಸ್ ಸೋಲನುಭವಿಸಿದೆ.

1 hour ago

8 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌: ಗುಡುಗು, ಮಿಂಚು ಸಹಿತ ಮಳೆ ಸಾಧ್ಯತೆ

ರಾಜ್ಯಾದ್ಯಂತ ಪ್ರತ್ಯೇಕವಾಗಿ ಭಾರಿ ಮಳೆಯಾಗುವ ಸಾಧ್ಯತೆಯಿದ್ದು,  40-50 ಕಿ.ಮೀ ವೇಗದಲ್ಲಿ ಗಾಳಿ ಬೀಸಿ, ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದೆ.

2 hours ago

ಸ್ವಾತಿ ಮಲಿವಾಲ್‌ ಮೇಲೆ ದೂರು ದಾಖಲಿಸಿದ ಆರೋಪಿ ಬಿಭವ್‌

ಆಪ್‌ ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್‌ ಮೇಲೆ ಹಲ್ಲೆ ಪ್ರಕರಣದ ಆರೋಪಿಯಾಗಿರುವ ಬಿಭವ್‌ ಕುಮಾರ್‌ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಗೆ…

2 hours ago