News Karnataka Kannada
Saturday, April 13 2024
Cricket
ಬೀದರ್

ನೀರು ಕುಡಿಯುತ್ತಿರುವ ಕಲ್ಲಿನ ನಂದಿ ಮೂರ್ತಿ!

A stone Nandi idol drinking water!
Photo Credit : News Kannada

ಬೀದರ್: ಪ್ರಪಂಚ ವಿಸ್ಮಯಗಳ ಆಗರ. ಇಲ್ಲಿ ಆಶ್ಚರ್ಯ, ವಿಸ್ಮಯ, ಪವಾಡದಂಥ ಚಕಿತಗಳು ನಡೆಯುತ್ತಲೇ ಇರುತ್ತವೆ. ಇಂಥ ವಿಸ್ಮಯಗಳೇ ಜನರಲ್ಲಿ ದೇವರ ಮೇಲಿನ ನಂಬಿಕೆ ಹೆಚ್ಚಿಸುವುದು. ಸದ್ಯ ಕಲ್ಲಿನ ನಂದಿ ಮೂರ್ತಿ ನೀರು ಕುಡಿಯುತ್ತಿರುವ ಪವಾಡವೊಂದ ಜಿಲ್ಲೆಯಲ್ಲಿ ನಡೆದಿದ್ದು, ಇದನ್ನು ಕಣ್ತುಂಬಿಕೊಳ್ಳಲು ಜನ ಸಾಗರವೇ ಹರಿದು ಬರುತ್ತಿದೆ.

ಭಾನುವಾರ ಇಂಥ ಘಟನೆ ನಡೆದಿದ್ದು ನಗರದ ಹೊರವಲಯದ ಧುಮಸಾಪುರ ಗ್ರಾಮದಲ್ಲಿ. ಹೆಣ್ಮಕ್ಕಳು ಚಮಚದಿಂದ ಕಲ್ಲಿನ ಮೂರ್ತಿಗೆ ನೀರು ಕುಡಿಸ್ತಿದ್ದಾರೆ. ಒಂದು ಹನಿಯೂ ಚೆಲ್ಲದಂತೆ ವಿಗ್ರಹ ನೀರು ಕುಡಿದಿದೆ. ಇದು ವಿಸ್ಮಯವೋ, ಪವಾಡವೋ ಗೊತ್ತಿಲ್ಲ. ಆದರೆ ಮೂರ್ತಿ ನೀರು ಕುಡಿದಿದ್ದು ಪಕ್ಕಾ. ಈ ವಿಡಿಯೋ ವೈರಲ್ ಆಗಿದೆ.

ಗ್ರಾಮದಲ್ಲಿ ಭವಾನಿ ಮಾತೆ ಮಂದಿರ ಇದೆ. ದೇವಿಯ ಮೂರ್ತಿ ಎದುರು ನಂದಿ ವಿಗ್ರಹ ಇದೆ. ದೇವಸ್ಥಾನದ ಪೂಜಾರಿಯಾದ ಶಶಿಕಲಾ ಮಠಪತಿ ಅವರು ಎಂದಿನಂತೆ ಅಭಿಷೇಕ ಮುಗಿಸಿ ತೀರ್ಥವನ್ನು ನಂದಿ ಮೂರ್ತಿ ಎದುರು ಇಟ್ಟಿದ್ದಾರೆ. ನೋಡು ನೋಡುತ್ತಿದ್ದಂತೆ ಮೂರ್ತಿ ತೀರ್ಥವನ್ನು ಕುಡಿದಿದೆ.

ಘಟನೆಯಿಂದ ಆಶ್ಚರ್ಯಗೊಂಡ ಶಶಿಕಲಾ ಅವರು ಮತ್ತೆ ಕುಡಿಸಿದರು ಕುಡಿದಿದೆ. ಮಂದಿರದ ಪಕ್ಕದ ಮನೆಯವರಿಗೆ ಕರೆದು ಅವರ ಕೈಯಿಂದ ಚಮಚದಲ್ಲಿ ನೀರು ಕುಡಿಸಿದ್ದಾರೆ. ಅದನ್ನು ಸಹ ನಂದಿ ವಿಗ್ರಹ ಕುಡಿದಿದೆ. ಈ ಸುದ್ದಿ ಗ್ರಾಮದ ಎಲ್ಲೆಡೆ ಹಬ್ಬಿತ್ತು. ಇದನ್ನು ನಂಬಿದ ಭಕ್ತರು ದೇವಸ್ಥಾನದತ್ತ ಓಡೋಡಿ ಬಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು