Categories: ಬೀದರ್

ಬೀದರ್: ಸ್ವಪಕ್ಷದವರಿಂದಲೇ ನನಗೆ ಸೋಲು, ಈಶ್ವರಸಿಂಗ್ ಠಾಕೂರ್

ಬೀದರ್: ಬಿಜೆಪಿಯ ಕೆಲವು ಮಂದಿ ನನಗೆ ದ್ರೋಹ ಬಗೆದಿದ್ದು ಇದರಿಂದ ತಮಗೆ ಸೋಲುಂಟಾಗಿದೆ ಎಂದು ಬಿಜೆಪಿ ಪಕ್ಷದ ಬೀದರ ಉತ್ತರ ಕ್ಷೇತ್ರದ ಅಭ್ಯರ್ಥಿ ಈಶ್ವರಸಿಂಗ್ ಠಾಕೂರ್ ಅವರು ಆರೋಪಿಸಿದರು.

ಅವರು ಇಂದು ರವಿವಾರ ಬೆಳಿಗ್ಗೆ ಬೀದರ ನಗರದಲ್ಲಿ ಕರೆದ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದರು.

ತಮ್ಮ ವಿಶ್ವಾಸಕ್ಕೆ ಮತ್ತು ಪಕ್ಷಕ್ಕೆ ದ್ರೋಹ ಬಗೆದು ಮೋಸ ಮಾಡಿರುವ ಬಿಜೆಪಿಯ ಡಿಕೆ ಸಿದ್ರಾಮ್ ಹಾಗೂ ಇತರರು ತಮ್ಮ ಬೆನ್ನಿಗೆ ಚೂರಿ ಹಾಕಿದ್ದಾರೆ. ಮತ್ತು ಅನೇಕ ವಾಮ ಮಾರ್ಗಗಳನ್ನು ಅನುಸರಿಸಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಪರವಾಗಿ ಕೆಲಸ ಮಾಡಿದ್ದಾರೆ.

ಅಂತಹ ಮೋಸಗಾರರ ಪಟ್ಟಿ ತಯಾರಿಸಿದ್ದು ಪಕ್ಷದ ವರಿಷ್ಠರಿಗೆ ಕಳಿಸಲಿದ್ದು, ಅವರ ವಿರುದ್ಧ ಸೂಕ್ತ ಕ್ರಮಕ್ಕಾಗಿ ಮನವಿ ಮಾಡಿದ್ದೇನೆ ಅಲ್ಲದೇ ಆ ಪಟ್ಟಿ ಶೀಘ್ರ  ಬಿಡುಗಡೆ ಮಾಡುವೆ ಎಂದು ತಿಳಿಸಿದರು.

ಚುನಾವಣೆಯಲ್ಲಿ ಈಶ್ವರ್‌ಸಿಂಗ್ ಠಾಕೂರ್ ಅವರು ಸೈಲೆಂಟ್ ಆಗಿದ್ದಾರೆ. ಮನೆ ಹೊರಗೆ ಬರುತ್ತಿಲ್ಲ ಎಂಬ ಇತ್ಯಾದಿ ಅಪ ಪ್ರಚಾರ ಮಾಡಿ ಸಾಮಾಜಿಕ ಜಾಲತಾಣಗಳ ಮೂಲಕ ಮಿಥ್ಯ ಹೇಳಿಕೆ ನೀಡಿ ನೀಚತನದ ರಾಜಕಾರಣ ಮಾಡಿರುತ್ತಾರೆ ಎಂದು ಅವರು ಆರೋಪಿಸಿದ್ದಾರೆ.

ಜೆಡಿಎಸ್ ಅಭ್ಯರ್ಥಿ ಈ ಹಿಂದೆ ಎರಡು ಸಲ ಪಕ್ಷದ ಟಿಕೇಟ್ ಪಡೆದು ಸ್ಪ ರ್ಧಿಸಿ ಸೋಲು ಅನುಭವಿಸಿದ್ದರು, ಅವರು ಪಕ್ಷಾಂತರಗೊಂಡು ಮೋಸಗೈದಿರುವರು ಎಂದ ಅವರು ಬೀದರ ಕ್ಷೇತ್ರದ ಜನತೆ ತಮಗೆ ಮತ ನೀಡಿ ತಮ್ಮ ಜೊತೆ ಇದ್ದೇವೆ ಎಂದು ಸಾಬಿತು ಪಡಿಸಿದ್ದಾರೆ. ನನಗೆ ಮತದಾನ ಮಾಡಿರುವ ಸುಮಾರು ೧೮ ಸಾವಿರ ಮಹಾ ಜನತೆಗೆ ಚಿರರುಣಿಯಾಗಿರುವೆ.

ಈ ಕ್ಷಣದಿಂದ ಮುಂಬರುವ ಚುನಾವಣೆ ವರೆಗೆ ಸರ್ವ ಜನಾಂಗದ ಸುಖ ದುಃಖ ಗಳಲ್ಲಿ ಭಾಗಿಯಾಗಿ ಜನರ ಆಶೋತ್ತರಗಳಿಗೆ ಸ್ಪಂದಿಸುವೆ ಅವರ ಪರವಾಗಿ ದಿನದ ೨೪ ತಾಸುಗಳ ಕಾಲ ತಮ್ಮ ಮೊಬೈಲ್‌ ಚಾಲು ಇಡುವೆ. ಹಾಲಿ ಮಂತ್ರಿ ಭಗವಂತ ಖೂಬಾ ಅವರು ತಮ್ಮ ಪರವಾಗಿ ಕೆಲಸ ಮಾಡಲಿಲ್ಲ ಎಂದ ಅವರು ಮುಂಬರುವ ದಿನಗಳಲ್ಲಿ ತಾವು ಬೀದರ ಲೋಕ ಸಭಾ ಕ್ಷೇತ್ರಕ್ಕೆ ಟಿಕೇಟ್ ಕೇಳುತ್ತೇನೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಅಶೋಕ ಪಾಟೀಲ್ ಅಲಿಯಾಬಾದ್, ವಿಶ್ವನಾಥ ಉಪ್ಪೆ, ಶಿವರಾಜಸಿಂಗ್ ಠಾಕೂರ್, ಉಮೇಶ ಕಟ್ಮೆ, ಮಹೇಶ್ವರ್ ಸ್ವಾಮಿ, ಅವರುಗಳು ಉಪಸ್ಥಿತರಿದ್ದರು.

Ashika S

Recent Posts

ಹುಟ್ಟು ಹಬ್ಬದ ಸಂಭ್ರಮದಲ್ಲಿ ಹಿಟ್ ಮ್ಯಾನ್ ರೋಹಿತ್ ಶರ್ಮಾ

ಭಾರತ ಕ್ರಿಕೆಟ್ ತಂಡದ ನಾಯಕ ಹಿಟ್ಮ್ಯಾನ್ ರೋಹಿತ್ ಶರ್ಮ ಇಂದು ತಮ್ಮ 37ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ರೋಹಿತ್ ಶರ್ಮಾ…

9 mins ago

ಜಾರ್ಖಂಡ್‌ನಲ್ಲಿ ಬಿಸಿಗಾಳಿ ಹಿನ್ನೆಲೆ 8ನೇ ತರಗತಿವರೆಗೆ ರಜೆ ಘೋಷಣೆ

ತೀವ್ರವಾದ ಬಿಸಿ ಗಾಳಿ ಬೀಸುತ್ತಿರುವ ಹಿನ್ನೆಲೆಯಲ್ಲಿ ಜಾರ್ಖಂಡ್‌ನಲ್ಲಿ ಇಂದಿನಿಂದ ರಾಜ್ಯಾದ್ಯಂತ ಸರ್ಕಾರಿ ಮತ್ತು ಖಾಸಗಿ ಶಾಲೆಗಳ 8 ತರಗತಿವರೆಗೆ ರಜೆ…

15 mins ago

ಮದುವೆಯಿಂದ ಹಿಂತಿರುಗುತ್ತಿದ್ದ ವೇಳೆ ಬಸ್​ ಪಲ್ಟಿ : 20 ಪ್ರಯಾಣಿಕರಿಗೆ ಗಾಯ

ಮದುವೆಯಿಂದ ಹಿಂತಿರುಗುತ್ತಿದ್ದ ವೇಳೆ ಸೇತುವೆಯಿಂದ ಬಸ್ ಪಲ್ಟಿಯಾಗಿ 20 ಮಂದಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಒಡಿಶಾದ ಜಗತ್‌ಸಿಂಗ್‌ಪುರದಲ್ಲಿ ನಡೆದಿದೆ.

42 mins ago

ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣ: 40 ಜಿಬಿಯ ಪೆನ್ ಡ್ರೈವ್‍ ವಶಕ್ಕೆ ಪಡೆದ ವಿಶೇಷ ತನಿಖಾ ತಂಡ

ಸಂಸದ ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡ ಅಧಿಕಾರಿಗಳು ಒಟ್ಟು 40 ಜಿಬಿಯ ಪೆನ್ ಡ್ರೈವ್‍ಗಳನ್ನು…

1 hour ago

ತಾಕತ್ತಿದ್ದವರು 370ನೇ ವಿಧಿಯನ್ನು ಮತ್ತೆ ಜಾರಿಗೆ ತರಲಿ : ನರೇಂದ್ರ ಮೋದಿ

ಲೋಕಸಭೆ ಚುನಾವಣೆಯ ಬಿಸಿ ಮತ್ತಷ್ಟು ಹೆಚ್ಚಾಗುತ್ತಿದ್ದು, ರಾಜಕಾರಣಿಗಳ ಹೇಳಿಕೆಗಳು, ಅವರು ಮಾತನಾಡುವ ವಿಷಯಗಳು ಮತ್ತಷ್ಟು ತಾರಕಕ್ಕೇರುತ್ತಿದೆ. ನಾವು ಅಧಿಕಾರಕ್ಕೆ ಬಂದರೆ…

1 hour ago

ಜಮ್ಮು ಕಾಶ್ಮೀರದಲ್ಲಿ ಧಾರಕಾರ ಮಳೆ: ಭೂಕುಸಿತ, ಹಲವು ಮನೆ ಹಾನಿ

ಜಮ್ಮು ಮತ್ತು ಕಾಶ್ಮೀರದ ವಿವಿಧ ಪ್ರದೇಶಗಳಲ್ಲಿ ಕಳೆದ 48 ಗಂಟೆಗಳಿಂದ ಧಾರಕಾರ ಮಳೆಯಾಗುತ್ತಿದ್ದು, ಪೂಂಚ್‌ನ ಮಂಡಿ ಪ್ರದೇಶದಲ್ಲಿ ಮಳೆಯಿಂದ ಭೂಕುಸಿತ…

2 hours ago