Categories: ಬೀದರ್

ಬೀದರ್ : ಭಯಾನಕ ಶಬ್ದಕ್ಕೆ ಬೆಚ್ಚಿಬಿದ್ದ ಜನರು,ಗ್ರಾಮದಲ್ಲಿ ಭೂಕಂಪನದ ಅನುಭವ

ಬೀದರ್ : ಜಿಲ್ಲೆಯಲ್ಲಿ ಈಗಾಗಲೇ ಅನೇಕ ಬಾರಿ ಭೂ ಕಂಪನದ  ಅನುಭವ ಜನರಿಗೆ ಆಗಿತ್ತು. ಇದರಿಂದಾಗಿ ಭಯಗೊಂಡಿದ್ದ ಜನರಲ್ಲಿ, ನಿನ್ನೆ ರಾತ್ರಿ ಮೂರು ಭಾರಿ ಭಾರೀ ಸದ್ದಿನೊಂದಿಗೆ ಉಂಟಾದಂತ ಭೂಮಿಯ ಕಂಪನದಿಂದ, ಜನರು ಬೆಚ್ಚಿಬೀಳುವಂತೆ ಆಗಿದೆ.ಮೂರು ಭಾರಿ ಶಬ್ದದೊಂದಿಗೆ ಭೂಮಿ ಕಂಪಿಸಿದಂತ ಅನುಭವ ಜನರಿಗೆ ಉಂಟಾಗಿದೆ. ಇದರಿಂದಾಗಿ ಜನರು ಭಯಭೀತಗೊಂಡು ಮನೆಯಿಂದ ಹೊರ ಓಡಿ ಬಂದು ಕೆಲ ಸಮಯ ಕಳೆಯುವಂತೆ ಆಯಿತು.

ಬೀದರ್ ಜಿಲ್ಲೆಯ ಹುಮಾನಾಬಾದ್ ತಾಲೂಕಿನ ಕೊಡಂಬಲ್ ಗ್ರಾಮದಲ್ಲಿ ಭಾರೀ ಶಬ್ದದೊಂದಿಗೆ ಭೂಮಿ ಕಂಪಿಸಿದಂತ ಅನುಭವ ನಿನ್ನೆ ಸಂಜೆ 6.30 ರಿಂದ 7.30ರ ಸಮಯದಲ್ಲಿ ಆಗಿದೆ.

ಅಂದಹಾಗೇ ಮೂರು ತಿಂಗಳ ಹಿಂದೆ ಹುಣಸನಾಳ, ಹೊಸಳ್ಳಿ ಗ್ರಾಮದಲ್ಲೂ ಈ ರೀತಿಯ ಶಬ್ದ ಕೇಳಿ ಬಂದಿತ್ತು. ಭಾರೀ ಶಬ್ದದಿಂದ ಉಂಟಾದಂತ ಭೂ ಕಂಪನದ ಅನುಭವಕ್ಕೆ, ಜನರು ಬೆಚ್ಚಿ ಬಿದ್ದಿದ್ದರು. ಆಗ ಭೂಗರ್ಭ ವಿಜ್ಞಾನಿಗಳು ಗ್ರಾಮಗಳಿಗೆ ಭೇಟಿ ನೀಡಿ, ಮಾಹಿತಿ ಪಡೆದು, ಪರಿಶೀಲನೆ ನಡೆಸಿದ್ದರು. ಈ ಬಳಿಕ ಮತ್ತೆ ಭಾರೀ ಶಬ್ದದೊಂದಿಗೆ ಭೂಮಿ ಕಂಪಿಸಿದಂತ ಅನುಭವ ಉಂಟಾಗಿದ್ದು, ಜನರನ್ನು ಭಯಭೀತಗೊಳಿಸುವಂತಾಗಿದೆ.

Swathi MG

Recent Posts

ಗುಜರಾತ್ ವಿರುದ್ಧ ಆರ್‌ಸಿಬಿಗೆ 4 ವಿಕೆಟ್‌ಗಳ ಭರ್ಜರಿ ಜಯ

ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಆರ್‌ಸಿಬಿ ಮತ್ತು ಗುಜರಾತ್ ಟೈಟನ್ಸ್ ಮಧ್ಯೆ ನಡೆದ ರೋಚಕ ಪಂದ್ಯದಲ್ಲಿ 152 ರನ್ ಗಳಿಸುವ ಮೂಲಕ ಆರ್‌ಸಿಬಿ…

4 hours ago

147 ರನ್​​ಗೆ ಆಲೌಟ್ ಆದ ಗುಜರಾತ್​ ಟೈಟನ್ಸ್​ : ಆರ್​ಸಿಬಿ ವೇಗಿಗಳ ದಾಖಲೆ ಪ್ರದರ್ಶನ

ಚಿನ್ನಸ್ವಾಮಿ​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರುವ ರೋಚಕ ಪಂದ್ಯದಲ್ಲಿ ಗುಜರಾತ್​ ಟೈಟನ್ಸ್​ ತಂಡವನ್ನು ರಾಯಲ್​ ಚಾಲೆಂಜರ್ಸ್​ ಬೆಂಗಳೂರು 19.3 ಓವರ್​ಗಳಲ್ಲಿ 147…

5 hours ago

ರಾಜೀನಾಮೆ ನೀಡಿದ ಪೇಟಿಎಂ ಸಿಒಒ ಭವೇಶ್ ಗುಪ್ತಾ

ಪೇಟಿಎಂನ ಮಾತೃ ಸಂಸ್ಥೆಯಾಗಿರುವ ಒನ್ 97 ಕಮ್ಯುನಿಕೇಷನ್ಸ್ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವೇಶ್ ಗುಪ್ತಾ ಅವರು ತಮ್ಮ ಹುದ್ದೆಗೆ…

5 hours ago

ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಶಾಸಕ ಎಂ.ಆರ್ ಮಂಜುನಾಥ್ ಭೇಟಿ

ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸತ್ತೇಗಾಲ ವಿವಿಧಡೆ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಶಾಸಕ ಎಂ.ಆರ್ ಮಂಜುನಾಥ್ ಭೇಟಿ ನೀಡಿ ಪರಿಶೀಲನೆ…

6 hours ago

ಬೆಂಗಾವಲು ಪಡೆಯ ವಾಹನದ ಮೇಲೆ ಭಯೋತ್ಪಾದಕರ ದಾಳಿ: ಐವರು ಅಧಿಕಾರಿಗಳಿಗೆ ಗಾಯ

ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಇಂದು (ಶನಿವಾರ) ಭಾರತೀಯ ವಾಯುಪಡೆ ಬೆಂಗಾವಲು ಪಡೆ ವಾಹನದ ಮೇಲೆ ಭಯೋತ್ಪಾದಕರು ದಾಳಿ…

6 hours ago

ಬಿ.ವೈ ರಾಘವೇಂದ್ರ ಪರ ಮತಯಾಚನೆ ನಡೆಸಿದ ವೇದವ್ಯಾಸ್ ಕಾಮತ್

ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಿದ್ದಾಪುರದಲ್ಲಿ ನಡೆದ ಬಿಜೆಪಿಯ ಬೃಹತ್ ರೋಡ್ ಶೋ ನಲ್ಲಿ ಮಂಗಳೂರು ನಗರ ದಕ್ಷಿಣದ ಶಾಸಕರಾದ ವೇದವ್ಯಾಸ್…

6 hours ago