Categories: ಬೀದರ್

ಬೀದರ: ಜನರ ಸಲಹೆ ಸೂಚನೆಗಳ್ನು ಪಡೆದುಕೊಂಡು ಮಾದರಿ ಕ್ಷೇತ್ರವನ್ನಾಗಿಸುವೆ- ಡಾ. ಶೈಲೇಂದ್ರ ಬೆಲ್ದಾಳೆ

ಬೀದರ: ಚಿಟಗುಪ್ಪ ತಾಲೂಕಿನ ಚಾಂಗಲೇರಾ ವೀರಭದ್ರೇಶ್ವರ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಅವರಿಗೆ ಗುರುಲಿಂಗ ಶಿವಾಚಾರ್ಯರು, ಮರುಳಾರಾಧ್ಯ ಶಿವಾಚಾರ್ಯರು ಸನ್ಮಾನಿಸಿದರು.

ಚಿಟಗುಪ್ಪ ಕ್ಷೇತ್ರದ ಅಭಿವೃದ್ಧಿಯೊಂದಿಗೆ ಜನರ ಸೇವೆಯೇ ನನ್ನ ಮೂಲ ಗುರಿಯಾಗಿದ್ದು ಈ ನಿಟ್ಟಿನಲ್ಲಿ ನಾನು ಸದಾ ಸಿದ್ಧನಿರುತ್ತೇನೆ ಮತ್ತು ಜನರ ಆಶೊತ್ತರಗಳಿಗೆ ಸ್ಪಂದಿಸುವ ಕಾರ್ಯ ಮಾಡುವೆ ಎಂದು ಬೀದರ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಅವರು ನುಡಿದರು.
ಸುಕ್ಷೇತ್ರ ಚಾಂಗಲೇರಾ ಗ್ರಾಮದ ಪುರಾಣ ಪ್ರಸಿದ್ಧ ವೀರಭದ್ರೇಶ್ವರ ಮಂದಿರದಲ್ಲಿ ಸನ್ಮಾನ ಸ್ವಿಕರಿಸಿ ಮಾತನಾಡಿದರು.

ಬೀದರ ದಕ್ಷಿಣ ಕ್ಷೇತ್ರವೂ ಹಳ್ಳಿಗಳಿರುವ ಕ್ಷೇತ್ರವಾಗಿದ್ದು ಎಲ್ಲಾ ಗ್ರಾಮಗಳಿಗೆ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರಿನ ಸವಲತ್ತು, ಬಿದಿ ದೀಪಗಳು, ಚರಂಡಿಗಳು, ರಸ್ತೆ ಸೇರಿ ಇತ್ಯಾದಿ ಸೌಕರ್ಯಗಳನ್ನು ಒದಗಿಸುವ ಜತೆಗೆ ಜನರ ಆಶೋತ್ತರಗಳಿಗೆ ಸ್ಪಂದಿಸುತ್ತಾ ಜನರ ಸಲಹೆ ಸೂಚನೆಗಳ್ನು ಪಡೆದುಕೊಂಡು ಮಾದರಿ ಕ್ಷೇತ್ರವನ್ನಾಗಿಸುವೆ ಎಂದರು.

ಚಿಟಗುಪ್ಪ ಅಯ್ಯಪ್ಪಸ್ವಾಮಿ ಹಿರೇಮಠದ ಹಿರಿಯ ಶ್ರೀ ಗುರುಲಿಂಗ ಶಿವಾಚಾರ್ಯರು ಆರ್ಶೀವಚನ ನೀಡುತ್ತಾ ಮಾತನಾಡಿ, ವೀರಭದ್ರೇಶ್ವರರ ಭಕ್ತರಾಗಿರುವ ತಾವು ಕ್ಷೇತ್ರದ ಜನರ ಮನಸ್ಸನ್ನು ಅರಿತುಕೊಂಡು ಸೇವೆಗೆ ಮುಂದಾಗಬೇಕು ಎಂದು ತಿಳಿಸಿ ಆರ್ಶೀವದಿಸಿದರು.
ಅಯ್ಯಪ್ಪಸ್ವಾಮಿ ಹಿರೇಮಠದ ಪೀಠಾಧಿಪತಿ ಮರುಳಾರಾಧ್ಯ ಶಿವಾಚಾರ್ಯರು ಮಾತನಾಡಿ, ಸದಾಕಾಲ ಜನರ ಸೇವೆಯನ್ನು ಮಾಡುವ ಮೂಲಕ ಸಮಾಜಪರ ಕಾಳಜಿ ಹೊಂದಿರುವ ನಾಯಕನಾಗಿರುವ ಡಾ. ಶೈಲೇಂದ್ರ ಬೆಲ್ದಾಳೆ ಅವರಿಗೆ ಒಳ್ಳೆಯದಾಗಲಿ ಎಂದರು.

ಪ್ರಮುಖರಾದ ಶಿವಕುಮಾರ ಸ್ವಾಮಿ ಬಂಬಳಗಿ, ನಾಗಭೂಷಣ ಕಮಠಾಣ, ಕುಶಲರಾವ ಯಾಬಾ, ವಿಜಯಕುಮಾರ ವಾಲಿ, ರಾಜಕುಮಾರ ಪಂಚಾಳ, ಪಪ್ಪು ಸ್ವಾಮಿ, ನರೇಶ ಥೊಂಟಿ, ಸಂತೋಷ ಹಳ್ಳಿಖೇಡ, ಬಸವರಾಜ ಚಟನಳ್ಳಿ, ವಿಕೆ ಪೂಜಾರಿ, ರಾಮಯ್ಯ ಶಾಸ್ತಿç ಸೇರಿದಂತೆ ದೇವಸ್ಥಾನದ ಆಡಳಿತ ಮಂಡಳಿಯವರು, ನೂರಾರು ಬಿಜೆಪಿ ಕಾರ್ಯಕರ್ತರು ಅಭಿಮಾನಿಗಳು ಹಾಜರಿದ್ದರು.

Ashika S

Recent Posts

ನಿದ್ದೆ ಇಲ್ಲದೆ ಬಳಲುತ್ತಿದ್ದ ಖ್ಯಾತ ಸೌತ್ ನಟಿ ನಿಧನ!

ಖ್ಯಾತ ಸಿನಿಮಾ ನಟಿ ಕನಕಲತಾ ಇಂದು ನಿಧನರಾಗಿದ್ದಾರೆ. ಅವರಿಗೆ 63 ವರ್ಷ ವಯಸ್ಸಾಗಿತ್ತು. ಅವರು ಬಹಳ ದಿನಗಳಿಂದ ನಿದ್ದೆ ಮಾಡಲಾಗದ…

12 mins ago

ಮತದಾನದ ಹಕ್ಕು ಚಲಾಯಿಸಿದ ಹಿಂದೂ ಹುಲಿ ಬಸನಗೌಡ ಪಾಟೀಲ್ ಯತ್ನಾಳ್

ರಾಜ್ಯದಲ್ಲಿ ಲೋಕಸಭಾ ಚುನಾವಣೆ ಎರಡನೇ ಹಂತದ ಮತದಾನದ ಭಾಗವಾಗಿ ವಿಜಯಪುರ ಲೋಕಸಭಾ ಕ್ಷೇತ್ರದಲ್ಲಿ ಬಿರುಸಿನಿಂದ ವೋಟಿಂಗ್ ನಡೆಯುತ್ತಿದೆ.

23 mins ago

ಭ್ರಷ್ಟಾಚಾರ ಮುಕ್ತ, ಜಾತಿ ಮುಕ್ತ ವ್ಯವಸ್ಥೆಗಾಗಿ ಮತ ನೀಡಿ ಎಂದ ಅಮಿತ್ ಶಾ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗುಜರಾತ್ ನ ಗಾಂಧಿನಗರ ಲೋಕಸಭಾ ಕ್ಷೇತ್ರದ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

30 mins ago

ಆಹಾರದಲ್ಲಿ ಲಿಕ್ವಿಡ್ ನೈಟ್ರೋಜನ್ ಬಳಕೆ ಬ್ಯಾನ್‌

ಕಾಟನ್‌ ಕ್ಯಾಂಡಿ ಮತ್ತು ಗೋಬಿ ಬ್ಯಾನ್‌ ಆದ ಬೆನ್ನಲ್ಲೇ ಆಹಾರದಲ್ಲಿ ಲಿಕ್ವಿಡ್ ನೈಟ್ರೋಜನ್ ಬಳಕೆ ಬ್ಯಾನ್‌ ಮಾಡಲಾಗಿದೆ.ಬಳಕೆ ಮಾಡಿದರೆ 10…

35 mins ago

ಮಲ್ಪೆ ಬೀಚ್ ನ‌ ಸೊಬಗನ್ನು ಕೆಡಿಸುತ್ತಿವೆ ಬಿಯರ್ ಬಾಟಲ್, ಪ್ಲಾಸ್ಟಿಕ್ ತ್ಯಾಜ್ಯ

ಜಿಲ್ಲೆಯ ಪ್ರಸಿದ್ದ ಪ್ರವಾಸಿ ತಾಣ ಮಲ್ಪೆ ಬೀಚ್ ಇದೀಗ ಕಸದ ಕೊಂಪೆಯಾಗಿ ಮಾರ್ಪಡುತ್ತಿದೆ. ಎಲ್ಲೆಂದರಲ್ಲಿ ಬಿಸಾಡಿರುವ ಪ್ಲಾಸ್ಟಿಕ್ ಬಾಟಲ್, ಬಿಯರ್…

51 mins ago

ಗಣೇಶನ ಮೂರ್ತಿ ಜೊತೆ 3ನೇ ಬಾರಿ ನಭಕ್ಕೆ ಹಾರಿದ ಸುನೀತಾ ವಿಲಿಯಮ್ಸ್‌

ಭಾರತ ಮೂಲದ ವಿಶ್ವವಿಖ್ಯಾತ ಗಗನಯಾತ್ರಿ ಸುನೀತಾ ವಿಲಿಯಮ್ಸ್‌ ಇದೀಗ ಮತ್ತೆ ಬಾಹ್ಯಾಕಾಶಕ್ಕೆ ಹಾರಲು ಸಿದ್ದರಾಗಿದ್ದು, ಇಂದು ಅಂತಾರಾಷ್ಟ್ಪೀಯ ಬಾಹ್ಯಾಕಾಶ ನಿಲ್ದಾಣಕ್ಕೆ…

60 mins ago