Categories: ಬೀದರ್

ಔರಾದ್: ಸ್ಥಳಾಂತರವಾಗದ ಪಟ್ಟಣ ಪಂಚಾಯಿತಿ ಕಚೇರಿ, ಸಾರ್ವಜನಿಕರಿಗೆ ಕಿರಿಕಿರಿ

ಔರಾದ್: ಇಲ್ಲಿ ಹೊಸದಾಗಿ ನಿರ್ಮಾಣಗೊಂಡ ಕಟ್ಟಡಕ್ಕೆ ಪಟ್ಟಣ ಪಂಚಾಯಿತಿ ಕಚೇರಿ ಕಾರ್ಯ ಸ್ಥಳಾಂತರವಾಗದೆ ಜನರಿಗೆ ಕಿರಿಕಿರಿಯಾಗಿದೆ.

ಪಟ್ಟಣದ ಬೀದರ್ ರಸ್ತೆಯಲ್ಲಿ ಸುಮಾರು ₹1.5 ಕೋಟಿ ವೆಚ್ಚದಲ್ಲಿ ನೂತನ ಪಟ್ಟಣ ಪಂಚಾಯಿತಿ ನಿರ್ಮಾಣ ಆಗಿದೆ.ಎರಡು ತಿಂಗಳ ಹಿಂದೆ ಉದ್ಘಾಟನೆಯೂ ಆಗಿದೆ. ಆದರೆ ಕಚೇರಿ ಕೆಲಸ ಕಾರ್ಯ ಇನ್ನು ಪೂರ್ಣವಾಗಿ ಸ್ಥಳಾಂತರವಾಗದೆ ಜನರಿಗೆ ತೊಂದರೆಯಾಗಿದೆ.

‘ಎಲ್ಲ ವಿಭಾಗದ ಕಡತಗಳು, ಸಾಮಗ್ರಿಗಳು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಅಕೌಂಟ್ ವಿಭಾಗ ಹಾಗೂ ಇಂಟರ್‌ನೆಟ್‌ ವಿಭಾಗದ ಕೆಲಸಗಳು ಹಳೆ ಕಟ್ಟಡದಲ್ಲೇ ನಡೆಯುತ್ತಿವೆ. ವಿದ್ಯುತ್, ನೆಟ್ ಸೌಲಭ್ಯ ಆದ ನಂತರ ಅಲ್ಲಿಗೆ ಹೋಗುತ್ತೇವೆ’ ಎಂದು ಪಟ್ಟಣ ಪಂಚಾಯಿತಿ ಲೆಕ್ಕಿಗ ವಿಭಾಗದ ಅಧಿಕಾರಿಯೊಬ್ಬರು ಹೇಳುತ್ತಾರೆ.

‘ನಾವು ತೆರಿಗೆ ಕಟ್ಟಲು ಹೊಸ ಕಟ್ಟಡಕ್ಕೆ ಹೋಗಬೇಕು. ಇನ್ನು ಡಿಜಿಟಲ್ ಖಾತೆ, ಮ್ಯುಟೇಶನ್‌ಗಾಗಿ ಹಳೆ ಕಟ್ಟಡಕ್ಕೆ ಹೋಗಬೇಕು. ಹಳೆ ಮತ್ತು ಹೊಸ ಕಟ್ಟಡ ನಡುವೆ ಒಂದೂವರೆ ಕಿ.ಮೀ. ಅಂತರವಿದೆ. ಇದರಿಂದ ನಮಗೆ ವಿನಾ ಕಾರಣ ತೊಂದರೆಯಾಗುತ್ತಿದೆʼ ಎಂದು ಪಟ್ಟಣದ ಜನ ಅಸಮಾಧಾನ ಹೊರ ಹಾಕಿದ್ದಾರೆ.

‘ಪಟ್ಟಣ ಪಂಚಾಯಿತಿಗೆ ಹೊಸ ಕಟ್ಟಡ ಆಗಿದೆ. ಫರ್ನಿಚರ್ ಮಾಡಿಸಿದ್ದೇವೆ. ಎಲ್ಲ ವ್ಯವಸ್ಥೆಯೂ ಇದೆ. ಆದರೆ ಅಧಿಕಾರಿಗಳ ವಿಳಂಬ ನೀತಿಯಿಂದ ಕಚೇರಿ ಕೆಲಸ ಪೂರ್ಣವಾಗಿ ಸ್ಥಳಾಂತರವಾಗಿಲ್ಲ’ ಎಂದು ಪಟ್ಟಣದ ಪಂಚಾಯಿತಿ ಸದಸ್ಯ ದಯಾನಂದ ಘುಳೆ ತಿಳಿಸಿದ್ದಾರೆ.

‘ಚುನಾವಣೆಯಿಂದಾಗಿ ಪಟ್ಟಣದ ಪಂಚಾಯಿತಿ ಕಚೇರಿ ಸ್ಥಳಾಂತರ ವಿಳಂಬ ಆಗಿರಬಹುದು. ಕೆಲ ದಿನಗಳ ಹಿಂದೆಯೇ ನಾನು ಆಡಳಿತಾಧಿಕಾರಿಯಾಗಿ ಅಧಿಕಾರ ತೆಗೆದುಕೊಂಡಿದ್ದೇನೆ. ಈ ಬಗ್ಗೆ ತಿಳಿದುಕೊಂಡು ಜನರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುತ್ತೇನೆʼ ಎಂದು ತಹಶೀಲ್ದಾರ್ ಮಲ್ಲಿಕಾರ್ಜುನ ತಿಳಿಸಿದ್ದಾರೆ.

ಹೊಸ ಕಟ್ಟಡಕ್ಕೆ ಪಟ್ಟಣ ಪಂಚಾಯಿತಿ ಕಚೇರಿ ಸ್ಥಳಾಂತರ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ಆದಷ್ಟು ಬೇಗ ಜನರ ತೊಂದರೆ ನಿವಾರಣೆ ಮಾಡಲಾಗುವುದು.

ಮಲ್ಲಿಕಾರ್ಜುನ ಆಡಳಿತಾಧಿಕಾರಿ ಪಟ್ಟಣ ಪಂಚಾಯಿತಿ ಔರಾದ್

Ashika S

Recent Posts

ನಾನೆಲ್ಲೂ ಓಡಿ ಹೋಗಿಲ್ಲ, ತನಿಖೆ ನಡೆಸಿ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲಿ: ಎಚ್.ಡಿ. ರೇವಣ್ಣ

ಈ ಪ್ರಕರಣದಲ್ಲಿ ಕೇಳಿಬಂದಿರುವ ಆರೋಪಗಳನ್ನು ರಾಜಕೀಯ ಪ್ರೇರಿತ ಎಂದು ಜೆಡಿಎಸ್ ನಾಯಕ ಎಚ್.ಡಿ. ರೇವಣ್ಣ, ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ…

1 min ago

ಶೈಕ್ಷಣಿಕ ಸಾಧನೆಗಿಂತ ನನ್ನ ಮೀಸೆಯಿಂದಾಗಿ ಹೆಚ್ಚು ಟ್ರೋಲ್‌ ಆಗಿದ್ದೇನೆ : ಟಾಪರ್‌ ಹುಡುಗಿ

98.50 ಪ್ರತಿಶತ ಅಂಕದೊಂದಿಗೆ ಯುಪಿ ಬೋರ್ಡ್ 10ನೇ ತರಗತಿಯ ಟಾಪರ್ ಆಗಿ ಹೊರಹೊಮ್ಮಿರುವ ಪ್ರಾಚಿ ನಿಗಮ್ ತಮ್ಮ ಮುಖದ ಕೂದಲಿನ…

19 mins ago

ತಂದೆ ಮುಖಕ್ಕೆ ಮನ ಬಂದಂತೆ ಹೊಡೆದು ಕೊಂದೆ ಬಿಟ್ಟ ಕ್ರೂರಿ ಮಗ

ಆಸ್ತಿ ಆಸೆಯಿಂದಾಗಿ ಹೆತ್ತ ತಂದೆ ಎಂದು ನೋಡದೆ ಮನಬಂದಂತೆ ಹೊಡೆದಿದ್ದಾನೆ. ಆತನ ಹೊಡೆತದ ನೋವು ತಾಳಲಾರದೆ ವೃದ್ಧ ಪ್ರಾಣಬಿಟ್ಟಿದ್ದಾರೆ. ಈ…

47 mins ago

ಮಸೀದಿ ಒಳಗೆ ನುಗ್ಗಿ ಮಕ್ಕಳ ಮುಂದೆ ದೊಣ್ಣೆಗಳಿಂದ ಹೊಡೆದು ಧರ್ಮಗುರುವಿನ ಕೊಲೆ

ಅಕ್ರಮವಾಗಿ ಮಸೀದಿ ಒಳಗೆ ನುಗ್ಗಿದ ಮೂವರು ಮಾಸ್ಕ್​ ಧರಿಸಿದ ದುಷ್ಕರ್ಮಿಗಳು ಅಮಾನುಷವಾಗಿ ದೊಣ್ಣೆಗಳಿಂದ ಹೊಡೆದು ಧರ್ಮಗುರುವನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ.…

1 hour ago

ನಾಮಪತ್ರ ಹಿಂಪಡೆದ ಕಾಂಗ್ರೆಸ್​ ಅಭ್ಯರ್ಥಿ ಅಕ್ಷಯ್​ ಕಾಂತಿ ಬಾಮ್​

ಚುನಾವಣೆಗೂ ಮುನ್ನ ಇಂದೋರ್​ನ ಕಾಂಗ್ರೆಸ್​ ಅಭ್ಯರ್ಥಿ ಅಕ್ಷಯ್​ ಕಾಂತಿ ಬಾಮ್​ ತಮ್ಮ ನಾಮಪತ್ರವನ್ನು ಹಿಂಪಡೆದಿದ್ದಾರೆ.

1 hour ago

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಜೆಡಿಎಸ್ ಪಕ್ಷದಿಂದ ಉಚ್ಛಾಟನೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಜೆಡಿಎಸ್ ಪಕ್ಷದಿಂದ ಉಚ್ಛಾಟಿಸಲಾಗಿದೆ. ಹಾಸನದಲ್ಲಿ ಅಶ್ಲೀಲ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಜೆಡಿಎಸ್…

1 hour ago