Categories: ಬೀದರ್

ಔರಾದ: ಯನಗುಂದ ಶಾಲೆಯ ವಿದ್ಯಾರ್ಥಿಗಳಿಂದ ಕೆಸರು ಸ್ನಾನ

ಔರಾದ: ‘ಮಡ್ ಬಾತ್’ ಎಂದೇ ಖ್ಯಾತಿ ಆಗಿರುವ ಮಣ್ಣಿನ ಸ್ನಾನವನ್ನು ಮಾಡುವ ಮೂಲಕ ತಾಲೂಕಿನ ಯನಗುಂದ ಕೆ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕರು, ಮಕ್ಕಳು ಹೋಳಿ ಹಬ್ಬವನ್ನು ವಿಭಿನ್ನವಾಗಿ ಆಚರಿಸಿದರು.

ರಸಾಯನಿಕಯುಕ್ತ ಬಣ್ಣಗಳಿಂದ ದೇಹದ ಮೇಲೆ ಪರಿಣಾಮ ಬೀರುತ್ತಿದ್ದು, ನೈಸರ್ಗಿಕವಾಗಿ ದೇಹಕ್ಕೆ ಮುದ ನೀಡುವ ಮಣ್ಣಿನ ಸ್ನಾನವನ್ನು ಯನಗುಂದಾ ಗ್ರಾಮದ ನಾಟಿವೈದ್ಯ ಬಸವರಾಜ ಫೂಳೆ ಆವರಣದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿತ್ತು. ಸಂತೋಷ, ಮುಸ್ತಾಪುರ ನೇತೃತ್ವದಲ್ಲಿ ವಿದ್ಯಾರ್ಥಿಗಳು ಜಮೀನಿಗೆ ಆಗಮಿಸಿ, ಕೆಸರನ್ನು ಮೈಗೆ ಸವರಿಕೊಂಡು ಸಂಭ್ರಮದೊಂದಿಗೆ ಸ್ನಾನ ಮಾಡಿದರು.

ಮಡ್ ಬಾತ್‌ಗಾಗಿಯೇ ಎರಡು ದಿನದ ಹಿಂದೆ ಹುತ್ತಿನ ಮಣ್ಣು ಸಂಗ್ರಹಿಸಿ, ನೀರಿನಲ್ಲಿ ನೆನೆಯಿಸಲಾಗಿತ್ತು. ನೆನೆಸಿದ ಮಣ್ಣನ್ನು ಮಕ್ಕಳು ತುಳಿದು ಮೃದು ಮಾಡಿದರು. ನಂತರ ಪಾದದಿಂದ ಹಿಡಿದು ತಲೆಯವರಿಗೆ ಸವರಿಕೊಂಡು ಬಿಸಿಲಲ್ಲಿ ಕುಳಿತು ಒಣಗಿಸಿಕೊಂಡರು. ಒಣಗಿದ ನಂತರ ಸ್ನಾನ ಮಾಡಿ, ಸಂತಸಪಟ್ಟರು.

ದೈಹಿಕ ಶಿಕ್ಷಕ ಮಲ್ಲಿಕಾರ್ಜುನ ಟಂಕಸಾಲೆ ಮಾತನಾಡಿ, ಪಠ್ಯದೊಂದಿಗೆ ಪತ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಧೈರ್ಯ, ಸಾಹಸ, ಛಲ, ಆತ್ಮವಿಶ್ವಾಸ, ಸೌರ್ಹಾದತೆ, ಸಹಬಾಳ್ವೆ, ಮಾನವೀಯ ಗುಣಗಳು ಬೆಳೆಸಲು ಸಹಕಾರಿ ಆಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಚಂದ್ರಶೇಖರ ಪಾಟೀಲ್‌, ಶಿವಕುಮಾರ, ಮಜಗೆ, ‘ಅಮರ ಮುಕ್ತದಾರ್, ದೈಹಿಕ ಶಿಕ್ಷಕ ಪ್ರಶಾಂತಕುಮಾರ ಪಾಟೀಲ್, ಸಂತೋಷಕುಮಾರ ಮುಸ್ತಾಪುರೆ ಸೇರಿದಂತೆ ಇತರರಿದ್ದರು.

Gayathri SG

Recent Posts

ಅಂಜಲಿ ಹತ್ಯೆ ಪ್ರಕರಣ : ಆತ್ಮಹತ್ಯೆಗೆ ಯತ್ನಿಸಿದ ಸಹೋದರಿ ಚೇತರಿಕೆ

ಅಂಜಲಿ ಅಂಬಿಗೇರ ಹತ್ಯೆ ಪ್ರಕರಣ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿದೆ. ಈ ಮಧ್ಯೆ ಸಹೋದರಿಯ ಹತ್ಯೆಯಿಂದ ಮಾನಸಿಕವಾಗಿ ಕುಗ್ಗಿ ಹೋಗಿರುವ ಯಶೋದಾ…

17 mins ago

ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿ : ಬಿಜೆಪಿ ಮಾಜಿ ಸರಪಂಚ್ ಸಾವು

ಜಮ್ಮು-ಕಾಶ್ಮೀರದಲ್ಲಿ ಇನ್ನು ಎರಡು ದಿನಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು, ಅದಕ್ಕೂ ಮುನ್ನ ನಿನ್ನೆ ಶನಿವಾರ ತಡರಾತ್ರಿ ಜಮ್ಮು ಮತ್ತು ಕಾಶ್ಮೀರದ…

28 mins ago

ವಿಮಾನ ಇಂಜಿನ್‌ನಲ್ಲಿ ಬೆಂಕಿ : ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶ

ಬೆಂಗಳೂರಿನಿಂದ ಕೊಚ್ಚಿಗೆ ಪ್ರಯಾಣಿಸುತ್ತಿದ್ದ ಏರ್‌ ಇಂಡಿಯಾ ಎಕ್ಸಪ್ರೆಸ್‌ ವಿಮಾನವು ಶನಿವಾರ ತಡರಾತ್ರಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್‌ ಮಾಡಿದೆ.…

35 mins ago

ಸಿಂಗಾಪುರದಲ್ಲಿ ಹೆಚ್ಚುತ್ತಿರುವ ಕೊರೊನಾ ಅಲೆ ಭೀತಿ : ಮಾಸ್ಕ್‌ ಧರಿಸುವಂತೆ ಆದೇಶ

ಸಿಂಗಾಪುರದಲ್ಲಿ ಕೊರೊನಾ ಸೋಂಕಿನ ಹೊಸ ಅಲೆ ಭೀತಿ ಎದುರಾಗಿದ್ದು, ದಿನದಿಂದ ದಿನಕ್ಕೆ ಕೊರೊನಾ ಸೋಂಕಿತ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಜನರಿಗೆ ಮಾಸ್ಕ್‌…

38 mins ago

ಸುರತ್ಕಲ್: ಶಬರಿಮಲೆ ಹದಿನೆಂಟು ಮೆಟ್ಟಿಲು ಹತ್ತುವ ವೇಳೆ ಹೃದಯಾಘಾತ !

ಮಗನ ಹೆಸರಲ್ಲಿ ಹೇಳಿಕೊಂಡಿದ್ದ ಹರಕೆ ತೀರಿಸಲು ಶಬರಿಮಲೆಗೆ ತೆರಳಿದ್ದ ಸುರತ್ಕಲ್ ಕಾಟಿಪಳ್ಳ ನಿವಾಸಿ ಸಂದೀಪ್‌ ಶೆಟ್ಟಿ (37) ಅವರು ಹೃದಯಾಘಾತದಿಂದ…

49 mins ago

ಸಿಎಂ ಸಿದ್ದು ತವರು ಕ್ಷೇತ್ರದಲ್ಲಿ ವಾಂತಿ-ಬೇದಿಯಿಂದ ತತ್ತರಿಸಿದ ಗ್ರಾಮಸ್ಥರು ..!

ಬಿಸಿಲಿನ ಬೇಗೆಯಿಂದ ತತ್ತರಿಸುತ್ತಿರುವ ಜನರಿಗೆ ತಂಪೆರೆಯುವ ಸಲುವಾಗಿ ಕಳೆದ ಒಂದು ವಾರಗಳಿಂದ ಮಳೆಯು ಧಾರಾಕಾರವಾಗಿ ಸುರಿಯುತ್ತಿದೆ ಇಂತಹ ಸಂದರ್ಭದಲ್ಲಿ ರಾಜ್ಯದ…

58 mins ago