News Karnataka Kannada
Saturday, April 13 2024
Cricket
ಬೀದರ್

ಬೀದರ್: ಉಚಿತ ಶ್ರವಣ ಯಂತ್ರದ ಲಾಭ ಹೆಚ್ಚಿನ ಫಲಾನುಭವಿಗಳಿಗೆ ಸಿಗಲಿ- ಅಪರ ಜಿಲ್ಲಾಧಿಕಾರಿ

Bidar: More beneficiaries should get the benefit of free hearing aids
Photo Credit : News Kannada

ಬೀದರ್: ಕೇಂದ್ರ ಸರ್ಕಾರ ಯೋಜನೆಯಡಿ ಬೀದರ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಇಂದು ಜಿಲ್ಲೆಯ ಶ್ರವಣ ದೋಷಿಗಳಿಗೆ ಉಚಿತ ಶ್ರವಣಯಂತ್ರ ವಿತರಣೆ ಮಾಡುತ್ತಿರುವುದು ಸಂತಸ ತಂದಿದ್ದು ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಫಲಾನುಫವಿಗಳಿಗೆ ಇದರ ಲಾಭ ದೊರೆಯುವಂತಾಗಲಿ ಎಂದು ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಹೇಳಿದರು.

ಅವರು ಗುರುವಾರ ಬೀದರ್ ಜಿಲ್ಲಾಡಳಿತ್, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಎನ್‌ಪಿಪಿಸಿಡಿ ಕಾರ್ಯಕ್ರಮದಡಿ ಅಲಿಯವರ ಜಂಗ್ ನ್ಯಾಷನಲ್ ಇನ್ಸಟ್ಯೂಟ್ ಆಫ್ ಸ್ಪೀಚ್ ಆ್ಯಂಡ್ ಹಿಯರಿಂಗ್ ಡಿಸೆಬಲಿಟಿ ಸೆಂಟರ್ ಸಿಕಿಂದ್ರಾಬಾದ ಸಹಯೋಗದೊಂದಿಗೆ ಕೇಂದ್ರ ಸರ್ಕಾರದ ಎಡಿಪಿಐ ಯೋಜನೆಯಡಿ ಉಚಿತ ಶ್ರವಣ ಯಂತ್ರ ವಿತರಣಾ ಶಿಬಿರ ಉದ್ಘಾಟಿಸಿ ಫಲಾನುಭವಿಗಳಿಗೆ ಶ್ರವಣ ಯಂತ್ರ ವಿತರಿಸಿ ಮಾತನಾಡಿದರು. ಶ್ರವಣ ದೋಷದಿಂದ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಅಡ್ಡಿಯಾಗುವ ಸಾದ್ಯತೆ ಇರುತ್ತದೆ. ಆದರೆ ಈ ಶ್ರವಣ ಯಂತ್ರವು ಅವರ ಉನ್ನತ ಭವಿಷ್ಯಕ್ಕೆ ನಾಂದಿಯಾಗಲಿದೆ.

ಈ ಶ್ರವಣ ಯಂತ್ರವನ್ನು ಪಡೆದ ಎಲ್ಲರು ಸರಿಯಾದ ರೀತಿಯಲ್ಲಿ ಉಪಯೋಗ ಮಾಡಬೇಕು ಕೆಲವರಿಗೆ ಉಚಿತವಾಗಿ ದೊರೆತ ವಸ್ತುಗಳ ಬಗ್ಗೆ ಹೆಚ್ಚು ಕಾಳಜಿ ಇರುವುದಿಲ್ಲ. ಆದರಿಂದ ನಿಮಗೆ ನೀಡಿದ ಈ ಯಂತ್ರದ ಸರಿಯಾದ ಲಾಭವನ್ನು ಪಡೆಯಬೇಕೆಂದ ಅವರು ಪೋಷಕರು ತಮ್ಮ ಮಕ್ಕಳಲ್ಲಿ ಇಂತಹ ಸಮಸ್ಯೆ ಕಂಡುಬಂದಲ್ಲಿ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯಬೇಕು ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರತಿಕಾಂತ ಸ್ವಾಮಿ ಮಾತನಾಡಿ, ಹುಟ್ಟಿದ ಮೂರು ವರ್ಷಗಳ ನಂತರ ಮಕ್ಕಳ ಬುದ್ಧಿ ಬೆಳವಣಿಗೆ ಆರಂಭವಾಗುತ್ತದೆ ಆದರಿಂದ ಮಕ್ಕಳು ಹುಟ್ಟಿದ ಸಂದರ್ಭದಲ್ಲಿ ಯಾವುದಾದರು ದೋಷವಿದೆ ಎಂಬುದನ್ನು ಪೋಷಕರು ಗಮನಿಸಬೇಕು ಅವರಲ್ಲಿ ಶ್ರವಣ ದೋಷ ಕಂಡುಬಂದಲ್ಲಿ ತಕ್ಷಣ ಪೋಷಕರು ಚಿಕಿತ್ಸೆ ಕೊಡಿಸಬೇಕು ಇಲ್ಲದಿದ್ದರೆ ಅವರ ಬುದ್ದಿ ಬೆಳವಣಿಗೆಗೆ ತೊಂದರೆಯಾಗುತ್ತದೆ ಆದರಿಂದ ಪೋಷಕರು ನಿರ್ಲಕ್ಷ್ಯತೆ ತೊರಬಾರದು ಎಂದರು.

ಜಿಲ್ಲೆಯಲ್ಲಿರುವ 77 ಶ್ರವಣ ದೊಷಿಯರಿಗೆ ಗುರುತಿಸಿ ಇಂದು 174 ಶ್ರವಣ ಯಂತ್ರ ನೀಡಲಾಗುತ್ತಿದೆ. ಇದಕ್ಕೆ ಸಿಕಿಂದ್ರಾಬಾದ ಅಲಿಯವರ ಜಂಗ್ ಸಂಸ್ಥೆಯವರು ನಮಗೆ ಸಹಕಾರ ನೀಡಿದ್ದಾರೆ ಎಂದ ಅವರು ಬೀದರ್ ಜಿಲ್ಲಾ ಆಸ್ಪತ್ರೆಯಲ್ಲಿ ಸ್ಪೀಚ್ ಆಯ್ದ ಹಿಯರಿಂಗ್ ಸೆಂಟರ್ ಇದ್ದು ಇದರ ಲಾಭ ಜಿಲ್ಲೆಯ ನಾಗರಿಕರು ಪಡೆಯಬೇಕೆಂದರು.

ಬೀದರ್ ಬ್ರೀಮ್ಸ್ನ ಜಿಲ್ಲಾ ಶಸ್ತ್ರಚಿಕಿತ್ಸಕ ಮಹೇಶ ಬಿರಾದಾರ ಮಾತನಾಡಿ, ಕೆಲವರಿಗೆ ಶ್ರವಣ ದೋಷಕ್ಕೆ ಚಿಕಿತ್ಸೆ ಇದೆ ಎನ್ನುವ ಬಗ್ಗೆ ಮಾಹಿತಿ ಇರುವುದಿಲ್ಲ ಮತ್ತು ಕೆಲವರು ಮೂಡನಂಬಿಕೆಗೆ ಬಲಿಯಾಗಿ ಸರಿಯಾದ ಸಮಯಕ್ಕೆ ಚಿಕಿತ್ಸೆ ಪಡೆಯುವುದಿಲ್ಲ ಪ್ರಸ್ತುತ ಬೀದರ್ ಜಿಲ್ಲಾ ಆರೋಗ್ಯ ಇಲಾಖೆಯು ಜಿಲ್ಲೆಯ ಜನತೆಗೆ ಶ್ರವಣ ದೋಷದ ಚಿಕಿತ್ಸೆಯ ಬಗ್ಗೆ ಮಾಹಿತಿಯ ಜೊತೆಗೆ ಅವರಿಗೆ ಚಿಕಿತ್ಸೆ ನೀಡುತ್ತಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಶಿವಶಂಕರ.ಬಿ, ಬೀದರ್’ನ 100 ಆಸ್ಪತ್ರೆಯ ಆಡಳಿತ ಅಧಿಕಾರಿ ಡಾ. ಸೋಹೆಲ್ ಅಹಮದ್, ಎಚ್‌ಓಡಿ ಇಎನ್‌ಟಿ ಬ್ರೀಮ್ಸ್ ಸುಮಂತ ಕಣಜಿಕರ್, ತಾಲ್ಲೂಕ ಆರೋಗ್ಯ ಅಧಿಕಾರಿ ಸಂಗಾರೆಡ್ಡಿ, ಇಎನ್‌ಟಿ ತಜ್ಞ ನಿಶಾ ಕೌರ್, ಶ್ರವಣಶಾಸ್ತ್ರಜ್ಞ ಡಾ. ವೆಂಕಟರಾಮನ್, ಶಿವಾನಂದ ಹಿರೆಮಠ, ಬಿಲಾಲ್, ಸೋಹೆಲ್, ಮುದಾಸೀರ್, ಶ್ರವಣ ದೋಷ ಫಲಾನುಭವಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು