News Karnataka Kannada
Wednesday, April 24 2024
Cricket
ಬೀದರ್

ಬೀದರ್: ಅಂಗನವಾಡಿ ನೌಕರರ ಧರಣಿ ವಾಪಸ್

Bidar: Anganwadi workers call off their sit-in protest
Photo Credit : News Kannada

ಬೀದರ್: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಗರದಲ್ಲಿ ಬುಧವಾರ ಆರಂಭಿಸಿದ್ದ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಅಧಿಕಾರಿ ಭರವಸೆ ಮೇರೆಗೆ ಅಂಗನವಾಡಿ ನೌಕರರು ಹಿಂಪಡೆದರು.

ಕರ್ನಾಟಕ ರಾಜ್ಯ ಸಂಯುಕ್ತ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಘಟಕದ ನೇತೃತ್ವದಲ್ಲಿ ಮೈಲೂರಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರ ಕಚೇರಿ ಎದುರು ಬೆಳಿಗ್ಗೆ ಧರಣಿ ಆರಂಭಿಸಿದರು.

ಸಂಜೆ ಸ್ಥಳಕ್ಕೆ ಭೇಟಿ ನೀಡಿದ ಉಪ ನಿರ್ದೇಶಕ ಪ್ರಭಾಕರ ಅವರು ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದರು. ನಂತರ ನೌಕರರು ಧರಣಿ ಕೈಬಿಟ್ಟರು.

ಅಂಗನವಾಡಿ ಕೇಂದ್ರಗಳ ಒಂದೂವರೆ ವರ್ಷದ ಬಾಕಿ ಬಾಡಿಗೆ, ತರಕಾರಿ ಹಣ ಬಿಡುಗಡೆಗೊಳಿಸಬೇಕು. ಗುಣಮಟ್ಟದ ಆಹಾರ ಧಾನ್ಯ, ಮೊಟ್ಟೆ ಪೂರೈಸಬೇಕು. ಪೀಠೋಪಕರಣ, ಒಲೆ, ರೆಗ್ಯುಲೇಟರ್, ತೂಕದ ಯಂತ್ರ, ರಿಜಿಸ್ಟರ್‌ಗಳನ್ನು ಪೂರೈಸಬೇಕು. ಎಲ್ಲ ವಲಯಗಳ ಮೇಲ್ವಿಚಾರಕ ಹುದ್ದೆ ಭರ್ತಿ ಮಾಡಬೇಕು. ಸೋರುತ್ತಿರುವ ಕೇಂದ್ರಗಳನ್ನು ದುರಸ್ತಿಪಡಿಸಬೇಕು. ದೀರ್ಘಕಾಲದಿಂದ ಒಂದೇ ಕಡೆ ಇರುವ ಮೇಲ್ವಿಚಾರಕಿಯರನ್ನು ವರ್ಗಾವಣೆ ಮಾಡಬೇಕು. ಎಸ್ಸೆಸ್ಸೆಲ್ಸಿ ಪೂರೈಸಿದ ಕಾರ್ಯಕರ್ತೆಯರಿಗೆ ಮುಂಬಡ್ತಿ ನೀಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಇಟ್ಟುಕೊಂಡು ನೌಕರರು ಧರಣಿ ನಡೆಸುತ್ತಿದ್ದರು.

ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಮಹೇಶ ನಾಡಗೌಡ, ಅಧ್ಯಕ್ಷೆ ಲಕ್ಷ್ಮಿ ದಂಡಿ, ಕಾರ್ಯದರ್ಶಿ ಬಸಮ್ಮ ಮೇತ್ರಿ ಮುಂದಾಳತ್ವ ವಹಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು