Categories: ಬೀದರ್

ಬೀದರ್ :100 ಎಕರೆ ಪ್ರದೇಶದಲ್ಲಿ ರೇಷ್ಮೆ ಕೃಷಿ ; ವರ್ಷಕ್ಕೆ ಎಕರೆಗೆ 5 ರಿಂದ 8 ಲಕ್ಷ ರೂಪಾಯಿ ಆದಾಯ

ಬೀದರ:  ರೇಷ್ಮೆ ಕೃಷಿ ಎಂದರೆ ಅದು ದಕ್ಷಿಣದ ಕೆಲವು ಜಿಲ್ಲೆಗಳಿಗೆ ಮಾತ್ರ ಸೀಮಿತ ಎಂಬ ಕಾಲವೊಂದಿತ್ತು. ಆದರೆ, ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನ ಭಂಡಾರಕುಮಟಾ ಗ್ರಾಮದ ಹಲವು ಕೃಷಿಕರು ರೇಷ್ಮೆ ಕೃಷಿ ಆರಂಭಿಸಿ ಯಶಸ್ಸು ಸಾಧಿಸಿದ್ದಾರೆ. ರೇಷ್ಮೆ ಕೃಷಿಯಿಂದ ಉತ್ತಮ ಆದಾಯ ಗಳಿಸಿ ಸುಂದರ ಜೀವನ ಸಾಗಿಸುತ್ತಿದ್ದಾರೆ.

ಬೀದರ್​ನ  ಬಿಸಿಲನಗರಿ ಗಡಿ ಗ್ರಾಮದ 75 ರೈತ ಕುಟುಂಬ 100 ಎಕರೆಗಳಷ್ಟು ಪ್ರದೇಶದಲ್ಲಿ ರೇಷ್ಮೆ ಕೃಷಿಯಲ್ಲಿ ಕ್ರಾಂತಿ ಮಾಡಿದ್ದಾರೆ.  ಸಾಂಪ್ರದಾಯಿಕ ಕೃಷಿಯಿಂದ ಸದಾ ನಷ್ಟ ಅನುಭವಿಸುತ್ತಿದ್ದ ಬೀದರ್ ಜಿಲ್ಲೆಯ ಗಡಿ ಗ್ರಾಮಸ್ಥರಿಗೆ ರೇಷ್ಮೆ ಕೃಷಿ ನೆರೆವಿಗೆ ಬಂದಿದೆ. ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಜಿಲ್ಲೆಯ ಔರಾದ್ ತಾಲೂಕಿನ ಭಂಡಾರಕುಮಟಾದ ಹಲವು ರೈತ ಕುಟುಂಬಗಳು ರೇಷ್ಮೆ ಕೃಷಿಯಿಂದ ಬದುಕು ಕಟ್ಟಿಕೊಂಡಿದ್ದಾರೆ.

ಈ ಒಂದೆ ಊರಲ್ಲಿ ಕೊಟ್ಯಾಂತರ ರೂಪಾಯಿ ಮೌಲ್ಯದ ರೇಷ್ಮೆ ಉತ್ಪಾದಿಸಿ ಜಿಲ್ಲೆಯಲ್ಲಿ ಹೆಸರು ಮಾಡಿದ್ದಾರೆ.

ಆರಂಭದಲ್ಲಿ ಈ ಗ್ರಾಮದಲ್ಲಿ ಇಬ್ಬರು ಮಾತ್ರ ರೇಷ್ಮೆ ಕೃಷಿಯಲ್ಲಿ ತೊಡಗಿಕೊಂಡಿದ್ದರು . ಆರಂಭದಲ್ಲಿ ಅವರಿಗೆ ಲಾಭವಾಗಲಿಲ್ಲ. ಆದರೂ ಪಟ್ಟು ಬಿಡದೆ ರೇಷ್ಮೆ ಕೃಷಿಯನ್ನ ಮುಂದುವರೆಸಿದರು. ಬಳಿಕ ರೇಷ್ಮೆ ಕೃಷಿಯಿಂದ ಲಾಭ ಬರತೊಡಗಿತ್ತು, ಈಗ ಇಬ್ಬರಿಂದ ಆರಂಭವಾದ ರೇಷ್ಮೆ ಕೃಷಿ ಈಗ ಊರಲ್ಲಿ 75 ಕ್ಕೂ ಹೆಚ್ಚು ರೈತರು ನೂರು ಎಕರೆಯಷ್ಟು ಪ್ರದೇಶದಲ್ಲಿ ರೇಷ್ಮೆ ಕೃಷಿ ಮಾಡುತ್ತಿದ್ದು, ಒಬ್ಬ ರೈತ ವರ್ಷಕ್ಕೆ ಎಕರೆಗೆ 5 ರಿಂದ 8 ಲಕ್ಷ ರೂಪಾಯಿ ಆದಾಯ ಘಳಿಸುತ್ತಿದ್ದಾರೆಂದು ರೈತ ಜಾಕೀರ್ ಪಟೇಲ್ ಹೇಳುತ್ತಿದ್ದಾರೆ.

90ರ ದಶಕದ ಮೊದಲು ಈ ಗ್ರಾಮದ ರೈತರು ಬಹಳ ಕಷ್ಟದಲ್ಲಿದ್ದರು. ಹತ್ತಾರು ಬೆಳೆಗಳನ್ನು ಬೆಳೆದರೂ ಕೂಡ ಲಾಭ ಬರುತ್ತಿರಲಿಲ್ಲ. ಆದರೆ, ಈಗ ರೇಷ್ಮೆ ಬೆಳೆಯ ಕಡೆಗೆ ರೈತರು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದರಿಂದ ರೇಷ್ಮೇ ಕೃಷಿಯಿಂದ ಈ ಗ್ರಾಮದ ರೈತರು ಲಾಭದಲ್ಲಿದ್ದಾರೆ. ಇನ್ನೂ ಇವರು ಸಿಎಸ್​ಆರ್ ತಳಿಯ ರೇಷ್ಮೆಯನ್ನ ಬೆಳೆಸುತ್ತಿದ್ದಾರೆ. ಇದು ಮಾರುಕಟ್ಟೆಯಲ್ಲಿ ಕೆಜಿಗೆ 1 ಸಾವಿರ ರೂಪಾಯಿ ಇದೆ. ಹೀಗಾಗಿ ನಾವು ರೇಷ್ಮೆ ಬೆಳೆಯುತ್ತ  ಬಂದಾಗಿನಿಂದಲೂ ನಮಗೆ ಹಣದ ತೊಂದರೆಯಾಗಿಲ್ಲ. ಇದರ ಮೇಲೆ ಮನೆ ಕಟ್ಟಿಕೊಂಡಿದ್ದೇವೆ, ಮಕ್ಕಳಿಗೆ ಉತ್ತಮ ಗುಣಮಟ್ಟದ   ಶಿಕ್ಷಣ ಕೊಡಿಸಿದ್ದೇವೆ ಎನುತ್ತಿದ್ದಾರೆ ಗ್ರಾಮದ ರೈತರು.

ರೇಷ್ಮೆ ಉತ್ಪನ್ನ ಸಾಗಾಟದ ಸಮಸ್ಯೆ ಬಿಟ್ಟರೆ ಬೇರೆ ಯಾವುದೆ ತೊಂದರೆಯಿಲ್ಲ. ಇನ್ನೂ ಎಲ್ಲಾ ರೈತರು ಒಗ್ಗಟ್ಟಾಗಿ ತಾವು ತೆಗೆದ ರೇಷ್ಮೆಯನ್ನ ಒಂದೆ ವಾಹನದಲ್ಲಿ ಸಾಗಾಟ ಮಾಡುತ್ತಿದ್ದುದ್ದರಿಂದಾಗಿ ಈಗ ಸಾಗಾಟದ ಸಮಸ್ಯೆಯೂ ಕೂಡ ಅಷ್ಟೇನು ಇಲ್ಲಾ ಎನುತ್ತಾರೆ ರೈತರು. ಹಿಪ್ಪು ನೇರಳೆ ಬೆಳೆಯಲು ಚಾಕಿ ಕೇಂದ್ರ ಹಾಗೂ ಗೂಡು ಕಟ್ಟಡ ನಿರ್ಮಿಸಲು ಸರಕಾರದ ಸಹಾಯಧನ ಸಿಗುತ್ತದೆ. ಹೀಗಾಗಿ ನಾವು ಸ್ವಲ್ಪವೇ ಕಷ್ಟ ಪಟ್ಟರೇ ಸಾಕು ವರ್ಷದ 12 ತಿಂಗಳು ರೇಷ್ಮೆ ಗೂಡು ಉತ್ಪಾದಿಸಿ ಹಣ ಮಾಡಿಕೊಳ್ಳಬಹುದೆನ್ನುತ್ತಾರೆ ರೇಷ್ಮೆ ಕೃಷಿಕರು. ಒಟ್ಟಿನಲ್ಲಿ ಬರದ ತಾಲೂಕು ಬಂಡಾರ ಕುಮಟಾ ಗ್ರಾಮದ ರೈತರು ರೇಷ್ಮೇ ಕೃಷಿಯಲ್ಲಿ ಯಶಸ್ಸು ಕಂಡಿದ್ದಾರೆ. ಎಲ್ಲ ರೈತರು ಪ್ರಯೋಗಾತ್ಮಕ ಕೃಷಿ, ಬೆಳೆ ಬೆಳೆಯಲು ಅನುಕೂಲ ಮಾಡಿಕೊಳ್ಳಬೇಕು. ರೇಷ್ಮೆ  ಇಲಾಖೆಯ ಸಹಾಯ ಪಡೆದು ಉತ್ತಮ ಆದಾಯ ಗಳಿಸುವ ಬೆಳೆ ಬೆಳೆಯಲು ಎಲ್ಲ ರೈತರು ಮನಸ್ಸು ಮಾಡಬೇಕು.

Sneha Gowda

Recent Posts

ಅಸ್ಸಾಂ, ಗೋವಾದ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆ

ಏತನ್ಮಧ್ಯೆ, ತೈಲ ಮಾರುಕಟ್ಟೆ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಹೊಸ ಬೆಲೆಗಳನ್ನು ಬಿಡುಗಡೆ ಮಾಡಿವೆ. ದೇಶದ ಕೆಲವು ರಾಜ್ಯಗಳು ಮತ್ತು…

42 seconds ago

ಬಾತ್​ರೂಂನಲ್ಲಿ ಹುಟ್ಟಿದ ನವಜಾತ ಶಿಶು : ತಕ್ಷಣವೆ ಕತ್ತು ಹಿಸುಕಿ ಕೊಂದ ತಾಯಿ

ಕೊಚ್ಚಿಯ ಮಹಿಳೆಯರೊಬ್ಬರು ನವಜಾತ ಶಿಶುವನ್ನು ಕತ್ತು ಹಿಸುಕಿ, ಕೆಳಗೆ ಎಸೆದು ಕೊಂದಿರುವ ಆಘಾತಕಾರಿ ಘಟನೆ ನಡೆದಿದೆ. ಕೊಚ್ಚಿಯ  ಅಪಾರ್ಟ್‌ಮೆಂಟ್‌ನಲ್ಲಿ ಪೋಷಕರೊಂದಿಗೆ…

29 mins ago

ಮುಕ್ಕಾಲು ಕರ್ನಾಟಕಕ್ಕೆ ಸುಡು ಬಿಸಿಲು : ಉಳಿದೆಡೆ ಗುಡುಗು ಸಹಿತ ಮಳೆ

ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆಯಾಗಲಿದ್ದು, ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಪ್ರಮುಖವಾಗಿ ಬೆಂಗಳೂರು ಗ್ರಾಮಾಂತರ, ರಾಮನಗರ, ಬೆಂಗಳೂರು…

54 mins ago

ಈ ರಾಶಿಯವರಿಗೆ ಇಂದು ಆಪ್ತರಿಂದ ಆರ್ಥಿಕವಾಗಿ ಸಹಾಯ

ದೈಹಿಕ ಶ್ರಮ ಹೆಚ್ಚಲಿದೆ. ಸಂಶಯಾಸ್ಪದವಾದ ಹಣಕಾಸು ವ್ಯವಹಾರದಲ್ಲಿ ತೊಡಗುವುದು ಬೇಡ. ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಆಪ್ತರಿಂದ ಸಿಹಿ…

1 hour ago

85 ರೂನಷ್ಟು ಕಡಿಮೆಗೊಂಡ ಚಿನ್ನದ ಬೆಲೆ : ಇಲ್ಲಿದೆ ಇವತ್ತಿನ ದರಪಟ್ಟಿ

ಮೂರ್ನಾಲ್ಕು ವಾರಗಳ ಅದ್ವಿತೀಯ ರೀತಿಯಲ್ಲಿ ಏರಿಕೆ ಕಂಡಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಈ ವಾರ ಶಾಂತಗೊಂಡಿವೆ. ಈ ವಾರ…

2 hours ago

ಇಂದು ವಿಶ್ವ ನಗುವಿನ ದಿನ : ನಾವು ನಗೋಣ, ಇನ್ನೊಬ್ಬರನ್ನು ನಗಿಸೋಣ

ʻನಗುʼ ಇದು ಎಲ್ಲ ಮಾನಸಿಕ ಹಾಗೂ ದೈಹಿಕ ಕಾಯಿಲೆಗಳನ್ನು ದೂರವಿರಿಸುವ ಒಂದು ಅಸ್ತ್ರ.ಹೀಗಾಗಿಯೇ ನಗುವಿನ ಪ್ರಾಮುಖ್ಯತೆಯನ್ನು ಸಾರಲು ವಿಶ್ವದಾದ್ಯಂತ ಮೇ…

2 hours ago