News Karnataka Kannada
Monday, April 29 2024
ಬೀದರ್

ಬೀದರ: ಚುನಾವಣೆಯಲ್ಲಿ ಸಾರ್ವಜನಿಕರಿಗೆ ವಿತರಿಸಲು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ವಸ್ತುಗಳ ಜಪ್ತಿ

Illegally stored items to be distributed to the public during elections seized
Photo Credit : News Kannada

ಬೀದರ: ಮುಂಬರುವ ವಿಧಾನಸಭೆ ಚುನಾವಣೆ ಪೂರ್ವವಾಗಿ ಮನ್ನಾನಶೇಟ್ ಅವರಿಗೆ ಸಂಬಂಧಿಸಿದ ಅರ್ಜಿಯ ಮಂಜಿಲ್ ನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಸೀರೆ, ಬಳೆ ಮತ್ತು ಇತರೆ ವಸ್ತುಗಳನ್ನು ಜಪ್ತಿ ಮಾಡಿ ಎಫ್.ಐ.ಆರ್. ದಾಖಲಿಸಲಾಗಿದೆ.

ಮಾರ್ಚ್ 18 ರಂದು ಕಮರ್ಷಿಯಲ್ ಟ್ಯಾಕ್ಸ್ ಅಧಿಕಾರಿ ಬೀದರ ಅವರು ನನ್ನ ಕಚೇರಿಗೆ ಬಂದು ರಾಜಾಬಾಗ್ ಬೀದರನಲ್ಲಿ ಮುಂಬರುವ ಚುನಾವಣೆ ಪೂರ್ವಕವಾಗಿ ಮನ್ನಾನಶೇಟ್ ಅವರಿಗೆ ಸಂಬಂಧಿಸಿದ ಅರ್ಜೀಯ ಮಂಜಿಲ್ ನಲ್ಲಿ ಅಕ್ರಮವಾಗಿ ಸೀರೆ, ಬಳೆ ಮತ್ತು ಇತರೆ ವಸ್ತುಗಳು ಸಂಗ್ರಹಿಸಿಟ್ಟ ಬಗ್ಗೆ ಮಾಹಿತಿ ತಿಳಿದು ಮಾರ್ಚ್ 17 ರಂದು ಇಬ್ಬರು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಜಪ್ತಿ ಪಂಚನಾಮೆ ಸಲ್ಲಿಸಿದ್ದು ಇರುತ್ತದೆ ಎಂದು ಬೀದರ ಸಹಾಯಕ ಆಯುಕ್ತರು ಅರ್ಜಿಯಲ್ಲಿ ತಿಳಿಸಿರುತ್ತಾರೆ. ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದು ಕಂಡುಬರುತ್ತಿದೆ.

ಈ ಬಗ್ಗೆ ಕುಲಂಕುಶವಾಗಿ ವಿಚಾರಣೆ ಮಾಡಿ ಮನ್ನಾನಶೇಟ್ ತಂದೆ ಅಬ್ದುಲ್ ಅಜೀಜ್ ಮಂಜಿಲ್ ಬೀದರ ಇತನ ವಿರುದ್ದ ಕಾನೂನು ಕ್ರಮ ಜರುಗಿಸಲು ಬೀದರ ನಗರ ಪೋಲಿಸ್ ಠಾಣೆಯ ಪಿ.ಎಸ್.ಐ ಗೆ ಸಹಾಯಕ ಆಯುಕ್ತರು ಬೀದರ ಇವರು ಸೂಚಿಸಿರುತ್ತಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು