News Karnataka Kannada
Sunday, May 19 2024
ಬೀದರ್

ಔರಾದ : ಜಿಪಂ ಮಾಜಿ ಸದಸ್ಯ ಬಾಬು ಸಿಂಗ್ ಬಿಜೆಪಿಗೆ ಸೇರ್ಪಡೆ

Aurad: Former ZP member Babu Singh joins BJP
Photo Credit : News Kannada

ಔರಾದ : ಕಾಂಗ್ರೆಸ್ ಮುಖಂಡ ಕಮಲನಗರ ಕ್ಷೇತ್ರದ ಜಿಲ್ಲಾ ಪಂಚಾಯಿತಿಯ ಮಾಜಿ ಸದಸ್ಯರಾದ ಬಾಬು ಸಿಂಗ್ ಹಜಾರಿ ಅವರು ತಮ್ಮ ಬೆಂಬಲಿಗ ರೊಂದಿಗೆ ಏಪ್ರಿಲ್ 23ರಂದು ಸಚಿವರಾದ ಪ್ರಭು.ಬಿ ಚವ್ಹಾಣ ಅವರ ಸಮ್ಮುಖದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾದರು.

ಇದೇ ವೇಳೆ ಪ್ರಮುಖರಾದ ವಾಮನರಾವ ಹುಂಚನಾಳೆ, ದಿಲೀಪ ಹುಂಚನಾಳೆ, ರಮೇಶ ಹುಂಚನಾಳೆ, ಧನಾಜಿ ಹುಂಚನಾಳೆ, ಶುಭಂ ಹುಂಚನಾಳೆ, ಬಾಲಾಜಿ ಹುಂಚನಾಳೆ, ವೀರಾಜಿ ಹುಂಚನಾಳೆ, ಅಶೋಕ ಹಡಪದ, ಜ್ಞಾನು ಸೆರೆ, ರಮೇಶ ಹಡಪದ, ಭರತ ಕದಮ್, ದಿಲೀಪ ಕದಮ್, ರಾಮ ಜಾಧವ, ರಾಜೇಂದ್ರ ಶ್ರೀಮಂಗಲೆ ಸೇರಿದಂತೆ ಬಾಬು ಸಿಂಗ್ ಹಜಾರಿ ಅವರ 50ಕ್ಕೂ ಹೆಚ್ಚು ಜನ ಬೆಂಬಲಿಗರು ಭಾರತೀಯ ಜನತಾ ಪಕ್ಷಕ್ಕೆ ಸೇರಿದರು.

ಹೊಸದಾಗಿ ಪಕ್ಷಕ್ಕೆ ಸೇರ್ಪಡೆಯಾದ ಕಾರ್ಯಕರ್ತರನ್ನು ಸಚಿವರು ಪಕ್ಷದ ಶಾಲು ಹೊದಿಸಿ, ಪಕ್ಷದ ಧ್ವಜವನ್ನು ನೀಡುವ ಮೂಲಕ ಆತ್ಮೀಯವಾಗಿ ಬರಮಾಡಿಕೊಂಡರು. ಈ ವೇಳೆ ಮಾತನಾಡಿದ ಬಾಬುಸಿಂಗ್ ಹಜಾರಿ ಅವರು, ಸಚಿವರಾದ ಪ್ರಭು ಚವ್ಹಾಣ ಅವರ ನೇತೃತ್ವದಲ್ಲಿ ಕಮಲನಗರ ತಾಲ್ಲೂಕಿನಲ್ಲಿ ಉತ್ತಮ ಕೆಲಸಗಳಾಗಿವೆ. ಕ್ಷೇತ್ರ ಸರ್ವಾಂಗೀಣ ಅಭಿವೃದ್ಧಿಯಾಗಬೇಕಾದರೆ ಅವರು ಮತ್ತೊಮ್ಮೆ ಶಾಸಕರಾಗಿ ಆಯ್ಕೆಯಾಗಬೇಕು. ಈ ಉದ್ದೇಶದಿದಲೇ ಬಿಜೆಪಿಗೆ ಸೇರ್ಪಡೆಯಾಗಿದ್ದೇವೆ. ಅವರನ್ನು ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸುತ್ತೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮುಖಂಡರಾದ ವಸಂತ ಬಿರಾದಾರ, ಸುರೇಶ ಭೋಸ್ಲೆ, ರಾಮಶೆಟ್ಟಿ ಪನ್ನಾಳೆ, ಸತೀಷ ಪಾಟೀಲ, ಶಿವಾನಂದ ವಡ್ಡೆ, ಶಿವು ಜುಲ್ಫೆ, ರಂಗರಾವ ಜಾಧವ, ನೀಲಕಂಠರಾವ ಕಾಂಬಳೆ, ಬಸವರಾಜ ಪಾಟೀಲ, ಬಾಲಾಜಿ ತೆಲಂಗ, ಸಚಿನ ರಾಠೋಡ, ನಾಗೇಶ ಪತ್ರೆ, ಶಿವರಾಜ ಅಲ್ಮಾಜೆ, ಬಾಲಾಜಿ ತೇಲಂಗ, ಮಲ್ಲಪ್ಪ ದಾದಾ, ವೈಜಿನಾಥ ಗುಡ್ಡಾ, ಸುಭಾಷ ಮಿರ್ಚೆ, ಮಾರುತಿ ಚವ್ಹಾಣ, ಬಂಟಿ ರಾಂಪೂರೆ, ಖಂಡೋಬಾ ಕಂಗಟೆ, ಹಣಮಂತ ಸುರನಾರ ಹಾಗೂ ಇತರರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು