ಬೀದರ್: ವ್ಯಕ್ತಿಯೊಂದಿಗೆ ಅನುಚಿತವಾಗಿ ವರ್ತಿಸಿ, ಹಣಕ್ಕೆ ಬೇಡಿಕೆ ಇಟ್ಟಿದ್ದರಿಂದ ಹುಲಸೂರ ಪೊಲೀಸ್ ಠಾಣೆ ಎಎಸ್ಐ ಶಾವುರಾಜ್ ಎಂಬುವರನ್ನು ಬುಧವಾರ ಕೆಲಸದಿಂದ ಅಮಾನತುಗೊಳಿಸಲಾಗಿದೆ.
ಹುಲಸೂರ ತಾಲ್ಲೂಕಿನ ಬೇಲೂರು ಗ್ರಾಮದ ವ್ಯಕ್ತಿಯೊಬ್ಬರು, ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಕಬ್ಬು ಸುಟ್ಟು ಹೋಗಿದ್ದರ ಬಗ್ಗೆ ದೂರು ಕೊಡಲು ಠಾಣೆಗೆ ಹೋಗಿದ್ದರು.
ಎಎಸ್ಐ ಶಾವುರಾಜ್ ಅವರು ಸ್ಥಳಕ್ಕೆ ಪಂಚನಾಮೆಗೆ ತೆರಳಿದ್ದಾಗ ದೂರುದಾರ ವ್ಯಕ್ತಿಯೊಂದಿಗೆ ಅನುಚಿತವಾಗಿ ವರ್ತಿಸಿ, ಹಣಕ್ಕೆ ಬೇಡಿಕೆ ಇಟ್ಟಿರುವುದು ಪ್ರಾಥಮಿಕ ವಿಚಾರಣೆಯಿಂದ ಗೊತ್ತಾಗಿದೆ. ವಿಡಿಯೊ ತುಣುಕುಗಳಿಂದ ಸಾಬೀತಾಗಿದೆ. ಕೆಲಸದಲ್ಲಿ ಬೇಜವಾಬ್ದಾರಿ ಹಾಗೂ ದುರ್ನಡತೆ ತೋರಿಸಿದ್ದಕ್ಕೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್. ತಿಳಿಸಿದ್ದಾರೆ.
ಯುನೈಟೆಡ್ ಅರಬ್ ಎಮಿರೇಟ್ಸ್ನ ರಾಯಲ್ ಮನೆತನದ ಸದಸ್ಯ ಶೇಖ್ ಹಝಾ ಬಿನ್ ಸುಲ್ತಾನ್ ಬಿನ್ ಜಾಯೆದ್ ಅಲ್ ನಹ್ಯಾನ್ ನಿಗೂಢವಾಗಿ…
ಮದರ ತೆರೆಸಾ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಹಾಗೂ ನವೀನ ಪಬ್ಲಿಕ್ ಸ್ಕೂಲ್ ವತಿಯಿಂದ ಬೀದರ ನಗರದ ನೌಬಾದ ಹತ್ತಿರ…
ರಾಮನಗರ ತಾಲೂಕಿನ ಕನ್ನಮಂಗಲದೊಡ್ಡಿ ಗ್ರಾಮದಲ್ಲಿ ಗೃಹಪ್ರವೇಶ ಕಾರ್ಯಕ್ರಮದ ಊಟ ಸೇವಿಸಿ 28 ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ ನಡೆದಿದೆ.
ನಾಡಿನ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವೇಶ್ವರರ ಮತ್ತು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರ ಜಯಂತಿಯನ್ನು ಜಿಲ್ಲಾಡಳಿತ ವತಿಯಿಂದ ಶುಕ್ರವಾರ ಸರಳವಾಗಿ…
ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳು ಸಾವನ್ನಪ್ಪಿರುವ ಘಟನೆ ತಾಲೂಕಿನ ಮಲ್ಲಯ್ಯನಪುರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಪ್ರಜ್ವಲ್ ಪ್ರಕರಣದಲ್ಲಿ ಪೆನ್ ಡ್ರೈವ್ ಹಿಂದಿನ ಶಕ್ತಿ ಬಹಿರಂಗವಾಗಲಿ' ಎಂದು ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ…